More

    ಅರಣ್ಯ ಕಾಯ್ದೆ ವಿರೋಧಿಸಿ ಹೋರಾಟ ಆರಂಭಕ್ಕೆ ನಿರ್ಧಾರ

    ಎನ್.ಆರ್. ಪುರ: ರೈತರಿಗೆ ಮಾರಕವಾಗುತ್ತಿರುವ ಕರ್ನಾಟಕ ಅರಣ್ಯಕಾಯ್ದೆ 1963 ರ ಕಲಂ 4 (1) ನೋಟಿಫಿಕೇಷನ್, ಹುಲಿ ಯೋಜನೆಯ ಬಪೋರ್ ಝೋನ್, ಪರಿಸರ ಸೂಕ್ಷ್ಮ ವಲಯ ಕೈ ಬಿಡುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ತೀವ್ರ ಸ್ವರೂಪದ ಹೋರಾಟ ಮಾಡಬೇಕು ಎಂದು ಬಾಳೆ ಗ್ರಾಪಂ ವ್ಯಾಪ್ತಿಯ 5 ಗ್ರಾಮಗಳ ರೈತರು ನಿರ್ಣಯ ಮಾಡಿದ್ದಾರೆ.

    ಮೂಡಬಾಗಿಲು ಶಾಲಾ ಆವರಣದಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಚರ್ಚೆ ಮಾಡಿದ ರೈತರು, ಹೋರಾಟಕ್ಕೆ ಸಮಿತಿ ರಚನೆ ಮಾಡಿ, ಪಕ್ಷಾತೀತವಾಗಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳನ್ನೊಳಗೊಂಡು ಹೋರಾಟ ಮಾಡಬೇಕು. ಪ್ರತಿಯೊಂದು ಗ್ರಾಮಗಳಿಂದಲೂ ನಮ್ಮ ಗ್ರಾಮವನ್ನು ಮೀಸಲು ಅರಣ್ಯದಲ್ಲಿ ಸೇರ್ಪಡೆ ಮಾಡಲು ವಿರೋಧವಿದೆ ಎಂದು ಆಕ್ಷೇಪಣೆ ಸಲ್ಲಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಯಿತು.

    ಅಧ್ಯಕ್ಷತೆ ವಹಿಸಿದ್ದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಅರಣ್ಯ ಇಲಾಖೆ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಮಾರಕವಾಗುವ ಕಾಯ್ದೆ, ಕಾನೂನುಗಳನ್ನೇ ಜಾರಿ ಮಾಡುತ್ತಿವೆ. ರೈತರು, ಸಾರ್ವಜನಿಕರು ಧಂಗೆ ಎದ್ದರೆ ಮಾತ್ರ ಇಂತಹ ಮಾರಕ ಕಾಯ್ದೆಗಳನ್ನು ರದ್ದುಪಡಿಸಬಹುದು ಅಥವಾ ಮಾರ್ಪಾಡು ಮಾಡಬಹುದು ಎಂದರು.

    ಅರಣ್ಯ ಕಾಯ್ದೆ 1963 ರ ಅಡಿ 4 (1) ನೋಟಿಫಿಕೇಷನ್ ಮಾಡಿದರೆ ರೈತರಿಗೆ ಮಾತ್ರವಲ್ಲ. ಕೃಷಿ ಕಾರ್ವಿುಕರು, ವರ್ತಕರಿಗೂ ತೊಂದರೆಯಾಗುತ್ತದೆ. ಕಾಯ್ದೆ ವಿರೋಧಿಸಿ ಹೋರಾಟ ಮಾಡಲು ಈಗಾಗಲೇ ಪಕ್ಷತೀತವಾಗಿ ರೈತ ಹಿತರಕ್ಷಣಾ ಸಮಿತಿ ರಚನೆಯಾಗಿದೆ. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಆಕ್ಷೇಪಣೆ ಸಲ್ಲಿಸಬೇಕು. ಪ್ರತಿ ಗ್ರಾಮದಲ್ಲೂ ಗ್ರಾಮ ಸಭೆ ಆಯೋಜಿಸಿ ಕಡೂರು ಅರಣ್ಯಾಧಿಕಾರಿಗಳು ರೈತರ ಆಕ್ಷೇಪಣೆಗಳನ್ನು ಸ್ವೀಕರಿಸಬೇಕು ಎಂದು ಹೇಳಿದರು.

    ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮಾತನಾಡಿ, ರಾಜಕಾರಿಣಿಗಳು ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ. ರೈತರನ್ನು ವೋಟ್ ಬ್ಯಾಂಕ್ ರೀತಿ ಬಳಸಿಕೊಳ್ಳಲಾಗುತ್ತಿದೆ. 2011 ರಲ್ಲಿಯೇ ಅಳೇಹಳ್ಳಿ ಗ್ರಾಮವನ್ನು ಬಫರ್​ಜೋನ್​ಗೆ ಸೇರಿಸಲಾಗಿತ್ತು. ತಾಲೂಕಿನ 10 ಗ್ರಾಮಗಳು ಸೂಕ್ಷ್ಮ ವಲಯ ವ್ಯಾಪ್ತಿಗೆ ಬರಲಿದ್ದು, ದೊಡ್ಡ, ದೊಡ್ಡ ರಾಜಕಾರಣಿಗಳು ಅರಣ್ಯ ಇಲಾಖೆಯ ಪರವಾಗಿ ಮಾತನಾಡುತ್ತಾರೆ. ಈಗ ರೈತರೇ ಬೀದಿಗಳಿದು ಹಾಗೂ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts