More

    1.80 ಲಕ್ಷ ರೂ. ಸಾಲದ ವಿಚಾರವಾಗಿ ಎನ್​ಆರ್​ಐ ಪುತ್ರ ಹಾಗೂ ಸೊಸೆ ಜತೆ ಜಗಳ, ಅಂತ್ಯ ಮಾತ್ರ ದಾರುಣ

    ಸೂರತ್​: ಮನೆಯ ನವೀಕರಣಕ್ಕಾಗಿ ಎನ್​ಆರ್​ಐ ಪುತ್ರ ಪಡೆದಿದ್ದ 1.80 ಲಕ್ಷ ರೂ. ಸಾಲ ಮರಳಿಸುವ ವಿಷಯವಾಗಿ ಉಂಟಾದ ಜಗಳದಲ್ಲಿ ತಂದೆಯೇ ಪುತ್ರನನ್ನು ಇರಿದು ಕೊಂದಿದ್ದಾರೆ.

    ಇಮ್ರಾನ್​ (36) ಕೊಲೆಯಾದವರು. ಅಬ್ದುಲ್​ ಹಮೀದ್​ ಮಣಿಯಾರ್​ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
    ಲಂಡನ್​ನಲ್ಲಿ ನೆಲೆಸಿದ್ದ ಇಮ್ರಾನ್​ ಇತ್ತೀಚೆಗೆ ಪತ್ನಿಯೊಂದಿಗೆ ಭಾರತಕ್ಕೆ ಬಂದಿದ್ದರು. ತಮ್ಮ ತಂದೆಯಿಂದ 1.80 ಲಕ್ಷ ರೂ. ಪಡೆದು ತಮ್ಮ ಒಡೆತನದ ಮನೆಯನ್ನು ನವೀಕರಿಸಿದ್ದರು. ಲಾಕ್​ಡೌನ್​ ಹಿನ್ನೆಲೆಯಲ್ಲಿ ತುಂಬಾ ಕಾಲ ಇಲ್ಲಿಯೇ ಇರಬೇಕಾಗಿ ಬಂದಿತ್ತು.

    ತನ್ನ ಪ್ರಜೆಗಳಿಗಾಗಿ ಬ್ರಿಟನ್​ ಸರ್ಕಾರ ಭಾರತದಿಂದ ಶನಿವಾರ ವಿಶೇಷ ವಿಮಾನದ ಏರ್ಪಾಟು ಮಾಡಿದೆ. ಈ ವಿಮಾನದಲ್ಲಿ ಲಂಡನ್​ಗೆ ಮರಳಲು ಇಮ್ರಾನ್​ ಸಿದ್ಧತೆ ನಡೆಸಿದ್ದರು.

    ವಿಷಯ ಗೊತ್ತಾಗುತ್ತಲೇ ಪುತ್ರನ ಮನೆಗೆ ಹೋದ ಅಬ್ದುಲ್​ ಹಮೀದ್​ ಮಣಿಯಾರ್​ ಹಣದ ವಿಷಯವಾಗಿ ಸೊಸೆ ಶಾಮ್ಸುನ್ನೀಸಾ ಜತೆ ವಾಗ್ವಾದಕ್ಕಿಳಿದಿದ್ದರು. ಅಷ್ಟರಲ್ಲೇ ಮನೆಗೆ ಮರಳಿದ ಇಮ್ರಾನ್​, ಮನೆ ನವೀಕರಣಕ್ಕೆ ಸ್ನೇಹಿತರಿಂದಲೂ ಹಣ ಪಡೆದಿದ್ದೇನೆ. ಆ ಸಾಲವನ್ನು ತೀರಿಸಿದ ಬಳಿಕ ನಿಮ್ಮ ಸಾಲ ತೀರಿಸುತ್ತೇನೆ. ಇಲ್ಲ ತುರ್ತು ಇದೆ ಎಂದಾದರೆ, ನನ್ನ ಮನೆಯ ಒಂದು ಭಾಗವನ್ನು ಬಾಡಿಗೆಗೆ ಕೊಟ್ಟು ಬರುವ ಬಾಡಿಗೆಯನ್ನು ಸಾಲಕ್ಕೆ ಸರಿಮಾಡಿಕೊಳ್ಳಿ ಎಂದು ತಂದೆಗೆ ಹೇಳಿದ್ದರು ಎನ್ನಲಾಗಿದೆ.

    ಆದರೆ, ಈ ವಿಷಯವನ್ನು ಒಪ್ಪದ ಅಬ್ದುಲ್​ ಹಮೀದ್​ ಮಣಿಯಾರ್​, ತಮಗೆ ಈಗಲೇ ಹಣಬೇಕು ಎಂದು ಹಟ ಹಿಡಿದರು ಎನ್ನಲಾಗಿದೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದ್ದು, ಕೋಪದಲ್ಲಿ ಅಬ್ದುಲ್​ ಪುತ್ರನ ಹೆಗಲು ಮತ್ತು ಕೊಂಕಳಿಗೆ ಚೂರಿಯಿಂದ ಇರಿದರು ಎನ್ನಲಾಗಿದೆ. ತೀವ್ರ ರಕ್ತಸ್ರಾವವಾಗಿ ಇಮ್ರಾನ್​ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಲಾಲ್​ಗೇಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮಾಸ್ಕ್​ ಧರಿಸುವುದು ಹೇಗೆ ಎಂದು ತೋರಿಸಲು ಹೋಗಿ ಮುಜುಗರಕ್ಕೆ ಒಳಗಾದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೋಸಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts