More

    ನಾನು ಸಿಎಂ ಹುದ್ದೆ ತೊರೆಯಲು ಸಿದ್ಧ ಆದರೆ…; ವಿರೋಧಿ ಸಚಿನ್ ಪೈಲಟ್​ಗೆ ಅಶೋಕ್ ಗೆಹ್ಲೋಟ್ ಪರೋಕ್ಷ ಟಾಂಗ್

    ನವದೆಹಲಿ: ತಮ್ಮ ಬದ್ಧವೈರಿ ಸಚಿನ್​ ಪೈಲಟ್ ವಿರುದ್ಧದ ಮುಸುಕಿನ ಗುದ್ದಾಟ ಮುಂದುವರೆಸಿರುವ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ಈಗ ಮತ್ತೊಮ್ಮೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಕಾಂಗ್ರೆಸ್​ಗೆ ಮಗ್ಗಲ ಮುಳ್ಳಾಗುವ ಸಾಧ್ಯತೆ ಇದೆ.

    ನವದೆಹಲಿಯಲ್ಲಿರುವ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, ನಾನು ಸಿಎಂ ಪದವಿಯನ್ನು ತೊರೆಯಲು ಸಿದ್ಧನಿದ್ದೇನೆ. ಆದರೆ, ಆ ಪದವಿ ನನ್ನನ್ನು ಬಿಡಲು ಸಿದ್ದವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿರೋಧಿ ಸಚಿನ್​ ಪೈಲಟ್​ಗೆ ಟಾಂಗ್​ ಕೊಟ್ಟಿದ್ದಾರೆ.

    ನನ್ನನ್ನು ಬಿಡಲು ಸಿದ್ದವಿಲ್ಲ

    ಇತ್ತೀಚಿಗೆ ನನ್ನನ್ನು ಮಹಿಳಾ ಕಾರ್ಯಕರ್ತರೊಬ್ಬರು ಭೇಟಿಯಾಗಿದ್ದರು, ಅವರು ನೀವೇ ನಾಲ್ಕನೇ ಬಾರಿಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರೆ ಚೆಂದ ಎಂದು ಹೇಳಿದ್ದಾರೆ. ಆದರೆ, ನಾನು ಸಿಎಂ ಪದವಿಯನ್ನು ತೊರೆಯಲು ಸಿದ್ಧನಿದ್ದೇನೆ. ಆದರೆ, ಆ ಪದವಿ ನನ್ನನ್ನು ಬಿಡಲು ಸಿದ್ದವಿಲ್ಲ ಎಂದು ಆ ಮಹಿಳೆಗೆ ಹೇಳಿದ್ದೇನೆ.

    Ashok vs Sachin

    ಪಕ್ಷ ನನ್ನಲ್ಲಿರುವ ವಿಶೇಷತೆಗಳನ್ನು ಗುರುತಿಸಿ ಮುರು ಬಾರಿ ರಾಜ್ಯವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟಿದೆ. ಪಕ್ಷದ ಹೈಕಮಾಂಡ್​ ತೆಗೆದುಕೊಳ್ಳುವ ನಿರ್ಧಾರ ಎಲ್ಲರಿಗೂ ಒಪ್ಪಿಗೆಯಾಗುತ್ತದೆ. ಬಿಜೆಪಿ ಕುತಂತ್ರ ರಾಜಕಾರಣದಿಂದಾಗಿ ಕಾಂಗ್ರೆಸ್​ನಲ್ಲಿ ಒಳಜಗಳವಾಗುತ್ತಿದೆ ಹೊರತು ಬೇರೇನಿಲ್ಲ. ಕಾಂಗ್ರೆಸ್​ನಲ್ಲಿ ಒಗ್ಗಟ್ಟಿದ್ದು, ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅದು ಸಾಬೀತಾಗಲಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ; ಮನೀಶ್​ ಸಿಸೋಡಿಯಾ ನ್ಯಾಯಾಂಗ ಬಂಧನ ನವೆಂಬರ್ 22ರವರೆಗೆ ವಿಸ್ತರಣೆ

    ಮಗ್ಗಲ ಮುಳ್ಳಾಗುವ ಸಾಧ್ಯತೆ

    2020ರಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಬಂಡಾಯವೆದಿದ್ದ ಸಚಿನ್​ ಪೈಲಟ್​ ಹಾಗೂ ಬೆಂಬಲಿಗ ಶಾಸಕರನ್ನು ಸಮಾಧಾನ ಪಡಿಸುವಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಯಶಸ್ವಿಯಾಗಿತ್ತು. ಚುನಾವಣೆಯ ಹೊಸ್ತಿಲಲ್ಲೇ ಅಶೋಕ್ ಗೆಹ್ಲೋಟ್​ ತಮ್ಮ ಬದ್ದವೈರಿ ಸಚಿನ್​ ಪೈಲಟ್​ ಹೆಸರೇಳದೆ ಪರೋಕ್ಷವಾಗಿ ಟಾಂಗ್​ ಕೊಟ್ಟಿರುವುದು ಕಾಂಗ್ರೆಸ್​ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

    200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್​ 25 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ವಿಪಕ್ಷ ಬಿಜೆಪಿ 41 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts