More

    ಕಾರ್ಮಿಕರ ಬಾಯಿಗೆ ಥರ್ಮಾಮೀಟರ್ ಇಟ್ಟು ಜ್ವರ ಪರೀಕ್ಷಿಸಿದ ಇಂಜಿನಿಯರ್!

    ಬಂಟ್ವಾಳ: ಇಲ್ಲಿನ ಪುರಸಭೆಯ ಪರಿಸರ ಇಂಜಿನಿಯರ್ ಮೇಲಧಿಕಾರಿಗಳ ಅನುಮತಿ ಇಲ್ಲದೆ, ವೈದ್ಯರ ಸಲಹೆಯನ್ನೂ ಪಡೆಯದೆ ಬುಧವಾರ ಅಸುರಕ್ಷಿತವಾಗಿ ಪೌರಕಾರ್ಮಿಕರ ಜ್ವರ ತಪಾಸಣೆ ಮಾಡಿದ್ದು, ತರಾಟೆಗೆ ತೆಗೆದುಕೊಂಡಿರುವ ಮುಖ್ಯಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

    ಶಾಸಕ ರಾಜೇಶ್ ನಾಕ್ ಸೂಚನೆಯಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಮೂಲಕ ಇತ್ತೀಚೆಗಷ್ಟೇ ಪುರಸಭೆಯ ಎಲ್ಲ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈಗ ಪರಿಸರ ಇಂಜಿನಿಯರ್ ಯಾಸ್ಮೀನ್ ಸುಲ್ತಾನ ಎಲ್ಲ ಪೌರಕಾರ್ಮಿಕರ ಬಾಯಿಗೆ ಥರ್ಮಾಮೀಟರ್ ಇಟ್ಟು ಆರೋಗ್ಯ ತಪಾಸಣೆ ನಡೆಸಿದ್ದಾರೆ.

    ಥರ್ಮಾಮೀಟರನ್ನು ಬಿಸಿನೀರಿನಲ್ಲಿ ಅದ್ದಿ ಬಳಸಲಾಗಿದ್ದು, ಸ್ಯಾನಿಟೈಸರ್ ಬಳಸಿಲ್ಲ. ಸೀಲ್‌ಡೌನ್ ಆಗಿರುವ ಪ್ರದೇಶದಲ್ಲೂ ಕೆಲ ಕಾರ್ಮಿಕರು ಕರ್ತವ್ಯದಲ್ಲಿ ಇರುವುದರಿಂದ ಕಾರ್ಮಿಕರು ಆತಂಕಗೊಂಡಿದ್ದಾರೆ.
    ಸೀಲ್‌ಡೌನ್ ಪರಿಸರದಲ್ಲಿ ಅಸುರಕ್ಷಿತ ವಿಧಾನದಲ್ಲಿ ಆರೋಗ್ಯ ತಪಾಸಣೆ ಸರಿಯಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts