More

    ಅನಿವಾರ್ಯವಾಗಿ ಬೆಂಗಳೂರಿಗೆ ಬಂದಿಳಿದ ವಿಮಾನ, ತೆರೆದುಕೊಳ್ಳದ ಬಾಗಿಲು, ನಟಿ ರೋಜಾ ಸೇರಿ 70ಕ್ಕೂ ಅಧಿಕ ಪ್ರಯಾಣಿಕರ ಪರದಾಟ!

    ಬೆಂಗಳೂರು: ಇತ್ತೀಚೆಗೆ ಹೆಲಿಕಾಪ್ಟರ್ ದುರಂತ ಸಂಭವಿಸಿ ಸೇನಾ ಮುಖ್ಯಸ್ಥರು ಸೇರಿ 13 ಮಂದಿ ಸಾವಿಗೀಡಾದ ಬಳಿಕ ಮತ್ತೆ ಮತ್ತೆ ವೈಮಾನಿಕ ಪ್ರಯಾಣದಲ್ಲಿ ತೊಂದರೆ ಉಂಟಾಗುತ್ತಿರುವ ಪ್ರಕರಣಗಳು ಒಂದರ ಹಿಂದೊಂದರಂತೆ ಸಂಭವಿಸುತ್ತಿವೆ.

    ಮೂರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಟ್ಟವಾಗಿ ಆವರಿಸಿದ್ದ ಮಂಜಿನ ಕಾರಣದಿಂದಾಗಿ ವಿಮಾನ ಲ್ಯಾಂಡಿಂಗ್ ಸಾಧ್ಯವಾಗದೆ ಸುಮಾರು ಅರ್ಧ ಗಂಟೆ ಕಾಲ ಆಗಸದಲ್ಲೇ ಸುತ್ತಾಡಿ ಬಳಿಕ ಲ್ಯಾಂಡಿಂಗ್ ಆಗಿತ್ತು.

    ಇದನ್ನೂ ಓದಿ: ಹತ್ತು ವರ್ಷದ ಮಗನನ್ನು ಸಂಪ್​ಗೆ ಎಸೆದು ಕೊಂದು, ಆತ್ಮಹತ್ಯೆ ಮಾಡಿಕೊಂಡ ತಂದೆ…

    ಇಂದು ಆಂಧ್ರಪ್ರದೇಶದಲ್ಲಿ ಚಿತ್ರನಟಿ, ವೈಎಸ್​​ಆರ್​ ಕಾಂಗ್ರೆಸ್ ಪಕ್ಷದ ಶಾಸಕಿ ರೋಜಾ, ಟಿಡಿಪಿ ಮುಖಂಡ ಯನಮಾಲಾ ರಾಮಕೃಷ್ಣುಡು ಸೇರಿ 70 ಮಂದಿ ಇದ್ದ ವಿಮಾನ ತಾಂತ್ರಿಕ ಅಡಚಣೆ ಕಾರಣ ಅನಿವಾರ್ಯವಾಗಿ ಬೆಂಗಳೂರಿಗೆ ಬಂದಿಳಿದಿದೆ. ರಾಜಮಹೇಂದ್ರವರಂನಿಂದ ತಿರುಪತಿಗೆ ಹೊರಟಿದ್ದ ಈ ವಿಮಾನ ಹಾರಾಟದಲ್ಲಿರುವಾಗಲೇ ತಾಂತ್ರಿಕ ಅಡಚಣೆ ಎದುರಿಸಿತ್ತು.

    ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ? ಇಲ್ಲಿದೆ ವಿವರ..

    ಈ ಇಂಡಿಗೊ ಫ್ಲೈಟ್ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೆನಿಗುಂಟದಲ್ಲಿ ಲ್ಯಾಂಡ್​ ಆಗಬೇಕಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ಇದನ್ನು ಬೆಂಗಳೂರಿನತ್ತ ಕಳಿಸಿ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.

    ಇನ್ನು ಈ ಅಡಚಣೆ ಕುರಿತು ವೈಮಾನಿಕ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ ವಿಮಾನ ಬೆಂಗಳೂರಿನಲ್ಲಿ ಸೇಫ್​ ಆಗಿ ಲ್ಯಾಂಡಿಂಗ್ ಆದರೂ ಅದರ ಬಾಗಿಲು ತೆರೆದುಕೊಳ್ಳದೆ, ಪ್ರಯಾಣಿಕರು ಪರದಾಡುವಂತಾಗಿತ್ತು ಎನ್ನಲಾಗಿದೆ.

    ಇದು ‘ಎಣ್ಣೆ-ಏಟು’: ಪಾನಮತ್ತ ಚಾಲಕ, ಕೋಪೋದ್ರಿಕ್ತ ಮಾಲೀಕ; ಮುಂದಾಗಿದ್ದೆಲ್ಲ ವೈರಲ್!

    ಅನೈತಿಕ ಸಂಬಂಧ, ಗಂಡನೇ ಕೊಂದ!?; ಜೋಡಿ ಕೊಲೆ ಪ್ರಕರಣ, ಒಬ್ಬನ ಬಂಧನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts