More

    ಬ್ಯಾನ್ ಮಾಡಿದ್ದು ತಪ್ಪು, ಒಬ್ಬ ಕಲಾವಿದನ ಬದುಕು ಕಿತ್ತುಕೊಳ್ಳೋ ಹಕ್ಕು ಯಾರಿಗೂ ಇಲ್ಲ… ಅನಿರುದ್ಧ್​ ಪರ ಫಿಲ್ಮ್​ ಚೇಂಬರ್​ ಬ್ಯಾಟಿಂಗ್​

    ಬೆಂಗಳೂರು: ಸಿನಿಮಾ ಇರಲಿ‌- ಸೀರಿಯಲ್ ಇರಲಿ ಕಲಾವಿದರು ಸಹಕರಿಸಲಿಲ್ಲ ಅಂದ್ರೆ ಅವರನ್ನ ತೆಗೆದುಹಾಕಬಹುದು. ಆದರೆ ಕಲಾವಿದನನ್ನು ಬ್ಯಾನ್ ಮಾಡೋದು ತಪ್ಪು. ಬ್ಯಾನ್- ಬಾಯ್ಕಾಟ್ ಮಾಡಿ ಒಬ್ಬ ಕಲಾವಿದನ ಬದುಕು ಕಿತ್ತುಕೊಳ್ಳೋ ಹಕ್ಕು ಯಾರಿಗೂ ಇಲ್ಲ. ಕಿರುತೆರೆ ಇರಲಿ, ಹಿರಿತೆರೆ ಇರಲಿ… ಶೂಟಿಂಗ್ ಟೈಂನಲ್ಲಿ ಮನಸ್ತಾಪ ಬರೋದು ಸಹಜ. ಅದನ್ನ ಸರಿ ಮಾಡ್ಕೊಂಡು ಹೋಗಬೇಕು…

    ಹೀಗಂತ ಹೇಳಿದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿ ಅಧ್ಯಕ್ಷ ಭಾಮ ಹರೀಶ್ ಮತ್ತು ಕಾರ್ಯದರ್ಶಿ ಸುಂದರ್ ರಾಜ್. ಜೊತೆಜೊತೆಯಲಿ ಸೀರಿಯಲ್​ ತಂಡದೊಂದಿಗಿನ ವಿವಾದ ಹೊತ್ತು ಧಾರವಾಹಿಯಿಂದ ಹೊರಬಂದ ಅನಿರುದ್ಧ್ ಹೊರಬಂದಿದ್ದಾರೆ. ಅನಿರುದ್ಧ್​ ಅವರನ್ನ 2 ವರ್ಷ ಯಾವುದೇ ಧಾರವಾಹಿಗೂ ಸೇರಿಸಿಕೊಳ್ಳಬಾರದು. ಬ್ಯಾನ್​ ಮಾಡಬೇಕು ಎಂದು ಕಿರುತೆರೆ ನಿರ್ಮಾಪಕರ ಸಂಘ ಆಗ್ರಹಿಸಿತ್ತು. ಇದರ ನಡುವೆಯೇ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಎಸ್​.ನಾರಾಯಣ್​ ಅವರು ಉದಯ ಟಿವಿಯಲ್ಲಿ ಪ್ರಸಾರವಾಗುವ ಸೂರ್ಯವಂಶ ಧಾರಾವಾಹಿಗೆ ಅನುರುದ್ಧ್​ ಅವರನ್ನ ಸೇರಿಸಿಕೊಳ್ಳಲು ಸಜ್ಜಾಗಿದ್ದಾರೆ. ಇದನ್ನು ವಿರೋಧಿಸಿ ಕಿರುತೆರೆ ನಿರ್ಮಾಪಕರ ಸಂಘ, ಅನಿರುದ್ಧ್​ ಅವರನ್ನು ಸೇರಿಸಿಕೊಳ್ಳಬೇಡಿ ಎಂದು ಮನವಿ ಮಾಡಿದೆ. ಈ ಪ್ರಕರಣ ವಾಣಿಜ್ಯ ‌ಮಂಡಳಿಯ ಅಂಗಳಕ್ಕೆ ಹೋಗಿದ್ದು, ಇಂದು(ಶುಕ್ರವಾರ) ಸಂಜೆ ನಡೆದ ಸಭೆಯಲ್ಲಿ ಅನಿರುದ್ಧ್​ ಪರ ಭಾಮ ಹರೀಶ್​ ಮತ್ತು ಸುಂದರ್​ ರಾಜ್​ ಬ್ಯಾಟಿಂಗ್​ ಬೀಸಿದ್ದಾರೆ.

    ಭಾಮ ಹರೀಶ್​ ಮಾತನಾಡಿ, ಎಲ್ಲ ವಿಚಾರಗಳನ್ನೂ ನಮ್ಮ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಕಿರುತೆರೆ ನಿರ್ಮಾಪಕರ ಸಂಘದ ಸದಸ್ಯರು ಬೇರೆ ಕಡೆ ಇರೋದ್ರಿಂದ ಸಭೆಯಲ್ಲಿ ಭಾಗಿಯಾಗಿಲ್ಲ. ಈಗಾಗಲೇ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದೇನೆ. ನಾಳೆ‌(ಶನಿವಾರ) ಬೆಳಗ್ಗೆ 10 ಗಂಟೆಗೆ ಕಿರುತೆರೆ ನಿರ್ಮಾಪಕರ ಸಂಘದವರು ವಾಣಿಜ್ಯ ಮಂಡಳಿಗೆ ಬರ್ತಾರೆ. ಅವರೊಟ್ಟಿಗೆ ಮಾತುಕತೆ ನಡೆಸಿ ನಂತರ ಒಂದು ತೀರ್ಮಾನಕ್ಕೆ ಬರಲಿದ್ದೇವೆ. ಸಿನಿಮಾ ಇರಲಿ‌ ಸೀರಿಯಲ್ ಇರಲಿ ಕಲಾವಿದರು ಕೋಆಪರೇಟ್ ಮಾಡಿಲ್ಲ ಅಂದರೆ ಅವರನ್ನ ತೆಗೆದುಹಾಕಬಹುದು. ಆ ಕಲಾವಿದನ ಜಾಗಕ್ಕೆ ಬೇರೊಬ್ಬರನ್ನ ಕರೆತರಬಹುದು. ಆದರೆ, ಕೋಆಪರೇಟ್ ಮಾಡಿಲ್ಲ ಅಂತ ಬ್ಯಾನ್ ಮಾಡೋದು ತಪ್ಪು. ಜೊತೆಗೆ ಬೇರೆ ಪ್ರೊಡಕ್ಷನ್ ಹೌಸ್​ನಲ್ಲಿ ಕೆಲಸ‌ ಮಾಡಲಿಕ್ಕೆ ಹೊರಟಾಗ ಅಡ್ಡಗಾಲು ಹಾಕೋದೂ ತಪ್ಪು ಎಂದರು.

    ಸುಂದರ್​ ರಾಜ್​ ಮಾತನಾಡಿ, ಇವತ್ತು ಡಾ.ರಾಜ್​ಕುಮಾರ್ ಇದ್ದಿದ್ದರೆ ಒಂದು ನಿಮಿಷದಲ್ಲಿ ಈ ಪ್ರಾಬ್ಲಂ ಬಗೆಹರಿಯುತ್ತಿತ್ತು. ಈಗ ನಾವು ಅದೇ ಪ್ರಯತ್ನ ಮಾಡ್ತಿದ್ದೇವೆ. ಬ್ಯಾನ್ ಹಾಗೂ ಬಾಯ್ಕಾಟ್ ಮಾಡಿ ಒಬ್ಬ ಕಲಾವಿದನ ಬದುಕನ್ನು ಕಿತ್ತುಕೊಳ್ಳಬಾರದು. ಆ ಹಕ್ಕು ಯಾರಿಗೂ ಇಲ್ಲ. ಕಿರುತೆರೆ ಇರಲಿ, ಹಿರಿತೆರೆ ಇರಲಿ, ಶೂಟಿಂಗ್ ಟೈಂನಲ್ಲಿ ಮನಸ್ತಾಪ ಬರೋದು ಸಹಜ. ಅದನ್ನ ಸರಿ ಮಾಡ್ಕೊಂಡು ಹೋಗಬೇಕು. ಆದರೆ‌ ಕಿರುತೆರೆ ನಿರ್ಮಾಪಕರ ಸಂಘದವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಏಕ್ದಮ್ ಎರಡು ವರ್ಷಗಳ ಕಾಲ ಕಿರುತೆರೆಯಿಂದ ದೂರ ಇಡುವ ನಿರ್ಧಾರ ಕೈಗೊಂಡದ್ದು ತಪ್ಪು. ಜೊತೆಜೊತೆಯಲಿ ಟೀಮ್ ಹಾಗೂ ಅನಿರುದ್ಧ್ ಇಬ್ಬರನ್ನೂ‌ ಮುಖಾಮುಖಿ ಕೂರಿಸಿ ಕಿರುತೆರೆ ನಿರ್ಮಾಪಕರ ಸಂಘದವರು ಮಾತನಾಡಿಸಬೇಕಿತ್ತು. ಅದನ್ನು ಬಿಟ್ಟು ಜೊತೆಜೊತೆಯಲಿ ಟೀಂನ ಆರೋಪಕ್ಕೆ ತಲೆಬಾಗಿ ಅನಿರುದ್ಧ್​ರನ್ನ ಕೈ ಬಿಟ್ಟದ್ದು ತಪ್ಪು ಎಂದರು.

    ನಟ ಅನಿರುದ್ಧ್​ಗೆ ಮತ್ತೊಮ್ಮೆ ಶಾಕ್​! ಎಸ್​.ನಾರಾಯಣ್​ರ ಮುಂದಿನ ನಡೆ ಏನು? ಇಂದು ಮಧ್ಯಾಹ್ನವೇ ನಿರ್ಧಾರ ಆಗುತ್ತಾ ಭವಿಷ್ಯ?

    ಒಂದೇ ರಾತ್ರಿ 2 ಬಾರಿ ಸಂಭೋಗಿಸಲು ನಿರಾಕರಿಸಿದ ಪತ್ನಿಯನ್ನೇ ಕೊಂದು ಹೈಡ್ರಾಮ! ಈತ ಕಟ್ಟಿದ ಕಥೆ ಅಷ್ಟಿಷ್ಟಲ್ಲ

    ಬಾಳು ಕೊಡ್ತೀನಿ… ಎಂದು ಪುಸಲಾಯಿಸಿ ಆಕೆಯ ಮನೆಯಲ್ಲೇ ಇದ್ದವ ಹೀಗಾ ಮಾಡೋದು? ಎಲ್ಲವನ್ನೂ ಕಳೆದುಕೊಂಡಾಕೆಯ ಗೋಳಿನ ಕಥೆ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts