More

    ಪೌರಕಾರ್ವಿುಕರಿಗೆ ಫ್ಲ್ಯಾಟ್​ಗಳ ಹಕ್ಕುಪತ್ರ ವಿತರಣೆ

    ಬೆಂಗಳೂರು: ಪಾಲಿಕೆಯ ಕಾಯಂ ಪೌರಕಾರ್ವಿುಕರಿಗೆ ಗೃಹಭಾಗ್ಯ ಯೋಜನೆಯಡಿ 272 ಮನೆಗಳನ್ನು ಉಚಿತವಾಗಿ ಹಂಚಿಕೆ ಮಾಡಲಾ ಗುತ್ತಿದೆ. ಮಲ್ಲೇಶ್ವರದ ಐಪಿಪಿ ತರಬೇತಿ ಕೇಂದ್ರದಲ್ಲಿ ಮಂಗಳವಾರ 60 ಸ್ವಚ್ಛತಾ ಕಾರ್ವಿುಕರಿಗೆ ಮೇಯರ್ ಗೌತಮ್ುಮಾರ್ ಹಕ್ಕುಪತ್ರ ವಿತರಿಸಿದರು.

    ನಂತರ ಮಾತನಾಡಿದ ಅವರು, ಆಲೂರಿನಲ್ಲಿ ಬಿಡಿಎ ನಿರ್ವಿುಸಿರುವ ಅಪಾರ್ಟ್​ವೆುಂಟ್​ಗಳಲ್ಲಿ ಫ್ಲ್ಯಾಟ್ ಹಂಚಿಕೆ ಮಾಡಲಾಗುತ್ತಿದೆ. ಒಟ್ಟು 400 ಕಾರ್ವಿುಕರಿಗೆ ಮನೆಗಳ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 272 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇವರ ಪೈಕಿ 60 ಕಾರ್ವಿುಕರಿಗೆ ಹಕ್ಕುಪತ್ರ ನೀಡಲಾಗುತ್ತಿದೆ ಎಂದರು. ಸರ್ಕಾರ ಪೌರಕಾರ್ವಿುಕ ಗೃಹಭಾಗ್ಯ ಯೋಜನೆ ಆರಂಭಿಸಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವ ಪೌರಕಾರ್ವಿುಕರು, ಲೋಡರ್ಸ್, ಕ್ಲೀನರ್ಸ್​ಗಳಿಗೆ ಮನೆ ನಿರ್ವಿುಸಿಕೊಡುತ್ತಿದೆ. ಬಿಡಿಎ ನಿರ್ವಿುಸಿರುವ ಫ್ಲ್ಯಾಟ್​ಗಳ ಬೆಲೆ 9 ಲಕ್ಷ ರೂ. ಆಗಿದ್ದು, ಸರ್ಕಾರ 6 ಲಕ್ಷ ರೂ. ಮತ್ತು ಪಾಲಿಕೆ 3 ಲಕ್ಷ ರೂ. ಪಾವತಿಸಿ ಉಚಿತವಾಗಿ ಮನೆ ನೀಡಲಾಗುತ್ತಿದೆ ಎಂದರು.

    ಉಪಮೇಯರ್ ರಾಮಮೋಹನ ರಾಜು, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಮಂಜುನಾಥರಾಜು, ವಲಯ ವಿಶೇಷ ಆಯುಕ್ತ ಬಸವರಾಜು, ಜಂಟಿ ಆಯುಕ್ತ ಚಿದಾನಂದ್ ಮತ್ತಿತರರು ಉಪಸ್ಥಿತರಿದ್ದರು.

    ಯೋಜನೆಗೆ ಅರ್ಹತೆಗಳು

    ಸರ್ಕಾರಿ ಮಾರ್ಗಸೂಚಿ ಅನ್ವಯ ಕಾಯಂ ಪೌರಕಾರ್ವಿುಕರು 10 ರಿಂದ 15 ವರ್ಷಗಳವರೆಗೆ ಸೇವೆ ಸಲ್ಲಿಸಿರಬೇಕು. ಪೌರ ಕಾರ್ವಿುಕ ಕುಟುಂಬಕ್ಕೆ ಸ್ವಂತ ಮನೆ ಇರಬಾರದು. ಬಾಡಿಗೆಮನೆಯಲ್ಲಿ ವಾಸಿಸುತ್ತಿರುವವರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗಿದೆ.

    ಗುಣಮಟ್ಟದ್ದಲ್ಲವೆಂಬ ಆರೋಪ

    ನಗರದ ಹಲವು ಕಡೆ ಬಿಡಿಎ ವಸತಿ ಸಮುಚ್ಚಯ ನಿರ್ವಿುಸಿ 9 ಲಕ್ಷ ರೂ. ನಿಂದ 35 ಲಕ್ಷ ರೂ.ವರೆಗೆ ಫ್ಲ್ಯಾಟ್ ಮಾರಾಟ ಮಾಡುತ್ತಿದೆ. ಆಲೂರಿನಲ್ಲಿ ಮಾರಾಟವಾಗದೆ ಉಳಿದ ಮನೆಗಳನ್ನು ಪೌರಕಾರ್ವಿುಕರಿಗೆ ಉಚಿತವಾಗಿ ನೀಡಲು ಸರ್ಕಾರ ಮುಂದಾಗಿದೆ. ಈ ಫ್ಲ್ಯಾಟ್​ಗಳು ಗುಣಮಟ್ಟದ್ದಾಗಿಲ್ಲ ಎಂದು ಕೆಲವು ಕಾರ್ವಿುಕರು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts