More

    ಅಮಾನಿಕೆರೆ ಅಂಗಳದಲ್ಲಿ 213 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭ

    ತುಮಕೂರು : ನಗರದ ಅಮಾನಿಕೆರೆಯ ಅಂಗಳದಲ್ಲಿ 213 ಅಡಿ ಎತ್ತರದ ರಾಷ್ಟ್ರಧ್ವಜಸ್ತಂಭ ಉದ್ಘಾಟನೆಗೆ ಸಿದ್ಧಗೊಂಡಿದೆ.  ಸ್ಮಾರ್ಟ್‌ಸಿಟಿ ವತಿಯಿಂದ ಈ ಬೃಹತ್ ಧ್ವಜಸ್ತಂಭ ನಿರ್ಮಿಸಿದ್ದು, ಈ ಧ್ವಜಸ್ತಂಭವು ಗಣರಾಜ್ಯೋತ್ಸವದ ವೇಳೆಗೆ ರಾಷ್ಟ್ರಪ್ರೇಮದ ಸಂಕೇತವಾಗಿ ತಲೆ ಎತ್ತಲಿದೆ. 91 ಲಕ್ಷ ರೂ., ವೆಚ್ಚದ ಈ ಬೃಹತ್ ಸ್ತಂಭವು ಬಜಾಜ್ ಎಲೆಕ್ಟ್ರಿಕಲ್ಸ್‌ನದ್ದಾಗಿದ್ದು, ಚಿತ್ರದುರ್ಗದ ಗುತ್ತಿಗೆದಾರ ನಾಗರಾಜ್ ಕಂಪನಿಯು ಧ್ವಜಸ್ತಂಭ ಅಳವಡಿಸಿದೆ.

    72 ಅಡಿ ಉದ್ದದ, 48 ಅಡಿ ಅಗಲದ ಬೃಹತ್ ರಾಷ್ಟ್ರಧ್ವಜವು 24 ಗಂಟೆಯೂ ಹಾರಾಡಲಿದೆ. ರಾತ್ರಿ ವೇಳೆಯೂ ಧ್ವಜದ ಬಳಿ ಬೆಳಕು ಕ್ಷೀಣಿಸದಂತೆ ನೋಡಿಕೊಳ್ಳಲು ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಧ್ವಜಸ್ತಂಭಕ್ಕೆ ರಾಷ್ಟ್ರಧ್ವಜ ಅಳವಡಿಸುವ ತಾಲೀಮು ನಡೆಸಲಾಯಿತು. ಸ್ಮಾರ್ಟ್‌ಸಿಟಿ ಇಇ ಫಣಿರಾಜ್, ಎಇಇ ರಶ್ಮಿ ಪರಿಶೀಲಿಸಿದರು.

    ‘ಏವಿಯೇಷನ್ ದೀಪ’ : ಧ್ವಜಸ್ತಂಭವು 213 ಅಡಿ ಎತ್ತರ ಇರುವುದರಿಂದ ವಿಮಾನ ಹಾರಾಟ ವೇಳೆ ಕಾಣುವಂತೆ ‘ಏವಿಯೇಷನ್ ದೀಪ’ ಸಹ ಅಳವಡಿಸಲಾಗುವುದು. ಇನ್ಮುಂದೆ ಅಮಾನಿಕೆರೆ ಅಂಗಳದಲ್ಲಿ 24 ಗಂಟೆ ಬೃಹತ್ ರಾಷ್ಟ್ರಧ್ವಜ ಹಾರಾಡಲಿದೆ. ಧ್ವಜಸ್ತಂಭದ ಸುತ್ತ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts