More

    ಪಬ್​ಜಿಗೆ ಪರ್ಯಾಯವಾಗಿ ಬರಲಿದೆ ಫೌಜಿ; ಟೀಸರ್​ 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ

    ನವದೆಹಲಿ: ಚೀನಾ ಮೂಲದ ನಿಷೇಧಿತ ಪಬ್​ಜಿ ಗೇಮ್ಸ್​ಗೆ ಪರ್ಯಾಯವಾಗಿ ಸ್ವದೇಶಿ ನಿರ್ಮಿತ ಫೌಜಿ ಗೇಮ್​ ನವೆಂಬರ್​ನಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿದೆ. ಸೆಪ್ಟೆಂಬರ್ ತಿಂಗಳಲ್ಲೇ ಫೌಜಿ ಗೇಮ್​​ನ ಅಧಿಕೃತ ಟೀಸರ್ ಬಿಡುಗಡೆ ಮಾಡಿದ್ದ ಕಂಪನಿ ಇದೀಗ ಗೇಮ್ ಲೋಕಾರ್ಪಣೆಗೆ ದಿನ ನಿಗದಿ ಮಾಡಲು ಮುಂದಾಗಿದೆ. ಇಂದಿನ ತನಕ ಟೀಸರ್ ವೀಕ್ಷಿಸಿದವರ ಸಂಖ್ಯೆ 5.4 ಲಕ್ಷಕ್ಕೂ ಅಧಿಕ. ಇಂದು ಮತ್ತೆ ಇನ್ನೊಂದು ಟೀಸರ್ ಬಿಡುಗಡೆ ಮಾಡಿದ್ದು, ಫೌಜಿಯನ್ನು ಭಾರತೀಯ ಸೇನೆಗೆ ಅರ್ಪಿಸಿದೆ.

    ಇಷ್ಟೊಂದು ಹವಾ ಸೃಷ್ಟಿಸಿರುವ ಈ ಗೇಮ್​ ಬೆಂಗಳೂರು ಮೂಲದ ಎನ್​ಕೋರ್ ಗೇಮ್ಸ್ ಅಭಿವೃದ್ಧಿಪಡಿಸಿದ್ದಾಗಿದೆ. ‘ಫಿಯರ್​ಲೆಸ್ ಆಂಡ್ ಯುನೈಟೆಡ್-ಗಾರ್ಡ್ಸ್ ಎಂಬುದು ಫೌಜಿ ವಿಸ್ತೃತ ರೂಪ. ಈ ಗೇಮ್ ಹೊರತರುತ್ತಿರುವುದಾಗಿ ಕಳೆದ ಸೆಪ್ಟೆಂಬರ್​ನಲ್ಲಿ ಘೋಷಿಸಿತ್ತು. ಈ ಬಗ್ಗೆ ಹೊಸ ಟೀಸರ್​ನಲ್ಲಿ ಮಾಹಿತಿ ನೀಡಿರುವ ಎನ್​ಕೋರ್ ಗೇಮ್ಸ್ ಸಂಸ್ಥೆ, ‘ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಜಯಿಸುತ್ತದೆ, ಬೆಳಕು ಯಾವಾಗಲೂ ಕತ್ತಲೆಯನ್ನು ಜಯಿಸುತ್ತದೆ. ಹೀಗೆ ಫೌಜಿಗೂ ವಿಜಯ ಲಭಿಸಲಿ. 2020ರ ನವೆಂಬರ್​ನಿಂದ ಫೌಜಿ ಪ್ರಾರಂಭವಾಗಲಿದೆ’ ಎಂದು ತಿಳಿಸಿದೆ.

    ಇದನ್ನೂ ಓದಿ: ಓರ್ವ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ; ಶರಣಾದ ಮತ್ತೊಬ್ಬ ಭಯೋತ್ಪಾದಕ

    ಟೀಸರ್​ನಲ್ಲಿ ಸೇನಾ ಕಾರ್ಯಾಚರಣೆಯ ಕೆಲ ಸನ್ನಿವೇಶಗಳನ್ನು ತೋರಿಸಲಾಗಿದ್ದು, ಇವು ಗೇಮ್​ನಲ್ಲೂ  ಲಭ್ಯ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಫೌಜಿ ಗೇಮ್ಸ್ ಅನ್ನು ಭಾರತೀಯ ಸಶಸ್ತ್ರ ಪಡೆಗಳಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿದೆ. ಜತೆಗೆ ಈ ಗೇಮ್ ನಲ್ಲಿ  ಬಂದ ಆದಾಯದಲ್ಲಿ ಶೇ. 20 ಪಾಲನ್ನು ಗೃಹ ಸಚಿವಾಲಯದ ‘ಭಾರತ್ ಕೆ ವೀರ್’ ಪ್ರತಿಷ್ಠಾನಕ್ಕೆ ನೀಡಲಾಗುವುದು ಎಂದು ಎನ್​ಕೋರ್ ಗೇಮ್ಸ್ ತಿಳಿಸಿದೆ. (ಏಜೆನ್ಸೀಸ್)

    ಬಾಡಿಗೆ ಪಾವತಿ ವಿಚಾರ: ಕೇಂದ್ರ ಸಚಿವ ಪೋಖ್ರಿಯಾಲ್​ ವಿರುದ್ಧದ ನ್ಯಾಯಾಂಗ ನಿಂದನೆಗೆ ಸುಪ್ರೀಂ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts