More

    ಭೂಮಿಯ ಫಲವತ್ತತೆ ಜತೆಗೆ ಮಣ್ಣಿನ ಸಂರಕ್ಷಣೆಯೂ ಅವಶ್ಯ: ವೀರೇಶ ಪಟ್ಟೇದ ಹೇಳಿಕೆ

    ಅಳವಂಡಿ: ಭೂಮಿಯ ಮೇಲಿನ ಮಣ್ಣು ರಚನೆಯಾಗಲು ಲಕ್ಷಾಂತರ ವರ್ಷಗಳು ಹಿಡಿದಿವೆ. ಅದರಲ್ಲೂ ಭೂಮಿ ಮೇಲಿರುವ ಫಲವತ್ತಾದ ಮಣ್ಣು ಹರಿದು ಹಳ್ಳಕೊಳ್ಳ ಸೇರಿದರೆ ಭೂಮಿ ಬರಡಾಗುತ್ತದೆ. ಹೀಗಾಗಿ ಮಣ್ಣನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ ಎಂದು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ವೀರೇಶ ಪಟ್ಟೇದ ತಿಳಿಸಿದರು.

    ಸಮೀಪದ ಘಟ್ಟಿರಡ್ಡಿಹಾಳದಲ್ಲಿ ಜಿಪಂ, ತಾಪಂ, ಕೃಷಿ ಇಲಾಖೆ, ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಯೋಜನೆ, ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆ, ಕ್ಷೇತ್ರಮಟ್ಟದ ಸರ್ಕಾರೇತರ ಸಂಸ್ಥೆ ಸ್ವೋರ್ಡ-ಕೆ-ಸಾಶ್ವಿಹಳ್ಳಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.

    ಭೂಮಿಯ ಮೇಲ್ಮಟ್ಟದಿಂದ ಹರಿದು ಬರುವ ನೀರನ್ನು ಕಂದಕ ನಿರ್ಮಿಸಿ ನೀರನ್ನು ನಿಲ್ಲಿಸಲಾಗುತ್ತದೆ. ಇಲ್ಲಿ ನೀರಿನ ಜತೆಗೆ ಮಣ್ಣು ಸಹ ಬಂದು ನಿಲ್ಲುತ್ತದೆ. ಇದರಿಂದ ಭೂಸವಕಳಿ ತಡೆದಂತಾಗುತ್ತದೆ ಹಾಗೂ ನೀರನ್ನು ತಡೆದು ಭೂಮಿಯಲ್ಲಿ ಇಂಗಿಸಿದಂತಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಕೂಡ ವೃದ್ಧಿಯಾಗಿ ರೈತರಿಗೆ ಅನೂಕೂಲವಾಗಲಿದೆ ಎಂದರು.

    ಜಲಾನಯನ ತಂಡದ ನಾಯಕ ಗವಿಸಿದ್ದಪ್ಪ, ಸಹಾಯಕರಾದ ಸುರೇಶ ವಾಸ್ತೆ, ವೆಂಕಟೇಶ ಹಳೇಮನಿ, ಗವಿಸಿದ್ದಪ್ಪ ಬಾರಕೇರ, ಬಸನಗೌಡ ಪಾಟೀಲ, ಸಂತೋಷ ಅಂಚಿನಾಳ, ಗ್ರಾಪಂ ಸದಸ್ಯ ಮಹೇಶ ಡಂಬಳ, ಗ್ರಾಮಸ್ಥರಾದ ಚಂದ್ರಪ್ಪ ಸಂಗರಡ್ಡಿ, ಕೃಷ್ಣ, ಉಮೇಶ ಬೆನ್ನಳ್ಳಿ, ಹೇಮಣ್ಣ ಹಳ್ಳಿಗುಡಿ, ಅಧಯ್ಯ, ಸುರೇಶ ಹಳ್ಳಿಗುಡಿ, ಹನುಮಪ್ಪ, ವೀರೇಶ, ರಾಕೇಶ, ಗವಿಸಿದ್ದಪ್ಪ, ಶಂಭುಲಿಂಗಯ್ಯ, ದೇವಪ್ಪ, ಮಲ್ಲಿಕಾರ್ಜುನ, ಶೇಖರಪ್ಪ, ವಿರುಪಾಕ್ಷಿ, ಮಲ್ಲಪ್ಪ, ಬಿಷ್ಟಪ್ಪ, ಪಾಲಾಕ್ಷಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts