More

    ಅಂಫಾನ್ ಚಂಡಮಾರುತ ಸಂತ್ರಸ್ತರ ರಕ್ಷಣೆ ವೇಳೆಯೂ ಕರೊನಾ ನಿಯಮ ಪಾಲನೆ!

    ನವದೆಹಲಿ: ಈ ಶತಮಾನದ ಅತ್ಯಂತ ಪ್ರಬಲ ಚಂಡಮಾರುತ ಎಂದೇ ಕುಖ್ಯಾತವಾಗಿರುವ ಅಂಫಾನ್ ಈಗಾಗಲೇ ಭಾರತದ ಪೂರ್ವ ಭಾಗದ ಕರಾವಳಿಗೆ ಅಪ್ಪಳಿಸಿದ್ದು, ಅದರಿಂದ ಸಂತ್ರಸ್ತರಾದವರ ಮತ್ತು ಸಂತ್ರಸ್ತರಾಗುವ ಭೀತಿ ಎದುರಿಸುತ್ತಿರುವವರನ್ನು ರಕ್ಷಿಸುವಲ್ಲಿ ರಾಷ್ಟ್ರೀಯ ಪ್ರಕೃತಿ ವಿಕೋಪ ಕಾರ್ಯಪಡೆ (ಎನ್‌ಡಿಆರ್‌ಎಫ್) ಕಾರ್ಯನಿರತವಾಗಿದೆ.

    ಎನ್‌ಡಿಆರ್‌ಎಫ್‌ನ ಸಿಬ್ಬಂದಿ ಇಂತಹ ತುರ್ತು ರಕ್ಷಣಾ ಕಾರ್ಯದ ನಡುವೆಯೂ ಕರೊನಾ ನಿಯಮಾವಳಿಗಳನ್ನು ನಿರ್ಲಕ್ಷಿಸಿಲ್ಲ ಎಂಬುದು ಗಮನಾರ್ಹವಾಗಿದೆ. ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಕರಾವಳಿಯುದ್ದಕ್ಕೂ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಇದಕ್ಕಾಗಿ ದೋಣಿಗಳನ್ನೂ ಬಳಸಲಾಗುತ್ತಿದೆ.
    ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್ ಅವರು, ‘ಕರೊನಾ ವೈರಸ್ ಹಾವಳಿಯನ್ನೂ ಗಮನದಲ್ಲಿ ಇಟ್ಟುಕೊಂಡು ನಾವು ಅಂಫಾನ್ ಚಂಡಮಾರುತ ಸಂತ್ರಸ್ತರ ರಕ್ಷಣೆಯ ಕಾರ‌್ಯವನ್ನು ನಿರ್ವಹಿಸುತ್ತಿದ್ದೇವೆ’’ ಎಂದು ಹೇಳಿದರು.

    ಇದನ್ನೂ ಓದಿ  ಸ್ಮಾರ್ಟ್​ಫೋನ್​ನಲ್ಲಿ ಕರೊನಾ ಕುರಿತ ಸಂದೇಶ ಕ್ಲಿಕ್​ ಮಾಡುವ ಮುನ್ನ ಎಚ್ಚರ… ಎಚ್ಚರ… ಸಿಬಿಐ ವಾರ್ನಿಂಗ್​!

    ‘‘ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಎಲ್ಲ ತಂಡಗಳಿಗೆ ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‌ಮೆಂಟ್ ಗಳನ್ನು ನೀಡಲಾಗಿದೆ. ಸ್ಯಾನಿಟೈಸರ್, ಸಾಬೂನು, ಫೇಸ್ ಮಾಸ್ಕ್‌ಗಳನ್ನೂ ಒದಗಿಸಲಾಗಿದೆ. ಸಾಮಾಜಿಕ/ದೈಹಿಕ ಅಂತರವನ್ನೂ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿ ರಕ್ಷಣಾ ಕಾರ್ಯ ನಿಧಾನವಾಗುತ್ತಿದೆ’’ ಎಂದು ವಿವರಿಸಿದರು.

    ‘‘ಇದಲ್ಲದೆ ಕೆಲವು ಜನರು ಕೂಡ ಸುರಕ್ಷಿತ ಸ್ಥಳಕ್ಕೆ ಹೋಗಲು ನಿರಾಕರಿಸುತ್ತಿದ್ದಾರೆ. ಈಗಿರುವಲ್ಲಿಯೇ ಇರಲು ಬಯಸುತ್ತಿದ್ದಾರೆ. ಬೇರೆಡೆ ಹೋದರೆ ಕರೊನಾ ಸೋಂಕು ತಗುಲುವುದೆಂಬ ಭಯ ಅವರಲ್ಲಿದೆ’’ ಎಂದು ಹೇಳಿದರು.
    ಬಾಂಗ್ಲಾದೇಶದಲ್ಲಿ ಕೂಡ ಕರೊನಾ ಹಾವಳಿ ಇದ್ದು, ಅಲ್ಲಿಯೂ ಚಂಡಮಾರುತ ಸಂತ್ರಸ್ತರ ವಿಷಯದಲ್ಲಿ ಕರೊನಾ ಮಾರ್ಗಸೂಚಿಯ ನಿಯಮಗಳನ್ನು ಪಾಲಿಸಲಾಗುತ್ತಿದೆ. ಸ್ಥಳಾಂತರಗೊಂಡ ಜನರನ್ನು ಇರಿಸಲು ಈ ಹಿಂದೆ ಬಂದಿದ್ದ ಚಂಡಮಾರುತದ ಸಮಯದಲ್ಲಿ 5 ಸಾವಿರ ಕೇಂದ್ರಗಳನ್ನು ತೆರೆದಿದ್ದರು. ಈಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾದ್ದರಿಂದ 12 ಸಾವಿರ ಕೇಂದ್ರಗಳನ್ನು ತೆರೆದಿದ್ದಾರೆ.

    ಉತ್ತರ ಪ್ರದೇಶ ಸರ್ಕಾರದಿಂದ 15 ಕೋಟಿ ರೂಪಾಯಿ ಮೊತ್ತದ ಮೊದಲ ಕಂತು ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts