More

    ಕುಂಬ್ಳೆ 10 ವಿಕೆಟ್ ಕಬಳಿಸಿದ್ದ ಸ್ಟೇಡಿಯಂ ಈಗ ಏನಾಗಿದೆ ಗೊತ್ತೇ?

    ನವದೆಹಲಿ: ಲೆಗ್ ಸ್ಪಿನ್ ದಿಗ್ಗಜ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಟೆಸ್ಟ್ ಪಂದ್ಯದ ಇನಿಂಗ್ಸ್ ಒಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿ ಐತಿಹಾಸಿಕ ‘ಪರ್ಫೆಕ್ಟ್​ 10’ ಸಾಧನೆ ಮಾಡಿದ್ದ ಫಿರೋಜ್ ಷಾ ಕೋಟ್ಲಾ ಮೈದಾನ ಈಗ ವಲಸೆ ಕಾರ್ಮಿಕರ ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಟ್ಟಿದೆ.

    ಕುಂಬ್ಳೆ 10 ವಿಕೆಟ್ ಕಬಳಿಸಿದ್ದ ಸ್ಟೇಡಿಯಂ ಈಗ ಏನಾಗಿದೆ ಗೊತ್ತೇ?

    ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದ ವಲಸೆ ಕಾರ್ಮಿಕರನ್ನು ಕಳೆದ ಮೂರು ದಿನಗಳಿಂದ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಆವರಣದಲ್ಲೇ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲೇ ಅವರಿಗೆ ಆಶ್ರಯ ನೀಡಲಾಗಿದೆ. ಪರೀಕ್ಷೆಯಲ್ಲಿ ನೆಗೆಟಿವ್ ಬಂದವರನ್ನು ಬಳಿಕ ಬಸ್ ಮತ್ತು ರೈಲುಗಳ ಮೂಲಕ ಅವರ ಊರುಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಈಗಾಗಲೆ ಇಲ್ಲಿ 2000-2500 ವಲಸೆ ಕಾರ್ಮಿಕರನ್ನು ಪರೀಕ್ಷೆಗೊಳಪಡಿಸಿದ ಬಳಿಕ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ವಲಸೆ ಕಾರ್ಮಿಕರನ್ನು ಇಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ದೆಹಲಿ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಜಂಟಿ ಕಾರ್ಯದರ್ಶಿ ರಾಜನ್ ಮಂಚಡ ತಿಳಿಸಿದ್ದಾರೆ.

    ಇದನ್ನೂ ಓದಿ: ಐಪಿಎಲ್ ರದ್ದಾದರೆ ಕ್ರಿಕೆಟ್​ಗೆ ಕಷ್ಟ!

    ವಲಸೆ ಕಾರ್ಮಿಕರಿಗೆ ನೆಟ್ಸ್ ಪ್ರದೇಶದೊಳಗೆ ಮಾತ್ರ ಪ್ರವೇಶ ನೀಡಲಾಗಿದೆ. ಡ್ರೆಸ್ಸಿಂಗ್ ರೂಮ್ ಮತ್ತು ಮೈದಾನದೊಳಗೆ ಯಾರಿಗೂ ಪ್ರವೇಶ ನೀಡಲಾಗಿಲ್ಲ ಎಂದು ಡಿಡಿಸಿಎ ಸ್ಪಷ್ಟಪಡಿಸಿದೆ. 1999ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕುಂಬ್ಳೆ 74 ರನ್ ವೆಚ್ಚದಲ್ಲಿ 2ನೇ ಇನಿಂಗ್ಸ್‌ನ ಎಲ್ಲ 10 ವಿಕೆಟ್ ಕಬಳಿಸಿ ವಿಶ್ವದಾಖಲೆ ಬರೆದಿದ್ದರು. ಸುನೀಲ್ ಗಾವಸ್ಕರ್ ಇಲ್ಲೇ 29ನೇ ಟೆಸ್ಟ್ ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆಯನ್ನು ಸರಿಗಟ್ಟಿದ್ದರು. ಸಚಿನ್ ತೆಂಡುಲ್ಕರ್ ಇಲ್ಲೇ 35ನೇ ಟೆಸ್ಟ್ ಶತಕ ಸಿಡಿಸಿ ಸುನೀಲ್ ಗಾವಸ್ಕರ್ ದಾಖಲೆ ಮುರಿದಿದ್ದರು.

    ಇದನ್ನೂ ಓದಿ: ದೈಹಿಕ ಅಂತರ ಕಾಪಾಡುವ ಕ್ರೀಡೆಗೆ ಸಮ್ಮತಿ

    ಈ ಮುನ್ನ, 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಮುಂಬೈನ ವಾಂಖೆಡೆ ಕ್ರೀಡಾಂಗಣ ಮತ್ತು ಬ್ರಬೋರ್ನ್ ಕ್ರೀಡಾಂಗಣವನ್ನೂ ಕ್ವಾರಂಟೈನ್ ವ್ಯವಸ್ಥೆಗಳಿಗೆ ಬಳಸಿಕೊಳ್ಳುವ ಪ್ರಯತ್ನ ನಡೆದಿತ್ತು. ಆದರೆ ಸ್ಥಳೀಯ ನಿವಾಸಿಗಳ ವಿರೋಧದಿಂದಾಗಿ ಈ ನಿರ್ಧಾರವನ್ನು ಕೈಬಿಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts