More

    ದೈಹಿಕ ಅಂತರ ಕಾಪಾಡುವ ಕ್ರೀಡೆಗೆ ಸಮ್ಮತಿ

    ಬೆಂಗಳೂರು: ಈಜುಕೊಳ, ಜಿಮ್ ಹೊರತುಪಡಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬಹುದಾದ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಕ್ರೀಡಾ ಸಚಿವ ಸಿ.ಟಿ. ರವಿ ಹೇಳಿದರು.

    ಕಬಡ್ಡಿ ಕ್ರೀಡೆಗೆ ಅವಕಾಶ ಇಲ್ಲ. ಕ್ರೀಡಾ ಚಟುವಟಿಕೆಗಳ ಸಂದರ್ಭದಲ್ಲಿ ಕೆಲವು ನಿಯಮ ಪಾಲನೆ ಮಾಡಬೇಕು.

    ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಟಿಶ್ಯೂ ಪೇಪರ್ ಇರಬೇಕು. ಪ್ರೇಕ್ಷಕರಿಗೆ ಅವಕಾಶ ಇಲ್ಲದೆ ಕ್ರೀಡೆಗಳು ನಡೆಯಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

    ಇದನ್ನೂ ಓದಿ  ಓಲಾ ಕಂಪನಿಯ 1,400 ನೌಕರರು ಕೆಲಸದಿಂದ ವಜಾ

    ಕ್ಲಬ್​ಗಳಲ್ಲಿ ಅಂತರ ಕಾಯ್ದುಕೊಂಡು ಸ್ಪೋರ್ಟ್ಸ್ ನಡೆಸಬಹುದು. ಜೂನ್ 1ರವರೆಗೆ ಜಿಮ್ ಸ್ವಿಮ್ಮಿಂಗ್, ಕಬಡ್ಡಿ, ಕುಸ್ತಿಗೆ ಅವಕಾಶ ಇಲ್ಲ. ಉಳಿದೆಲ್ಲಾ ಕ್ರೀಡೆಗಳಿಗೆ ಅವಕಾಶವಿದೆ ಎಂದರು. ಫಿಟ್ನೆಸ್ ಸೆಂಟರ್​ಗಳಲ್ಲಿ ವೃತ್ತಿಪರರಿಗೆ ಅವಕಾಶ ಕೊಡಬೇಕು ಎಂಬ ಮನವಿ ಬಂದಿತ್ತು. ಆದರೆ, ಜೂನ್ 1ರವರೆಗೆ ಬೇಡ ಎನ್ನುವ ತೀರ್ವನಕ್ಕೆ ಬರಲಾಗಿದೆ ಎಂದು ಹೇಳಿದರು. ಐಪಿಎಲ್​ನಲ್ಲಿ ಆಟಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದರು.

    ರೆಡ್ ಝೋನ್ ಮುಂಬೈನಲ್ಲಿ ಕ್ರಿಕೆಟ್ ಅಭ್ಯಾಸವಿಲ್ಲ

    ರೆಡ್ ಝೋನ್​ನಲ್ಲಿರುವ ಮುಂಬೈನಲ್ಲಿ ಕ್ರಿಕೆಟಿಗರ ಅಭ್ಯಾಸಕ್ಕೆ ಅವಕಾಶ ಕಲ್ಪಿಸದಿರಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಮುಂಬೈ ನಗರದಲ್ಲಿ ವಾಸಿಸುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮ, ಅಜಿಂಕ್ಯ ರಹಾನೆ ಮತ್ತಿತರ ಪ್ರಮುಖ ಕ್ರಿಕೆಟಿಗರಿಗೆ ಲಾಕ್​ಡೌನ್ 4ನೇ ಹಂತದಲ್ಲೂ ಅಭ್ಯಾಸಕ್ಕೆ ಅವಕಾಶ ದೊರೆಯದಂತಾಗಿದೆ. ಮಹಾರಾಷ್ಟ್ರದ ಗ್ರೀನ್ ಮತ್ತು ಆರೆಂಜ್ ಝೋನ್​ಗಳಲ್ಲಿ ಮಾತ್ರ ಕ್ರಿಕೆಟಿಗರ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಈಜುಪಟುಗಳಿಗೆ ಅವಕಾಶ ನೀಡಬೇಕೆಂದು ಮನವಿ

    ದೇಶದ ಅಗ್ರ ಈಜುಪಟುಗಳ ಅಭ್ಯಾಸಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಕ್ರೀಡಾ ಸಂಕೀರ್ಣಗಳಲ್ಲಿರುವ ಈಜುಕೊಳ ತೆರೆಯಲು ಅನುಮತಿ ನೀಡಬೇಕೆಂದು ಕ್ರೀಡಾ ಸಚಿವಾಲಯಕ್ಕೆ ಭಾರತೀಯ ಈಜು ಸಂಸ್ಥೆ (ಎಸ್​ಎಫ್​ಐ) ಮನವಿ ಸಲ್ಲಿಸಿದೆ. ಈಜುಪಟುಗಳು ನೀರಿಗೆ ಇಳಿಯದೆ 2 ತಿಂಗಳಾಗಿವೆ. ಈಜುಪಟುಗಳು ವಿನೋದಕ್ಕಾಗಿ ಈಜುಕೊಳಕ್ಕೆ ಇಳಿಯುವವರಲ್ಲ. ಟೋಕಿಯೊ ಒಲಿಂಪಿಕ್ಸ್ ಅರ್ಹತೆಯ ಅವಕಾಶ ಹೊಂದಿರುವ ಶ್ರೀಹರಿ ನಟರಾಜನ್, ವೀರ್​ಧವಳ್ ಖಾಡೆ ಅವರಂಥ ಈಜುಪಟುಗಳಿಗಾದರೂ ಈಜುಕೊಳದಲ್ಲಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಎಸ್​ಎಫ್​ಐ ಹೇಳಿದೆ.

    ಅಥ್ಲೀಟ್ಸ್ ತರಬೇತಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ

    ಸ್ಟೇಡಿಯಂಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ (ಎಎಫ್​ಐ) ದೇಶದ ಅಥ್ಲೀಟ್​ಗಳ ಅಭ್ಯಾಸಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಇದರನ್ವಯ ಅಥ್ಲೀಟ್​ಗಳು ಅಭ್ಯಾಸದ ವೇಳೆ ಹ್ಯಾಂಡ್​ಶೇಕ್ ಮಾಡುವಂತಿಲ್ಲ, ಅಪ್ಪಿಕೊಳ್ಳುವಂತಿಲ್ಲ ಮತ್ತು ಉಗುಳುವಂತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಸೆಲೂನ್, ಬ್ಯೂಟಿ ಪಾರ್ಲರ್, ಶಾಪಿಂಗ್ ಮಾಲ್​ಗಳಿಗೆ ಹೋಗುವಂತಿಲ್ಲ.

    ಅಭ್ಯಾಸಕ್ಕಿಳಿದ ದ್ಯುತಿ: ಒಲಿಂಪಿಕ್ಸ್ ಅರ್ಹತೆ ಹಂಬಲದಲ್ಲಿರುವ ಅಥ್ಲೀಟ್ ದ್ಯುತಿ ಚಂದ್ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಬುಧವಾರ ಅಭ್ಯಾಸ ಆರಂಭಿಸಿದ್ದಾರೆ.

    ಅಂಫಾನ್ ಚಂಡಮಾರುತ ಸಂತ್ರಸ್ತರ ರಕ್ಷಣೆ ವೇಳೆಯೂ ಕರೊನಾ ನಿಯಮ ಪಾಲನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts