More

    ಭಾರತದ ಮಣ್ಣಿನ ಪ್ರತಿ ಕಣದಲ್ಲಿದೆ ಸನಾತನ ಧರ್ಮದ ಛಾಯೆ

    ಆಯನೂರು: ಭಾರತದ ಮಣ್ಣಿನ ಪ್ರತಿ ಕಣದಲ್ಲೂ ಸನಾತನ ಧರ್ಮದ ಛಾಯೆ ಎದ್ದು ಕಾಣುತ್ತದೆ ಎಂದು ನಮೋ ಬ್ರಿಗೇಡ್‌ನ ಕಿರಣ್ ಹೆಗ್ಗದ್ದೆ ತಿಳಿಸಿದರು.

    ಶುಕ್ರವಾರ ಆಗಮಿಸಿದ ಹನುಮಾನ್ ರಥಕ್ಕೆ ಸ್ವಾಗತ ಕೋರಿ ಮಾತನಾಡಿ, ಫೆ.8ರಂದು ತುಮಕೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಆಸೆಯಂತೆ ದೇಶದೆಲ್ಲೆಡೆ ಇಂದು ಧಾರ್ಮಿಕ ಕೇಂದ್ರಗಳ ಪುನರುತ್ಥಾನ ನಡೆಯುತ್ತಿದೆ. ಶತಮಾನಗಳ ನಿರಂತರ ಹೋರಾಟ, ಸ್ವಾಮೀಜಿಗಳು, ಸಾಧು-ಸಂತರ ಶ್ರಮದ ಫಲವಾಗಿ ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದರ ಜತೆಗೆ ರಾಮಲಲ್ಲಾನ ಪ್ರತಿಷ್ಠಾಪನೆಯೂ ಆಗಿದೆ ಎಂದರು.
    ಕರಸೇವಕರ ಹೋರಾಟ ವ್ಯರ್ಥವಾಗದೆ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಮರ್ಯಾದ ಪುರುಷೋತ್ತಮ ರಾಮನ ಭಂಟ ಹನುಮನ ರಥ ಯಾತ್ರೆ ಇಂದು ಗ್ರಾಮಕ್ಕೆ ಆಗಮಿಸಿದೆ. ಪ್ರತಿಯೊಬ್ಬರಲ್ಲೂ ಧಾರ್ಮಿಕ ಭಾವನೆ ಜಾಗೃತಗೊಳಿಸುವ ಸಲುವಾಗಿ ಹನುಮನ ರಥಯಾತ್ರೆ ನಾಡಿನೆಲ್ಲೆಡೆ ಸಂಚರಿಸುತ್ತಿದೆ ಎಂದು ಹೇಳಿದರು.
    ಚಾಮುಂಡಿಪುರದಲ್ಲಿ ಹನುಮ ವಾಹನಕ್ಕೆ ಪೂಜೆ ಮಾಡುವ ಮೂಲಕ ಸ್ವಾಗತಿಸಲಾಯಿತು. ಕೊರಗಿ, ಚೋರಡಿ, ಬಾಳೆಕೊಪ್ಪ, ಮುದುವಾಲ, ಚಾಮುಂಡಿಪುರ, ಆಯನೂರಿನಲ್ಲಿ ರಥ ಯಾತ್ರೆ ವಾಹನ ಸಂಚರಿಸಿತು. ಮಂಜುನಾಥ ಶೆಟ್ಟಿ, ಉದಯ್ ಕುಮಾರ್, ನವೀನ, ಪ್ರಕಾಶ, ನಿಜ ನರಸಿಂಹ, ಶ್ರೀಕಾಂತ್, ಪರಶುರಾಮ, ಹನುಮ, ಜಗದೀಶ್, ಶಶಿ, ಸಿದ್ದು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts