More

    VIDEO| ದಾಖಲೆ ಬರೆಯಲು ಯೂಟ್ಯೂಬ್​ಗೆ ಲಗ್ಗೆಯಿಟ್ಟ ಒಡೆಯ ಸಿನಿಮಾದ ‘ಶ್ಯಾನೆ ಲವ್​ ಅಗೋಯ್ತಲ್ಲೇ ನಂಜಿ’ ಸಾಂಗ್​

    ಬೆಂಗಳೂರು: 2019ರ ವರ್ಷ “ಡಿ ಬಾಸ್​” ದರ್ಶನ್​ ಅಭಿಮಾನಿಗಳಿಗೆ ಬಂಪರ್ ಬೆಳೆ ತಂದುಕೊಟ್ಟಿತ್ತು.

    ‘ಯಜಮಾನ’, ‘ಕುರುಕ್ಷೇತ್ರ’ ಮತ್ತು ‘ಒಡೆಯ’ದಂತಹ ಸಿನಿಮಾಗಳ ಭಾರಿ ಯಶಸ್ಸಿನಿಂದಾಗಿ ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರಿಗೂ ಅಪಾರ ಹೆಸರು ತಂದುಕೊಟ್ಟಿದ್ದವು.

    ಸಂದೇಶ್ ನಾಗರಾಜ್ ನಿರ್ಮಾಣ, ಎಂ.ಡಿ. ಶ್ರೀಧರ್ ನಿರ್ದೇಶನದಲ್ಲಿ ಒಡೆಯ ಸಿನಿಮಾ ಮೂಡಿಬಂದಿದ್ದು, ವರ್ಷಾಂತ್ಯಕ್ಕೆ ಭರ್ಜರಿ ಮನರಂಜನೆ ನೀಡಿತ್ತು.

    ಮಾಸ್ ಮನರಂಜನೆ, ಹಲವು ಕಲಾವಿದರ ಸಂಗಮ, ನುರಿತ ತಂತ್ರಜ್ಞರ ಪರಿಶ್ರಮ, ದೊಡ್ಡ ಬ್ಯಾನರ್, ಅದ್ದೂರಿತನ, ಮೈನವಿರೇಳಿಸುವ ಆ್ಯಕ್ಷನ್, ಗುಂಗು ಹತ್ತಿಸುವಂತಹ ಹಾಡುಗಳು… ಹೀಗೆ ‘ಒಡೆಯ’ ಚಿತ್ರದ ವಿಶೇಷಗಳ ಪಟ್ಟಿ ಬೆಳೆಯುತ್ತ ಸಾಗುತ್ತದೆ.

    ಇಂತಹ ಯಶಸ್ವಿ ಸಿನಿಮಾದಲ್ಲಿ “ಶ್ಯಾನೆ ಲವ್​ ಅಗೋಯ್ತಲ್ಲೇ ನಂಜಿ.., ಇಲ್ಲೇ ಸಿಗೋಣೇನೆ ನಾಳೆ ಸಂಜಿ” ಎಂಬ ಹಾಡು ಸಿನಿಪ್ರಿಯರನ್ನು ಆಕರ್ಷಿಸಿತ್ತು.

    ದರ್ಶನ್​ ಅಭಿಮಾನಿಗಳಿಗೆ ಈ ಹಾಡನ್ನು ಬೆಳ್ಳಿ ಪರದೆಯಲ್ಲಿ ಕಣ್ತುಂಬಿಕೊಂಡಿದ್ದರು. ಅವರಿಗೆ ಇಲ್ಲೊಂದು ಸಿಹಿ ಸುದ್ದಿ. ಈ ನಿಮ್ಮ ನೆಚ್ಚಿನ ಗೀತೆ ಈಗ ಯೂಟ್ಯೂಬ್​ನಲ್ಲಿ ಲಭ್ಯವಿದೆ.

    ಶನಿವಾರ ಈ ಹಾಡನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿದ್ದು, ಕೇವಲ ನಾಲ್ಕು ಗಂಟೆಗಳಲ್ಲಿ 80 ಸಾವಿರ ಮಂದಿ ವೀಕ್ಷಿಸಿದ್ದಾರೆ. 9 ಸಾವಿರ ಮಂದಿ ಇದನ್ನು ಲೈಕ್​ ಮಾಡಿದ್ದಾರೆ. ಆ ಹಾಡಿನ ಲಿಂಕ್​ ಇಲ್ಲಿದೆ ನೋಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts