More

    ಅಸ್ಸಾಂ ಅನಿಲ ಬಾವಿಯಲ್ಲಿ 17 ದಿನಗಳಾದರೂ ನಂದದ ಬೆಂಕಿ; 25 ಕೋಟಿ ರೂ. ದಂಡ ವಿಧಿಸಿದ ಹಸಿರು ನ್ಯಾಯಾಧಿಕರಣ

    ನವದೆಹಲಿ: ಅಸ್ಸಾಂನ ಬಾಗ್​ಜಾನ್​ನಲ್ಲಿರುವ ಅನಿಲ ಬಾವಿಯ ಬೆಂಕಿಯನ್ನು ನಂದಿಸದ, ಆ ಮೂಲಕ ಪರಿಸಕ್ಕೆ ಭಾರಿ ಹಾನಿ ಟಂಉ ಮಾಡಿರುವ ಕಾರಣ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಭಾರತೀಯ ತೈಲ ನಿಗಮಕ್ಕೆ 25 ಕೋಟಿ ರೂ. ಗಳ ಮಧ್ಯಂತರ ದಂಡ ವಿಧಿಸಿದೆ.

    ನ್ಯಾಯಮೂರ್ತಿ ಎಸ್.​ಪಿ. ವಾಂಗ್ಡಿ, ತಜ್ಞ ಸದಸ್ಯ ಸಿದ್ಧಾಂತ ದಾಸ್​ ಅವರಿದ್ದ ಪೀಠ ಈ ಆದೇಶ ನೀಡಿದೆ. ಜತೆಗೆ, ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಬಿ.ಪಿ. ಕಾಟಕೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, 30 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದೆ.

    ಇದನ್ನೂ ಓದಿ; ಹೊತ್ತಿ ಉರಿಯುತ್ತಿರುವ ತೈಲ ಬಾವಿ ಬೆಂಕಿ ನಂದಿಸಲು ಒಂದು ತಿಂಗಳೇ ಬೇಕು….! 

    ಭಾರತೀಯ ತೈಲ ನಿಗಮದ ನೈಸರ್ಗಿಕ ಅನಿಲ ಬಾವಿಯು ಕಳೆದ 17 ದಿನಗಳಿಂದ ಹೊತ್ತಿ ಉರಿಯುತ್ತಿದೆ. ಮೇ 27ರಿಂದಲೇ ಅಲ್ಲಿ ಅನಿಲ ಸೋರಿಕೆಯಾಗುತ್ತಿತ್ತು. ಭಾರಿ ಪರಿಶ್ರಮದ ಬಳಿಕವೂ ಸೋರಿಕೆ ನಿಯಂತ್ರಣಕ್ಕೆ ಬಾರದೇ, ಮೇ 9ರಂದು ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

    ಬೆಂಕಿ ನಂದಿಸಲು ವಿಫಲವಾದ ಹಾಗೂ ಪರಿಸರಕ್ಕೆ ಭಾರಿ ಹಾನಿ ಉಂಟು ಮಾಡಿದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ಈ ಹಣವನ್ನು ತಿನ್​ಸುಕಿಯಾ ಜಿಲ್ಲಾಧಿಕಾರಿಗಳ ಬಳಿ ಠೇವಣಿ ಇಡುವಂತೆ ಸೂಚಿಸಿದೆ. ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ, ಭಾರತೀಯ ತೈಲ ನಿಗಮ ಹಾಗೂ ಇತರರರಿಗೆ ನೋಟಿಸ್​ ಜಾರಿಗೊಳಿಸಿದೆ.

    ಇದನ್ನೂ ಓದಿ; ಭಾರತದ್ದೇ ದಿಗ್ವಿಜಯ; ಗಲ್ವಾನ್​ನಿಂದ ಗೊಗ್ರಾವರೆಗೆ ವಾಸ್ತವ ಗಡಿರೇಖೆಯಿಂದ ಚೀನಿಯರನ್ನು ಹೊರಗಟ್ಟಿದ ಸೇನೆ

    ಬೆಂಕಿಯಿಂದಾಗಿ ಅಪಾರ ಆಸ್ತಿ ನಾಶವಾಗಿದೆ. ಈ ಪ್ರದೇಶ ರಾಷ್ಟ್ರೀಯ ಅಭಯಾರಣ್ಯಕ್ಕೆ ಹತ್ತಿರವಿದ್ದು, ಕಾಡು ನಾಶವಾಗಿದೆ. ಜಲಚರಗಳು ಹಾಗೂ ವನ್ಯಜೀವಿಗಳು ಪ್ರಾಣ ಕಳೆದುಕೊಂಡಿವೆ. ಸುತ್ತಲಿನ ಗ್ರಾಮಗಳ ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ.
    ಬಾಗ್​ಜಾನ್​ ಪ್ರದೇಶದಲ್ಲಿ ಒಟ್ಟು 22 ಬಾವಿಗಳಿದ್ದು, 18ರಲ್ಲಿ ಕಚ್ಚಾತೈಲ ಹಾಗೂ ನಾಲ್ಕರಲ್ಲಿ ನೈಸರ್ಗಿಕ ಅನಿಲ ಉತ್ಪಾದನೆ ಮಾಡಲಾಗುತ್ತಿದೆ.

    ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts