More

    ಮೌಲ್ಯಮಾಪನ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪವಿತ್ರ ಕಾರ್ಯ

    ಮಂಗಳೂರು: ಮೌಲ್ಯಮಾಪನವು ಒಂದು ಪವಿತ್ರ ಕಾರ್ಯ‌. ಇದು ವಿದ್ಯಾರ್ಥಿ ಗಳ ಭವಿಷ್ಯ ರೂಪಿಸಲು ಮೈಲುಗಲ್ಲಾಗಿದೆ. ಜ್ಞಾನ ನೀಡುವುದು ಸರ್ವ ಗುರುಗಳ ಆಧ್ಯತೆಯಾಗಿದೆ.ವಿದ್ಯಾದಾನವು ಬದುಕಿನಲ್ಲಿ ದೊರಕುವ ಸುಯೋಗ ಎಂದು ಸಂತ ಆನ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಮರಿಲ್ಡಾ ಎ‌.ಸಿ.ಹೇಳಿದರು.

    ದ.ಕ ಮತ್ತು ಉಡುಪಿ ಜಿಲ್ಲಾ ಇತಿಹಾಸ ಉಪನ್ಯಾಸಕ ಸಂಘದ ವತಿಯಿಂದ 2022-2023ನೇ ಸಾಲಿನ ಸೈಂಟ್ ಆನ್ಸ್ ಇತಿಹಾಸ ಮೌಲ್ಯಮಾಪನ ಕೇಂದ್ರ ದಲ್ಲಿ ಮಂಗಳವಾರ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಉಪನ್ಯಾಸಕರು ಶಿಸ್ತಿನ ಮೂಲಕ ತಮ್ಮ ಶ್ರೇಷ್ಠ ಕರ್ತವ್ಯವನ್ನು ವ್ಯವಸ್ಥಿತ ಸಮಯದಲ್ಲಿ ಪೂರೈಸಿರುವುದು ಶ್ಲಾಘನೀಯ ಎಂದರು.

    ಗೌರವಾರ್ಪಣೆ

    ಕಳೆದ ಹಲವಾರು ವರ್ಷಗಳಿಂದ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ಈ ಶೈಕ್ಷಣಿಕ ಅವಧಿಯಲ್ಲಿ ಸೇವಾ ನಿವೃತ್ತಿ ಹೊಂದಲಿರುವ ಎಡಪದವು ವಿವೇಕಾನಂದ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಸುಬ್ರಹ್ಮಣ್ಯ ಪಿ.ಎಸ್, ಕಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀಧರ್ ಐತಾಳ್ ಮತ್ತು ಡಾಕ್ಟರೇಟ್ ಪದವಿ ಪಡೆದ ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ.ರಂಜಿತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಮೌಲ್ಯಮಾಪನ ಶಿಬಿರದ ವೀಕ್ಷಕ ಸುರೇಶ್, ಶಿಬಿರದ ಮುಖ್ಯ ಪರಿವೀಕ್ಷಕ ಶೀನ.ಡಿ, ಶಿಬಿರದ ಕಚೇರಿ ವಿಭಾಗದ ಮುಖ್ಯಸ್ಥ ರಾಮದಾಸ ಪ್ರಭು, ಅಡ್ಯನಡ್ಕ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಪಟಗಾರ್, ಶಿಬಿರಾಧಿಕಾರಿ ಸುಮನ್ ಡಿಸೋಜಾ, ಕಚೇರಿ ವ್ಯವಸ್ಥಾಪಕರಾದ ಉಪನ್ಯಾಸಕಿ ಗಾಯತ್ರಿ ಶೆಟ್ಟಿ, ರೂಪಾ ಭಟ್, ಶರ್ಮಿಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಉಪನ್ಯಾಸಕ ಎಂ.ಜಿ.ಅಸದಿ ಸ್ವಾಗತಿಸಿದರು.ಉಪನ್ಯಾಸಕಿ ಜಯಶ್ರೀ ವಂದಿಸಿದರು.ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕರಾದ ಡಾ.ಪ್ರಭಾತ್ ಬಲ್ನಾಡ್ ಮತ್ತು ರೂಪಾಕ್ಷ ಮಂಗಳೂರು ಸಹಕರಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts