More

    ರೈತರಿಗೆ ಮಣ್ಣು ಅಮೃತ ಸಮಾನ

    ಶಿಕಾರಿಪುರ: ನಮ್ಮ ರೈತರಿಗೆ ಮಣ್ಣು ಅಮೃತ ಸಮಾನ. ಮಣ್ಣನ್ನೇ ನಂಬಿ ಬದುಕುವವರು ಅವರು. ಅಂತಹ ಮಣ್ಣನ್ನು ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸಿ, ಭೂಸಾರ ಸಂರಕ್ಷಣೆ ಮಾಡುವ ಹೊಣೆ ನಮ್ಮ ಮೇಲಿದೆ ಎಂದು ಜಿಲ್ಲಾ ರೋಟರಿ ಗವರ್ನರ್ ಬಿ.ಸಿ.ಗೀತಾ ಹೇಳಿದರು.

    ಪಟ್ಟಣದ ಮೈತ್ರಿ ಶಾಲೆಯಲ್ಲಿ ಏರ್ಪಡಿಸಿದ್ದ ಸ್ಥಳೀಯ ಸಂಸ್ಥೆಗೆ ಗವರ್ನರ್ ಭೇಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪ್ರತಿಯೊಬ್ಬ ರೈತರನ್ನು ಮಣ್ಣು ಪರೀಕ್ಷೆಗೆ ಪ್ರೇರೇಪಿಸಿ, ಮಣ್ಣಿನ ರಸ ಸಾರವನ್ನು ಸಂರಕ್ಷಣೆ ಮಾಡದೇ ಹೋದರೆ ನಮ್ಮ ಫಲವತ್ತಾದ ಭೂಮಿಗಳು ಬರಡಾಗುತ್ತವೆ ಎಂದರು.
    ನೈತಿಕ ಶಿಕ್ಷಣವು ಈಗ ಕಳೆದು ಹೋಗಿದೆ. ನಾಗರಿಕತೆ, ಸಂಸ್ಕಾರ, ಸಂಸ್ಕೃತಿಗಳನ್ನು ಹುಡುಕಬೇಕಾಗಿದೆ. ವಿದೇಶಿಗರ ಆಕರ್ಷಣೆಗೆ ಒಳಗಾಗಿ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಭಾರತೀಯತ್ವವನ್ನು ಉಳಿಸಿಕೊಳ್ಳಲು ನಮ್ಮ ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು
    ಕುವೆಂಪು ವಿವಿ ಚಿನ್ನದ ಪದಕ ವಿಜೇತೆ ಶಿಲ್ಪಶ್ರೀ, ಕರಾಟೆಯಲ್ಲಿ ಸಾಧನೆಗೈದ ಮಿಥುನ್ ಅವರನ್ನು ಸನ್ಮಾನಿಸಲಾಯಿತು. ಅಂಬಾರಗೊಪ್ಪ ಶಾಲೆಗೆ ಮುತ್ತೂಟ್ ಫೈನಾನ್ಸ್ನಿಂದ 50,000 ರೂ. ಮೌಲ್ಯದ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಲಾಯಿತು.
    ರೋಟರಿ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೋಟರಿ ಅಸಿಸ್ಟೆಂಟ್ ಗವರ್ನರ್ ರಾಜೇಂದ್ರ ಪ್ರಸಾದ್, ಶಿವಪ್ರಕಾಶ್, ಎಂ.ಆರ್.ರಘು , ನ್ಯಾಮತಿ ಸಿದ್ದು, ಕಾನೂರು ನಿರಂಜನ್, ಮಲ್ಲೇಶ್, ಶಿವಮೂರ್ತಿ, ಲಕ್ಷ್ಮ್ಮಣ, ಶಂಕರಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts