More

    ಚಿಲ್ರೆ ವಿಷ್ಯಕ್ಕೆ ಕೆಎಸ್​ಆರ್​ಟಿಸಿ ಸಿಬ್ಬಂದಿ-ಪ್ರಯಾಣಿಕರ ಹೊಡೆದಾಟ: ಬಸ್​ ಸಂಚಾರವೇ ಸ್ಥಗಿತ, ಜನರ ಪರದಾಟ..

    ಕೊಪ್ಪಳ: ಚಿಲ್ಲರೆ ವಿಷಯಕ್ಕೆ ಕೆಲವು ಪ್ರಯಾಣಿಕರು ಹಾಗೂ ಕೆಎಸ್​ಆರ್​ಟಿಸಿ ಬಸ್​ ಸಿಬ್ಬಂದಿ ಮಧ್ಯೆ ನಡೆದ ಹೊಡೆದಾಟ ಇದೀಗ ಆ ಊರಿಗೇ ಬಸ್ ಸಂಚಾರ ಸ್ಥಗಿತಗೊಳಿಸುವ ಮಟ್ಟಕ್ಕೆ ತಲುಪಿದ್ದು, ಸಾರ್ವಜನಿಕರು ಆಟೋದಲ್ಲಿ ಓಡಾಡುವಂತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

    ಕೊಪ್ಪಳದ ಬಂಡಿಹರ್ಲಾಪುರ ಬಳಿ ಶುಕ್ರವಾರ ಈ ಜಗಳ ನಡೆದಿತ್ತು. ಚಿಲ್ಲರೆ ವಿಷಯವಾಗಿ ಬಂಡಿಹರ್ಲಾಪುರ ಗ್ರಾಮದ ವೆಂಕಟೇಶ ಹಾಗೂ ಡ್ರೈವರ್ ಶಂಕರ್ ಗೌಡ, ಕಂಡಕ್ಟರ್ ಪಾಂಡು ಎಂಬವರ ನಡುವೆ ಗಲಾಟೆ ನಡೆದಿತ್ತು. ಇದೇ ಗಲಾಟೆ ಹಿನ್ನೆಲೆಯಲ್ಲಿ ಇಂದು ವೆಂಕಟೇಶ ಬಸ್ ತಡೆದು ಕಂಡಕ್ಟರ್ ಹಾಗೂ ಡ್ರೈವರ್ ಜೊತೆ ಮತ್ತೆ ಗಲಾಟೆ ಮಾಡಿದ್ದಾನೆ.

    ಹೀಗಾಗಿ ಬಸ್​ ಚಾಲಕ-ನಿರ್ವಾಹಕರು ಬಸ್ ಸಂಚಾರ ನಿಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಕೊಪ್ಪಳದ ಹುಲಗಿ, ಬಂಡಿಹರ್ಲಾಪುರ ಮಾರ್ಗದ ಎಂಟಕ್ಕೂ ಹೆಚ್ಚು ಬಸ್​​ಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ನಮ್ಮನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ಹಲ್ಲೆ ಮಾಡಲು ಪ್ರಯತ್ನಿಸುತ್ತಾರೆ. ನಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಾರೆ ಎಂದು ಆ ಮಾರ್ಗಕ್ಕೆ ಚಾಲಕ-ನಿರ್ವಾಹಕರು ಬಸ್​ ತೆಗೆದುಕೊಂಡು ಹೋಗಲು ನಿರಾಕರಿಸಿದ್ದಾರೆ.

    ಮಾತ್ರವಲ್ಲದೆ ಗಲಾಟೆ ಹಿನ್ನೆಲೆಯಲ್ಲಿ ಮುನಿರಾಬಾದ್ ಠಾಣೆ ಮೆಟ್ಟಿಲೇರಿದ ಕೆಎಸ್​ಆರ್​ಟಿಸಿ ಬಸ್​ ಚಾಲಕ-ನಿರ್ವಾಹಕರು, ನಮಗೆ ರಕ್ಷಣೆ ನೀಡಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇನ್ನೊಂದೆಡೆ ಬಂಡಿಹರ್ಲಾಪುರ, ಹೊಸಳ್ಳಿ, ಬಸ್ಸಾಪುರ, ಆನೆಗೊಂದಿ, ಹುಲಗಿ, ಶಿವಪುರ, ಮುನಿರಾಬಾದ್​​ಗೆ ಬಸ್ ಸಂಚಾರ ಇರದ್ದರಿಂದ ಆ ಭಾಗದ ಜನರು ಪರದಾಡುತ್ತಿದ್ದು, ಹಲವರು ಆಟೋಗಳಲ್ಲಿ ಓಡಾಡುವಂತಾಗಿದೆ.

    ಕೊಡಗಲ್ಲಿ 2018ರಲ್ಲಿ ಭೂಕುಸಿತವಾಗಿದ್ದ ಪ್ರದೇಶದಲ್ಲೇ ಮತ್ತೆ ಭೂಕುಸಿತ-ಜಲಸ್ಫೋಟ; 18 ಮನೆಯವರ ತೆರವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts