More

    ಬರೀ ಮಾಸ್ಕ್ ಹಾಕದ್ದಕ್ಕೆ ವಿಧಿಸಿದ ದಂಡದ ಮೊತ್ತವೇ 30 ಕೋಟಿ ರೂಪಾಯಿ!

    ಮುಂಬೈ: ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗುತ್ತಿದ್ದು, ಆ ಪೈಕಿ ಮಾಸ್ಕ್​ ಧರಿಸದ್ದಕ್ಕೇ ಹೆಚ್ಚು ಜನರು ದಂಡ ತೆರುವಂತಾಗಿದ್ದಾರೆ. ದೇಶಾದ್ಯಂತ ಹೀಗೆ ಕರೊನಾ ನಿಯಮ ಉಲ್ಲಂಘನೆ ವಿರುದ್ಧ ‘ದಂಡ’ಪ್ರಯೋಗ ನಡೆಯುತ್ತಿದ್ದು, ಇಲ್ಲೊಂದು ಕಡೆ ಮಾಸ್ಕ್​ ಧರಿಸದ್ದಕ್ಕೆ ವಿಧಿಸಿದ ದಂಡದ ಮೊತ್ತವೇ 30 ಕೋಟಿ ರೂಪಾಯಿ ಆಗಿದೆ.

    ಕಳೆದ ಹತ್ತು ತಿಂಗಳಲ್ಲಿ ಮಾಸ್ಕ್​ ಹಾಕಿಲ್ಲ ಎಂಬ ಕಾರಣಕ್ಕೆ 15 ಲಕ್ಷ ಮಂದಿ ಮೇಲೆ ಕೇಸು ದಾಖಲಿಸಲಾಗಿದ್ದು, ಒಟ್ಟು 30 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಅಷ್ಟಕ್ಕೂ ಇಷ್ಟು ದೊಡ್ಡ ಪ್ರಮಾಣದ ದಂಡದ ಮೊತ್ತ ಸಂಗ್ರಹವಾಗಿದ್ದು ಬಿಎಂಪಿಯಲ್ಲಿ, ಅರ್ಥಾತ್​ ಬೃಹತ್​ ಮುಂಬೈ ಮಹಾನಗರ ಪಾಲಿಕೆ.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಬಿಎಂಪಿ ಮಾಹಿತಿ ಪ್ರಕಾರ ಫೆ. 19ರಂದು 13,000 ಮಂದಿಗೆ ಮಾಸ್ಕ್​ ಧರಿಸದ ಹಿನ್ನೆಲೆಯಲ್ಲಿ ಕೇಸ್ ಹಾಕಲಾಗಿದ್ದು, 27 ಲಕ್ಷ ರೂಪಾಯಿಗೂ ಅಧಿಕ ದಂಡ ವಿಧಿಸಲಾಗಿದೆ. ಅಲ್ಲದೆ ಮಾಸ್ಕ್​ ಧರಿಸದ ಸಂಬಂಧ ಕಳೆದ ಹತ್ತು ತಿಂಗಳಲ್ಲಿ 15,71,679 ಕೇಸ್​ ದಾಖಲಿಸಿದ್ದು, 31,79,43,400 ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಶುಕ್ರವಾರವೊಂದೇ ದಿನ 6,112 ಕೋವಿಡ್​-19 ಪ್ರಕರಣಗಳು ವರದಿಯಾಗಿದ್ದು, ಕರೊನಾಗೆ ಸಂಬಂಧಿಸಿದಂತೆ 44ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    5 ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು : ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಂದ ಕೇಂದ್ರ ಸರ್ಕಾರ

    ಪ್ರೇಮಿಗಳ ದಿನದಂದು ಪತ್ನಿ ಜತೆ ಹೊಸ ಬೈಕಲ್ಲಿ ಜಾಲಿರೈಡ್ ಹೋದ ನಟ ವಿವೇಕ್ ಒಬೆರಾಯ್​; ಆಮೇಲಾಯಿತು ವಿವೇಕೋದಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts