More

    ಮತಗಟ್ಟೆ ಸಮೀಕ್ಷೆಯಲ್ಲಿ ಅಸ್ಪಷ್ಟ ಚಿತ್ರಣ: ರಾಜಸ್ಥಾನದಲ್ಲಿ ಕೇಸರಿ ಕಲರವ; ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣದಲ್ಲಿ ಕೈ ಮೇಲು ಸಂಭವ

    ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ಈ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ಮತಗಟ್ಟೆ ಸಮೀಕ್ಷೆ (ಎಕ್ಸಿಟ್ ಪೋಲ್) ಫಲಿತಾಂಶಗಳನ್ನು ಹಲವಾರು ಮಾಧ್ಯಮಗಳು ಗುರುವಾರ ಪ್ರಕಟಿಸಿವೆ. ಆದರೆ, ಎಲ್ಲ ಸಮೀಕ್ಷೆಗಳು ಒಮ್ಮತದ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಒಟ್ಟಾರೆಯಾಗಿ ನೋಡಿದರೆ ಅಸ್ಪಷ್ಟತೆ ಕಂಡುಬಂದಿದೆ.

    ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಇರುವುದನ್ನು ಸಮೀಕ್ಷೆಗಳು ತೋರಿಸಿಕೊಟ್ಟಿವೆ. ರಾಜಸ್ಥಾನದಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದು ಮುನ್ಸೂಚನೆ ನೀಡಿವೆ. ಮಧ್ಯಪ್ರದೇಶದಲ್ಲಿ ಬಿಜೆಪಿ=ಕಾಂಗ್ರೆಸ್​ ನಡುವೆ ತೀವ್ರ ಠಕ್ಕರ್​ ಇರುವುದನ್ನು ಸೂಚಿಸಿವೆ. ಮಿಜೋರಾಂನಲ್ಲಿ ಜೋರಾಮ್ ಪೀಪಲ್ಸ್ ಮೂವ್​ಮೆಂಟ್​ ಹಾಗೂ ಮಿಜೋ ನ್ಯಾಷನಲ್ ಫ್ರಂಟ್ ನಡುವೆ ಪೈಪೋಟಿ ಇರುವುದನ್ನು ಬಿಂಬಿಸಿವೆ.

    ನಾಲ್ಕು ರಾಜ್ಯಗಳಿಗೆ ಈ ಮುಂಚೆಯೇ ಮತದಾನ ಜರುಗಿದ್ದರೂ ಗುರುವಾರ (ನ. 30) ತೆಲಂಗಾಣದಲ್ಲಿ ಚುನಾವಣೆ ನಡೆದ ಕಾರಣ, ಸಂಜೆ 5.30ರ ನಂತರವೇ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳನ್ನು ಪ್ರಕಟಿಸಲು ಚುನಾವಣೆ ಆಯೋಗ ಅವಕಾಶ ಕೊಟ್ಟಿತ್ತು.

    ಕಾಂಗ್ರೆಸ್ ಪಕ್ಷವು ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ. ಕಳೆದ 2018 ರ ಚುನಾವಣೆಯಲ್ಲಿ, ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು, ಆದರೆ 2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ಬಂಡಾಯವು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದಿತು. ತೆಲಂಗಾಣ ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರ ಹ್ಯಾಟ್ರಿಕ್ ತಡೆಯಲು ಕಾಂಗ್ರೆಸ್ ಫೈಟ್​ ನೀಡುತ್ತಿದೆ.

    ವಿವಿಧ ಮತಗಟ್ಟೆಗಳ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಜಯದ ತೂಗುಯ್ಯಾಲೆ

    ವಿವಿಧ ಮತಗಟ್ಟೆ ಸಮೀಕ್ಷೆಗಳ ಅಂದಾಜು: ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ

    ಮತಗಟ್ಟೆ ಸಮೀಕ್ಷೆ ಅಂದಾಜು: ಮಣಿಪುರದಲ್ಲಿ ಝಡ್​ಪಿಎಂಗೆ ಎಂಎನ್​ಎಫ್​ ತೀವ್ರ ಪ್ರತಿರೋಧ

    ವಿವಿಧ ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರ: ಛತ್ತೀಸ್​ಗಢದಲ್ಲಿ ಮತ್ತೆ ಕಾಂಗ್ರೆಸ್​ಗೆ ಅಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts