More

    ಮತ್ತೆ ಕರಾಳತೆಯ ಭೀತಿ: ತಾಲಿಬಾನ್​ ಆಳ್ವಿಕೆಯಲ್ಲಿ ಹೆಣ್ಣುಮಕ್ಕಳಿಗೆ ಶಾಲೆ, ಉದ್ಯೋಗ ಅಪರಾಧವಾಗಿತ್ತು!

    ಕಾಬುಲ್​​: ಅಫ್ಘಾನಿಸ್ತಾನದ ನೆಲದ ಮೇಲೆ ತಾಲಿಬಾನ್​ ಆಕ್ರಮಣ ಮಾಡಿಕೊಂಡಿರುವ ಈ ಸಂದರ್ಭದಲ್ಲಿ ಅಫ್ಘನ್​ ಮಹಿಳೆಯರು ತಮ್ಮ ಜೀವ-ಜೀವನಗಳ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ದೇಶದಲ್ಲಿ ಮತ್ತೊಮ್ಮೆ ತಾಲಿಬಾನ್​ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವ ಪರಿಸ್ಥಿತಿಯಲ್ಲಿ, ಹಿಂದಿನ ತಾಲಿಬಾನ್ ಆಳ್ವಿಕೆಯಲ್ಲಿ ಮಹಿಳೆಯರು ಅನುಭವಿಸಿದ್ದ ಕರಾಳ ದಿನಗಳ ನೆನಪು ಕಾಡಲಾರಂಭಿಸಿದೆ.

    1996 ರಿಂದ 2001 ರವರೆಗೆ ತಾಲಿಬಾನ್ ಆಳ್ವಿಕೆ ಇದ್ದಾಗ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಪ್ರಾಥಮಿಕ ಹಕ್ಕುಗಳ ಉಲ್ಲಂಘನೆಗೆ ಕಾನೂನಿನ ಸಮ್ಮತಿ ಸಿಕ್ಕಹಾಗಿತ್ತು. ಶರಿಯ ಮತ್ತು ಇಸ್ಲಾಮಿಕ್​ ಕಾನೂನಿನ ಹೆಸರು ಹೇಳುತ್ತಾ, ಮಹಿಳೆಯರು ಉದ್ಯೋಗದಲ್ಲಿ ತೊಡಗುವುದನ್ನು, ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಡೆಯಲಾಗಿತ್ತು. ಹಿಜಾಬ್​ ತೊಟ್ಟು, ಪುರುಷ ಸಂಬಂಧಿಕ ಜೊತೆಗಿದ್ದರೆ ಮಾತ್ರ ಅಫ್ಘನ್ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಅವಕಾಶ ನೀಡಲಾಗಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಅಕ್ರಮ ಸಾಗಾಟದ ವೇಳೆ ವಾಹನ ಪಲ್ಟಿಯಾಗಿ 50 ಕರುಗಳ ದುರ್ಮರಣ

    ಆದರೆ, ಅಮೆರಿಕದ ಸೇನಾ ಬೆಂಬಲದೊಂದಿಗೆ ರಚಿಸಲಾಗಿದ್ದ ಅಫ್ಘನ್​ ಸರ್ಕಾರದ ಆಳ್ವಿಕೆಯ ಸಂದರ್ಭದಲ್ಲಿ, ಕಳೆದ ಎರಡು ದಶಕಗಳಲ್ಲಿ ಲಕ್ಷಾಂತರ ಅಫ್ಘನ್​ ಹೆಣ್ಣುಮಕ್ಕಳು ಶಾಲೆಗಳಲ್ಲಿ ಕಲಿಯಲು ಆರಂಭಿಸಿದ್ದರು. ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದರು. ವಿಶ್ವ ಬ್ಯಾಂಕ್​ನ ಅಂಕಿಅಂಶದ ಪ್ರಕಾರ ಅಫ್ಘಾನಿಸ್ತಾನದಲ್ಲಿ ಮಹಿಳಾ ಸಾಕ್ಷರತೆಯ ಪ್ರಮಾಣ 2000ದಲ್ಲಿ ಶೇ.17 ಇದ್ದದ್ದು 2018 ರಲ್ಲಿ ಶೇ. 30 ಕ್ಕೆ ಏರಿತ್ತು ಎನ್ನಲಾಗಿದೆ.

    ಇತ್ತೀಚೆಗೆ ತಾಲಿಬಾನ್​ ಪ್ರಾಬಲ್ಯತೆ ಹೆಚ್ಚಿದಂತೆ ಮೇ 2021 ರಿಂದ 2.5 ಲಕ್ಷ ಅಫ್ಘನ್ನರು ದೇಶ ತೊರೆದಿದ್ದು, ಈ ಸಂಖ್ಯೆಯಲ್ಲಿ ಶೇ.80 ರಷ್ಟು ಮಹಿಳೆಯರು ಮತ್ತು ಮಕ್ಕಳಿದ್ದರು ಎಂದು ವಿಶ್ವ ಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ವರದಿ ಮಾಡಿದ್ದಾರೆ. 2009 ರಿಂದ ಅಂಕಿಅಂಶಗಳನ್ನು ದಾಖಲಿಸಲ್ಪಡುತ್ತಿದ್ದು, ಈ ವರ್ಷದ ಮೊದಲ ಆರು ತಿಂಗಳಲ್ಲಿ ಕೊಲ್ಲಲ್ಪಟ್ಟ ಅಫ್ಘನ್ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಅತಿ ಹೆಚ್ಚಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಕಾಬುಲ್​ನ​ಲ್ಲಿ ತಾಲಿಬಾನ್​​ ತಮ್ಮ ಹಕ್ಕುಗಳನ್ನು ಸಂರಕ್ಷಿಸಬೇಕು ಎಂಬ ಬೇಡಿಕೆಯೊಂದಿಗೆ ಕೆಲವು ಮಹಿಳಾ ಗುಂಪುಗಳು ರಸ್ತೆಯಲ್ಲಿ ಪ್ರತಿಭಟನೆ ನಡೆಸಿರುವುದೂ ವರದಿಯಾಗಿದೆ.

    ಇದನ್ನೂ ಓದಿ: ‘ಸುಮಲತಾ ಸುತ್ತಲೂ ಗೂಂಡಾಗಳು, ಕ್ರಿಮಿನಲ್ಸ್‌- ಇಲ್ಲದ ಹುದ್ದೆ ಸೃಷ್ಟಿಸಿಕೊಂಡಿರೋ ಸಂಸದೆ’

    ತಾಲಿಬಾನ್​ ಮುಖಂಡರು ಕಾಬುಲ್ ಮೇಲೆ ಹಿಡಿತ ಸಾಧಿಸಿದ ನಂತರ ನಡೆಸಿದ ಮೊದಲ ಪತ್ರಿಕಾ ಗೋಷ್ಠಿಯಲ್ಲಿ, ತಾವು ಮಹಿಳೆಯರ ಹಕ್ಕುಗಳನ್ನು ಗೌರವಿಸುವುದಾಗಿ ಹೇಳಿದ್ದಾರೆ. ಆದರೆ ಈ ಮಾತುಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸುವ ಸಲುವಾಗಿ ಮಾತ್ರ ಇರಬಹುದು ಎಂಬ ಭಯ ಇದ್ದೇ ಇದೆ. ತಾಲಿಬಾನ್​ನ ಹಿಂದಿನ ನಡವಳಿಕೆಯ ಆಧಾರದಲ್ಲಿ ತಮ್ಮ ಹಕ್ಕುಗಳಿಗೆ ಬರೀ ಬಾಯಿಮಾತಿನಲ್ಲಿ ಮನ್ನಣೆ ಸಿಗುತ್ತದೆ ಎಂಬ ಆತಂಕದೊಂದಿಗೆ ಅಫ್ಘನ್​​ ಮಹಿಳೆಯರು, ಅಂತರಾಷ್ಟ್ರೀಯ ಸಮುದಾಯದ ಕಡೆ ಸಹಾಯಕ್ಕಾಗಿ ಮುಖಮಾಡಿದ್ದಾರೆ. (ಏಜೆನ್ಸೀಸ್)

    ಸೆ.5 ರ ಎನ್​ಡಿಎ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ: ಸುಪ್ರೀಂ ಕೋರ್ಟ್​ ಆದೇಶ

    ಒಲಿಂಪಿಕ್ಸ್​ ಪದಕ ಗೆದ್ದ ಸಿಂಧುಗೆ ಐಸ್ ​ಕ್ರೀಂ ಕೊಡಿಸಿದ ಪ್ರಧಾನಿ ಮೋದಿ!

    ಸೈನಿಕ ಶಾಲೆಗಳಲ್ಲಿ ಇನ್ನು ಮುಂದೆ ಹೆಣ್ಣುಮಕ್ಕಳಿಗೂ ಪ್ರವೇಶಾವಕಾಶ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts