More

    ಬ್ರಹ್ಮಾಂಡ-ಪಿಂಡಾಂಡ ಸಾಮ್ಯತೆ: ಡಾ. ವ್ಯಾಸರಾಜ ತಂತ್ರಿ

    ಉಡುಪಿ: ಬ್ರಹ್ಮಾಂಡಕ್ಕೂ ಪಿಂಡಾಂಡಕ್ಕೂ ಸಾಮ್ಯತೆಗಳಿವೆ ಎನ್ನುವುದನ್ನು ಆತ್ರೇಯಪುನರ್ವಸು ಮೊದಲಾದ ಋಷಿಗಳು ಚರ್ಚಿಸಿ, ಕಂಡುಕೊಂಡಿದ್ದಾರೆ. ಇದರ ಅನ್ವಯ ಶರೀರದಲ್ಲಿರುವ ಅವಯವಗಳನ್ನು ಆಯುರ್ವೇದದ ಮೂಲಿಕೆಯೇ ಮೊದಲಾದವುಗಳಲ್ಲಿ ಕಾಣಬಹುದು ಎಂದು ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಹೇಳಿದರು.

    ಸೋಮವಾರ ಎಸ್.ಎಂ.ಎಸ್.ಪಿ. ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕಾವ್ಯಶಾಸ್ತ್ರವಿಚಾರಪರಿಷತ್ತಿನ ಆಶ್ರಯದಲ್ಲಿ ಲಕ್ಷ್ಮೀ ಅಮ್ಮ ಮತ್ತು ವೇದಮೂರ್ತಿ ಡಿ.ಬಿ. ಸುಬ್ರಾಯ ಸಾಮಗರ ಸ್ಮರಣಾರ್ಥ ಲೋಕಪುರುಷಸಾಮ್ಯವಾದ ಎಂಬ ಆಯುರ್ವೇದದ ವಿಷಯದಲ್ಲಿ ಉಪನ್ಯಾಸ ನೀಡಿದರು.

    ಹಾಗಲಕಾಯಿ ಪ್ಯಾಂಕ್ರಿಯಾಸ್ ತರಹ ಕಾಣುತ್ತದೆ. ಅದು ಪ್ರಮೇಹರೋಗಕ್ಕೆ ಉತ್ತಮ. ಕಾಂಚನಾರ ವೃಕ್ಷದ ಎಲೆಯಲ್ಲಿ ಥೈರಾಯ್ಡ್ ಗ್ರಂಥಿಯ ಹೋಲಿಕೆಯಿದ್ದು, ಅದು ಥೈರಾಯ್ಡ್ ಸಮಸ್ಯೆಗಳಿಗೆ ಪರಿಣಾಮಕಾರಿ. ವಾಲ್ನಟ್ ಮೆದುಳಿನ ಆಕಾರದಲ್ಲಿದ್ದು ಒಮೆಗಾ 3 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ಪೂರಕ. ಈ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳಾಗಿವೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ದತ್ತಿಪಾರಿತೋಷಕಗಳನ್ನು ವಿತರಿಸಲಾಯಿತು. ಪ್ರಾಚಾರ್ಯ ಪ್ರೊ. ಸತ್ಯನಾರಾಯಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಸಂಚಾಲಕ ಡಾ. ಮಹೇಶ ಭಟ್ಟ ಆರ್. ಹಾರ್ಯಾಡಿ ಸ್ವಾಗತಿಸಿ, ವಿದ್ವಾನ್ ಅನಿಲ ದೇಸಾಯಿ ವಂದಿಸಿದರು. ಸ್ವಾತಿ ಎಂ. ಪ್ರಾರ್ಥನೆ ಮಾಡಿ, ಪವನ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts