More

    ಎರಡು ಕೋಮುಗಳ ನಡುವೆ ಸಂಘರ್ಷ; ಅರ್ಧಕ್ಕೇ ನಿಂತಿತು ಉತ್ಸವದ ತೇರು!

    ರಾಮನಗರ: ಹಿಜಾಬ್​-ಕೇಸರಿ ಸಂಘರ್ಷಕ್ಕೆ ಕಾಲೇಜು ತರಗತಿಗಳೇ ನಿಂತು ಹೋಗಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ. ಇದೀಗ ಮತ್ತೊಂದು ಸಂಘರ್ಷಕ್ಕೆ ದೇವಸ್ಥಾನದ ತೇರೇ ನಿಂತು ಹೋಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ.

    ಚನ್ನಪಟ್ಟಣದ ಗುಡಿಸರಗೂರು ಗ್ರಾಮದ ಬಸವೇಶ್ವರ ಕೊಂಡ ಮಹೋತ್ಸವದಲ್ಲಿ ಉಂಟಾದ ಸವರ್ಣೀಯರು-ದಲಿತರ ನಡುವಿನ ಸಂಘರ್ಷ, ತೇರು ನಿಂತುಹೋಗುವ ಮಟ್ಟಕ್ಕೆ ತಲುಪಿದೆ. ದಲಿತರಿಗೆ ಪೂಜೆ ಸಲ್ಲಿಸಲು ನಿರಾಕರಿಸಿದ್ದರಿಂದ ಉಂಟಾದ ಸಂಘರ್ಷದಿಂದ ಬಸವೇಶ್ವರ ತೇರು ಅರ್ಧಕ್ಕೇ ನಿಂತಿದೆ.

    ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ಕೋಮಿನವರೊಂದಿಗೆ ಶಾಂತಿ ಸಭೆ ನಡೆಸುವಲ್ಲಿ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಲ್ಲದೆ ಯಾವುದೇ ಗಲಾಟೆ ಮುಂದುವರಿಸದಂತೆ ಖಡಕ್ ಸೂಚನೆ ನೀಡಲಾಗಿದ್ದು, ಅರ್ಧಕ್ಕೆ ನಿಂತ ತೇರನ್ನು ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನದ ಆವರಣಕ್ಕೆ ತಂದು ನಿಲ್ಲಿಸಿದೆ.

    ರೈಲ್ವೆ ಪ್ಲ್ಯಾಟ್​ಫಾರ್ಮ್​ನಲ್ಲಿ ಸಿಲುಕಿದ ಬಾಲಕಿ; ನೆರವಿಗೆ ಧುಮುಕಿ ಜೀವ ಉಳಿಸಿದ ಲೋಕೋಪೈಲಟ್​

    ‘ಇನ್ನೂ ಗ್ಯಾರಂಟೀ..’ ಎನ್ನುತ್ತ ಆ ನೆನಪನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್​

    ಎಂಥ ದುಸ್ಥಿತಿಯಲ್ಲಿದೆ ನೋಡಿ ನಿರ್ದೇಶಕ ಪುಟ್ಟಣ್ಣ ಕಣಗಾಲರ ಮನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts