More

    ಮುಡಗೇರಿಯಲ್ಲಿ ಉಳಿದ 131 ಎಕರೆ ಸ್ವಾಧೀನಕ್ಕೆ ಭೂ ಮಾಲೀಕರಿಗೆ ಬೆಂಬಲ-ರೂಪಾಲಿ ನಾಯ್ಕ ಭರವಸೆ

    ಕಾರವಾರ: ಮುಡಗೇರಿಯಲ್ಲಿ 26 ವರ್ಷದ ಬಳಿಕ 73 ಎಕರೆ ಪ್ರದೇಶದ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿದೆ. ಉಳಿದ 131 ಎಕರೆಯ ಭೂ ಮಾಲೀಕರ ಬೆಂಬಲಕ್ಕೆ ನಾನು ಸದಾ ನಿಲ್ಲುತ್ತೇನೆ ಎಂದು ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಭರವಸೆ ನೀಡಿದರು.
    ಬುಧವಾರ ಮುಡಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗ್ರಾಮಸ್ಥರ ಪರವಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಉಳಿದ ಭೂಮಿಯನ್ನು ಕೈಗಾರಿಕಾ ವಸಾಹತಿಗಾಗಿ ಸ್ವಾಧೀನಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
    ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಂದ್ರ ಗಾಂವಕರ್ ಸನ್ಮಾನ ಮಾಡಿ ಮಾತನಾಡಿ, ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಗ್ರಾಮದ ಭೂಮಿಯ ಸ್ವಾಧೀನಕ್ಕಾಗಿ ಎರಡು ದಶಕಗಳ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಅತಿ ಕಡಿಮೆ ಪರಿಹಾರವನ್ನು ಕೆಐಎಡಿಬಿ ನೀಡಲು ಮುಂದಾಗಿತ್ತು. ಯಾವುದೇ ಶಾಸಕರು, ಸಚಿವರು ಗ್ರಾಮಸ್ಥರ ಬೆಂಬಲಕ್ಕೆ ಬಂದಿರಲಿಲ್ಲ. ಅತ್ತ ಪರಿಹಾರವೂ ಇಲ್ಲದೇ, ಇತ್ತ ಕೃಷಿ ಮಾಡಲು ಜಮೀನೂ ಇಲ್ಲೇ ಗ್ರಾಮಸ್ಥರು ತೊಂದರೆಗೀಡಾಗಿದ್ದರು. ಆಗಿನ ಶಾಸಕಿ ರೂಪಾಲಿ ನಾಯ್ಕ ಅವರ ಜತೆ ಸಮಸ್ಯೆ ಹೇಳಿಕೊಂಡಾಗ ಅವರು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಜತೆ ಚರ್ಚಿಸಿ ಪ್ರತಿ ಗುಂಟೆಗೆ 1.25 ಲಕ್ಷ ರೂ. ಪರಿಹಾರ ಕೊಡಿಸಿದ್ದಾರೆ. ಅವರ ಕಾರಣದಿಂದಲೇ ಗ್ರಾಮಸ್ಥರಿಗೆ 26 ವರ್ಷಗಳ ನಂತರ ನ್ಯಾಯ ಸಿಕ್ಕಿದೆ ಎಂದರು. ಉಪಾಧ್ಯಕ್ಷೆ ಜ್ಯೋತಿ ಚೋಳಾರ್ ಹಾಗೂ ಎಲ್ಲ ಸದಸ್ಯರು ಇದ್ದರು. ಸದಸ್ಯ ನಂದಕಿಶೋರ ನಾಯ್ಕ ಸ್ವಾಗತಿಸಿದರು.

    ಇದನ್ನೂ ಓದಿ: ರೂಪಾಲಿ ನಾಯ್ಕ ಪ್ರಯತ್ನದಿಂದ ಮುಡಗೇರಿ ಭೂ ಮಾಲೀಕರಿಗೆ ಪರಿಹಾರ ಹಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts