ಮುಂಬೈ: ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಫೈಟರ್’ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಸಿದ್ದಾರ್ಥ್ ಆನಂದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಆಕ್ಷನ್ ಪ್ಯಾಕ್ಡ್ ಟೀಸರ್ ಧೂಳೆಬ್ಬಿಸಿದೆ. ಹೃತಿಕ್ ಸ್ಕ್ವಾಡ್ರನ್ ಲೀಡರ್ ಆಗಿ ದರ್ಶನ ಕೊಟ್ಟು ಅಭಿಮಾನಿಗಳ ಮನಗೆದ್ದಿದ್ದಾರೆ. ಇದರ ನಡುವೆ ಸಿನಿಮಾದ ವಿರುದ್ಧ ವಾಯುಸೇನೆ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಕೇರಳದಲ್ಲಿ ಅಸಹಕಾರ..ಕರ್ನಾಟಕದಲ್ಲಿ ಸಹಕಾರ! ಇದೆಂಥಾ ನೀತಿ: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಕೆಲವು ಕಾರಣಗಳನ್ನು ತಿಳಿಸಿದ್ದು, ಭಾರತೀಯ ವಾಯುಸೇನೆ ಕುರಿತಾದ ಈ ಸಿನಿಮಾದ ವಿರುದ್ಧ ಭಾರತೀಯ ವಾಯುಪಡೆಯ ಅಧಿಕಾರಿ, ವಿಂಗ್ ಕಮಾಂಡರ್ ಸೌಮ್ಯ ದೀಪ್ ದಾಸ್ ದೂರು ದಾಖಲು ಮಾಡಿದ್ದಾರೆ.
ವರದಿಯ ಪ್ರಕಾರ, ‘ಐಎಎಫ್ ಸಮವಸ್ತ್ರವು ಕೇವಲ ಬಟ್ಟೆಯ ತುಂಡು ಅಲ್ಲ, ಇದು ಕರ್ತವ್ಯ, ರಾಷ್ಟ್ರೀಯ ಭದ್ರತೆ ಮತ್ತು ನಿಸ್ವಾರ್ಥ ಸೇವೆಗೆ ಅಚಲವಾದ ಬದ್ಧತೆಯ ಪ್ರಬಲ ಸಂಕೇತವಾಗಿದೆ’ ಎಂದು ಫೈಟರ್ ಸಿನಿಮಾ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಫೈಟರ್’ ಸಿನಿಮಾನಲ್ಲಿ ನಾಯಕ ಹೃತಿಕ್ ರೋಷನ್ ಹಾಗೂ ನಾಯಕಿ ದೀಪಿಕಾ ಪಡುಕೋಣೆ ನಡುವೆ ಕೆಲವು ಹಸಿ-ಬಿಸಿ ದೃಶ್ಯಗಳಿವೆ. ರೊಮ್ಯಾಂಟಿಕ್ ದೃಶ್ಯಗಳು, ಬಿಕಿನಿ ಧರಿಸಿ ಮಾಡುವ ಡ್ಯಾನ್ಸ್ಗಳು, ನಟ-ನಟಿಯರ ನಡುವೆ ಅದರ ಚುಂಬನಗಳು ಸಹ ಇವೆ. ಈ ದೃಶ್ಯಗಳೇ ಈಗ ಸಿನಿಮಾವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹೃತಿಕ್ ಹಾಗೂ ದೀಪಿಕಾ ನಡುವೆ ಕೆಲವು ಚುಂಬನ ದೃಶ್ಯಗಳು ಸಹ ಇವೆ. ಒಂದು ದೃಶ್ಯದಲ್ಲಿ ಹೃತಿಕ್ ಹಾಗೂ ದೀಪಿಕಾ ಪಡುಕೋಣೆ ವಾಯುಸೇನೆಯ ಸಮವಸ್ತ್ರ ಧರಿಸಿಕೊಂಡು ಪರಸ್ಪರ ಚುಂಬಿಸುತ್ತಾರೆ. ಈ ದೃಶ್ಯದ ಬಗ್ಗೆ ವಾಯುಸೇನಾ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಏರ್ಫೋರ್ಸ್ ಅಧಿಕಾರಿ ಸೌಮ್ಯ ದೀಪ್ ದಾಸ್ ಹೃತಿಕ್ ಹಾಗೂ ದೀಪಿಕಾರ ಚುಂಬನ ದೃಶ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಯುಸೇನೆ ಪಾಲಿಸಿಕೊಂಡು ಬಂದಿರುವ ನಿಯಮಗಳಿಗೆ ವಿರುದ್ಧವಾದದ್ದು ಹಾಗೂ ವಾಯುಸೇನೆಯ ಸಮವಸ್ತ್ರಕ್ಕೆ ಅಪಮಾನ ಎಸಗಿದಂತಾಗಿದೆ. ಇದರಿಂದ ಚಿತ್ರತಂಡಕ್ಕೆ ನೋಟಿಸ್ ಕಳುಹಿಸಲಾಗಿದೆ.
ಕೇರಳದಲ್ಲಿ ಅಸಹಕಾರ..ಕರ್ನಾಟಕದಲ್ಲಿ ಸಹಕಾರ! ಇದೆಂಥಾ ನೀತಿ: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ