More

    ಫೈಟರ್ ಟ್ರೇಲರ್ ರಿಲೀಸ್; ವಿನೋದ್, ಲೇಖಾಚಂದ್ರ, ಪಾವನ ಅಭಿನಯದ ಚಿತ್ರ

    ಬೆಂಗಳೂರು: ವಿನೋದ್ ಪ್ರಭಾಕರ್ ಅಭಿನಯಿಸಿರುವ ನೂತನ್ ಉಮೇಶ್ ನಿರ್ದೇಶನದ ಚಿತ್ರ ‘ಫೈಟರ್’. ಈ ಚಿತ್ರಕ್ಕೆ ಇಬ್ಬರು ನಾಯಕಿಯರಿದ್ದು, ಲೇಖಾಚಂದ್ರ ಹಾಗೂ ಪಾವನ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಯಿತು. ದುನಿಯಾ ವಿಜಯ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

    ನಿರ್ದೇಶಕ ನೂತನ್ ಉಮೇಶ್, ‘‘ಫೈಟರ್’ ಎಂದರೆ ಹೊಡೆದಾಡುವವನು ಮಾತ್ರವಲ್ಲ ಅನ್ಯಾಯದ ವಿರುದ್ಧ ಹಾಗೂ ತನ್ನ ಕುಟುಂಬಕ್ಕಾಗಿ ಹೋರಾಡುವವನು. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು. ನಾಯಕ ವಿನೋದ್ ಪ್ರಭಾಕರ್, ‘‘ಫೈಟರ್’ಚಿತ್ರದಲ್ಲಿ ಕೇವಲ ಹೋರಾಟ ಹಾಗೂ ಹೊಡೆದಾಟವಿಲ್ಲ. ತಂದೆ, ತಾಯಿ ಹಾಗೂ ಮಗನ ಬಾಂಧವ್ಯದ ಕಥೆಯೂ ಇದೆ. ಜತೆಗೆ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಕೌಟುಂಬಿಕ ಮನರಂಜನೆಯ ಚಿತ್ರವಿದು. ಈ ಹಿಂದಿನ ಚಿತ್ರಗಳಿಗಿಂತ ನನ್ನನ್ನು ವಿಭಿನ್ನ ಹಾಗೂ ಸ್ಟೈಲಿಷ್‌ಆಗಿ ನಿರ್ದೇಶಕರು ತೋರಿಸಿದ್ದಾರೆ. ನಾನು ಈ ಚಿತ್ರದಲ್ಲಿ ಸಮಾಜದ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ ‘ಫೈಟರ್’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು.

    ಇನ್ನು ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿರಲಿದೆ. ವಿನೋದ್, ಲೇಖಾಚಂದ್ರ, ಪಾವನ ಜತೆ ನಟಿ ನಿರೋಷ ಬ್ರೇಕ್‌ನ ಬಳಿಕ ‘ೈಟರ್’ ಮೂಲಕ ವಾಪಸ್ಸಾಗಿರುವುದು ವಿಶೇಷ. ಇದೇ ಅ.6ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts