ಬೆಂಗಳೂರು: ಹೊಸೂರು ರಸ್ತೆ ಆಡುಗೋಡಿ ಸಮೀಪ ನಮ್ಮ ಮೆಟ್ರೋಗೆ ಸೇರಿದ ಗೋದಾಮುಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಆಸ್ತಿ ಹಾನಿಯಾಗಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಆಡುಗೋಡಿ ಮೈಕೋ ಕಾರ್ಖಾನೆ ಹಿಂಭಾಗದಲ್ಲಿ ನಮ್ಮ ಮೆಟ್ರೋ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಮತ್ತು ಗೋದಾಮಿಗೆ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಮರ, ಪ್ಲಾಸ್ಟಿಕ್, ಸೆಂಟ್ರಿಂಗ್ ಉಪಕರಣ, ಬಣ್ಣ, ಥಿನ್ನರ್, ಆಯಿಲ್ ಇನ್ನಿತರ ರಾಸಾಯನಿಕ ವಸ್ತುಗಳನ್ನು ಸಂಗ್ರಹಿಸಿದ್ದರು.
ಶುಕ್ರವಾರ ಸಂಜೆ 6.45ರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅಗ್ನಿ ಆವರಿಸಿದೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನಗಳೊಂದಿಗೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಕೆಮಿಕಲ್ ಸಂಗ್ರಹಿಸಿದ್ದ ಕ್ಯಾನ್‌ಗಳಿಗೆ ಬೆಂಕಿ ತಗುಲಿದ ಪರಿಣಾಮ ಅಗ್ನಿಜ್ವಾಲೆಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ರಾತ್ರಿ 10 ಗಂಟೆವರೆಗೂ ಕಾರ್ಯಾಚರಣೆ ನಡೆಸಿದರು. ನಮ್ಮ ಮೆಟ್ರೋ ಕಾಮಗಾರಿಗೆ ಎಲ್‌ಎನ್‌ಟಿ ಸಂಗ್ರಹಿಸಿದ್ದ ಗೋದಾಮು ಆಗಿದೆ. ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿ ಆಗಿರುವುದಾಗಿ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ ಹೊರಕ್ಕೆ ಹೋಗದಿದ್ರೆ ರೇಪ್ ಆಗ್ತಿರಲಿಲ್ಲ: ಮಹಿಳಾ ಆಯೋಗದ ಸದಸ್ಯೆ ಹೇಳಿಕೆಗೆ ಭುಗಿಲೆದ್ದ ಆಕ್ರೋಶ
ಸನ್ನಿ ಲಿಯೋನ್ ಸಾಹಸಗಳ ಹಿಂದಿರುವ ಆ ಟ್ಯಾಲೆಂಟೆಡ್ ಯಂಗ್ಮ್ಯಾನ್ ಇವರೇ..