More

    ಈಗಲೇ ಬ್ಯಾಂಕ್​ ಕೆಲಸ ಮುಗಿಸಿಕೊಳ್ಳಿ… 3-4 ದಿನ ಸತತ ರಜೆ ಏಕೆ?

    ನವದೆಹಲಿ: ಈ ವಾರ ಎಲ್ಲ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್​ಗಳು ಈ ವಾರ ನಿರಂತರವಾಗಿ 3 ಅಥವಾ 4 ದಿನಗಳ ಕಾಲ ಮುಚ್ಚಿರುತ್ತವೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜನವರಿ 26 ರಂದು ಎಲ್ಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅದರ ನಂತರ, ಜನವರಿ 27 ಮತ್ತು 28ರಂದು ಎರಡು ದಿನಗಳ ಕಾಲ ರಜೆ ಇರುತ್ತದೆ.

    ಜನವರಿ 27 ತಿಂಗಳ ನಾಲ್ಕನೇ ಶನಿವಾರ ಮತ್ತು 28 ಭಾನುವಾರ ಆಗಿರುವುದರಿಂದ ಬರುವ ವಾರಾಂತ್ಯದಲ್ಲಿ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳು ರಜೆಯಲ್ಲಿರುತ್ತಾರೆ.

    ಹಜರತ್ ಅಲಿ ಅವರ ಜನ್ಮದಿನದ ಸಂದರ್ಭದಲ್ಲಿ ಕಾನ್ಪುರ ಮತ್ತು ಲಖನೌ ಸೇರಿದಂತೆ ಕೆಲವು ಆಯ್ದ ನಗರಗಳಲ್ಲಿ ಜನವರಿ 25 ರಂದು ಸರ್ಕಾರಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ತೈಪೂಸಂ ಹಬ್ಬದ ನಿಮಿತ್ತ ಚೆನ್ನೈನಲ್ಲಿ ಜನವರಿ 25 ರಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

    ಆನ್‌ಲೈನ್ ಬ್ಯಾಂಕಿಂಗ್ ಮತ್ತು ಬ್ಯಾಂಕ್‌ಗಳ ಎಟಿಎಂ ಸೌಲಭ್ಯಗಳು ರಜಾ ದಿನಗಳಲ್ಲಿ ತೆರೆದಿರುತ್ತವೆ. ಆದರೂ, ಯಾವುದೇ ದಾಖಲಾತಿ ಕಾರ್ಯವನ್ನು ಮಾಡಬೇಕಾದರೆ, ಬ್ಯಾಂಕ್​ಗೆ ಹೋಗಿ ವಹಿವಾಟು ನಡೆಸುವ ಅಗತ್ಯವಿದ್ದರೆ ಜನವರಿ 24ರಂದೇ ಈ ಕೆಲಸವನ್ನು ಮಾಡಿಕೊಳ್ಳುವುದು ಒಳಿತು.

    ಗರಿಷ್ಠ ಮಟ್ಟ ತಲುಪಿದ ಐಸಿಐಸಿಐ ಬ್ಯಾಂಕ್​ ಷೇರು ಬೆಲೆ ಮತ್ತಷ್ಟು ಹೆಚ್ಚಳ: ಹೀಗೆಂದು ಬ್ರೋಕರೇಜ್​ ಸಂಸ್ಥೆಗಳು ಭವಿಷ್ಯ ನುಡಿದಿದ್ದೇಕೆ?

    ದುಬೈ ನೈಟ್​ ಕ್ಲಬ್​ ಜತೆ ಡೀಲು: ಪೆನ್ನಿ ಸ್ಟಾಕ್​ಗೆ ಡಿಮ್ಯಾಂಡೊ ಡಿಮ್ಯಾಂಡು…

    ಗೂಳಿ ಹಿಮ್ಮೆಟ್ಟಿಸಿದ ಕರಡಿಯ ಕುಣಿತ; 1000 ಅಂಕ ಮೀರಿ ಕುಸಿತ: ಷೇರು ಪೇಟೆಯಲ್ಲಿ ಏಕೆ ರಕ್ತಪಾತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts