More

    ಶಾಲೆ-ಕಾಲೇಜ್​ಗಳಲ್ಲಿ ಐವತ್ತು ವಿವಿಧ ಕಾರ್ಯಕ್ರಮ

    ನರಗುಂದ: ಎರಡು ಸಾವಿರ ವರ್ಷಗಳ ಪ್ರಾಚೀನ ಪರಂಪರೆ ಹೊಂದಿರುವ ಕನ್ನಡ ಪ್ರಪಂಚದ ಅದ್ಭುತ ಭಾಷೆಯಾಗಿದೆ. ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ, ಸಂಸ್ಕೃತಿ, ನೆಲ-ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ಎಂ.ಎಸ್. ಯಾವಗಲ್ ಹೇಳಿದರು.

    ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ತಾಲೂಕಿನ ಎಲ್ಲ ಶಾಲಾ-ಕಾಲೇಜ್​ಗಳಲ್ಲಿ ಒಂದು ತಿಂಗಳು ಪರ್ಯಂತ ಕನ್ನಡದ ಕುರಿತು ಐವತ್ತು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆಯನ್ನು ಕಸಾಪದಿಂದ ರೂಪಿಸಲಾಗಿದೆ. ಅದರ ಮೊದಲ ಭಾಗವಾಗಿ ಈ ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜ್​ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಶಾಲೆಯ ಮುಖ್ಯ ಶಿಕ್ಷಕಿ ಎಸ್.ಬಿ. ಹರಪ್ಪನಹಳ್ಳಿ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮ 50ರ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಉದ್ಘಾಟನೆಗೊಂಡಿದ್ದು ಸಂತಸದ ವಿಷಯ ಎಂದರು.

    ಕಸಾಪ ತಾಲೂಕು ಅಧ್ಯಕ್ಷ ಪ್ರೊ.ಬಿ.ಸಿ. ಹನಮಂತಗೌಡ್ರ, ಕಾರ್ಯದರ್ಶಿ ಎಸ್.ಜಿ. ಮಣ್ಣೂರಮಠ, ಆರ್.ಬಿ. ಚಿನಿವಾಲರ, ಬಿ.ಆರ್. ಮಹದೇವಪ್ಪನವರ, ಆರ್.ಕೆ. ಐನಾಪೂರ ಉಪಸ್ಥಿತರಿದ್ದರು. ಆರ್.ಸಿ. ಜಂಗನ್ನವರ ಸ್ವಾಗತಿಸಿದರು. ಎಫ್.ಎಂ. ಹಾಡ್ಕರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts