More

    ಶಾಸಕರ ಲೆಕ್ಕಾಚಾರದಲ್ಲಿ ಗೆಹ್ಲೋಟ್​ಗೆ ಮೇಲುಗೈ, ಸಚಿನ್​ ಪೈಲಟ್​ಗೆ ಹಿನ್ನಡೆ

    ನವದೆಹಲಿ: ರಾಜಸ್ಥಾನದ ರಾಜಕೀಯ ನಾಟಕ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸೋಮವಾರ ಬೆಳಗ್ಗೆ ಕರೆಯಲಾಗಿದ್ದ ಕಾಂಗ್ರಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ 107 ಶಾಸಕರು ಪಾಲ್ಗೊಂಡಿದ್ದರು ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಅವರ ಮಾಧ್ಯಮ ಕಾರ್ಯದರ್ಶಿ ಹೇಳಿದ್ದಾರೆ.

    ಆದರೆ, ಮೂಲಗಳ ಪ್ರಕಾರ 107 ಕಾಂಗ್ರೆಸ್​ ಶಾಸಕರ ಪೈಕಿ 97 ಶಾಸಕರು ಮಾತ್ರ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಉಳಿದವರು ಪಕ್ಷೇತರ ಶಾಸಕರು ಮತ್ತಿತರ ಪಕ್ಷಗಳ ಶಾಸಕರು ಎನ್ನಲಾಗಿದೆ. ಒಟ್ಟಾರೆ ಹೇಳುವುದಾದರೆ ರಾಜಸ್ಥಾನದ ರಾಜಕೀಯ ನಾಟಕದ ಪ್ರಸಕ್ತ ಸುತ್ತಿನಲ್ಲಿ ಗೆಹ್ಲೋಟ್​ಗೆ ಗೆಲುವಾಗಿದ್ದು, ಸಚಿನ್​ ಪೈಲಟ್​ಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ವಾಪಸ್‌ ಬರುವೆ ಎಂದಿದ್ದ ಬಿಜೆಪಿ ಶಾಸಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

    ಎಚ್ಚರಿಕೆ ಸಡಿಲಿಸದ ಕಾಂಗ್ರೆಸ್​: ತನ್ನ ಬಳಿ ಬಹುಮತಕ್ಕೆ ಅಗತ್ಯವಾದಷ್ಟು ಶಾಸಕರ ಸಂಖ್ಯೆ ಇದೆ ಎಂದು ಕಾಂಗ್ರೆಸ್​ ಹೇಳಿಕೊಳ್ಳುತ್ತಿದೆ. ಆದರೂ, ಎಚ್ಚರಿಕೆಯನ್ನು ಸಡಿಲಿಸದಿರಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅದು, ಇನ್ನೂ ಸಮಯ ಮೀರಿಲ್ಲ. ಮಾತುಕತೆ ಮೂಲಕ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬಗೆಹರಿಸಿಕೊಳ್ಳೋಣ. ಬನ್ನಿ ಎಂದು ಸಚಿನ್​ ಪೈಲಟ್​ ಅವರನ್ನು ಆಹ್ವಾನಿಸುತ್ತಲೇ ಇದ್ದಾರೆ.

    ಆದರೆ, ಇದಾವುದಕ್ಕೂ ಕಿವಿ ಮೇಲೆ ಹಾಕಿಕೊಳ್ಳದ ಸಚಿನ್​ ಪೈಲಟ್​, ಸೋಮವಾರದ ಶಾಸಕಾಂಗ ಪಕ್ಷದ ಸಭೆಯಲ್ಲಿ 107 ಶಾಸಕರು ಪಾಲ್ಗೊಂಡಿದ್ದರು ಎಂಬುದೇ ಸುಳ್ಳು ಎಂದು ಹೇಳಿದ್ದಾರೆ. ಒಂದು ಮೂಲದ ಪ್ರಕಾರ 107 ಕಾಂಗ್ರೆಸ್​ ಶಾಸಕರ ಪೈಕಿ 97 ಶಾಸಕರು ಮಾತ್ರ ಸಭೆಯಲ್ಲಿದ್ದರು. ಇಬ್ಬರು ಸಚಿವರು ಕೂಡ ಗೈರಾಗಿದ್ದರು​ ಎನ್ನಲಾಗಿದೆ.

    PHOTOS: ಕಾಸ್ಮೆಟಿಕ್ ಸರ್ಜರಿ ಎಫೆಕ್ಟ್​: ಕಾರ್ಟೂನ್ ಕ್ರಿಯೇಚರ್ ಆಗಿಬಿಟ್ಟಳು ಸುಂದರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts