More

    ‘ಆಕ್ಸಿಜನ್ ಲೆವೆಲ್ 74, ಯಾವ ಆಸ್ಪತ್ರೆಯಲ್ಲೂ ಕರೆ ಸ್ವೀಕರಿಸ್ತಿಲ್ಲ.. ಪ್ಲೀಸ್ ಹೆಲ್ಪ್​ ಮಾಡಿ’: ಭಾರತದಲ್ಲಿರುವ ತಂದೆಗಾಗಿ ಅಮೆರಿಕದಲ್ಲಿರುವ ಪುತ್ರಿಯ ಮನವಿ

    ನವದೆಹಲಿ: ಕೋವಿಡ್​-19 ವೈರಸ್ ಸೋಂಕಿನ ತೀವ್ರತೆಗೆ ಭಾರತದಲ್ಲಿ ದಿನವೊಂದಕ್ಕೆ ಲಕ್ಷಲಕ್ಷ ಸಂಖ್ಯೆಯಲ್ಲಿ ಜನರು ಸೋಂಕಿತರಾಗುತ್ತಿದ್ದು ಆಕ್ಸಿಜನ್, ಹಾಸಿಗೆ, ಐಸಿಯುಗಳ ಭಾರಿ ಕೊರತೆ ಎದುರಾಗಿದೆ. ಮಾತ್ರವಲ್ಲ ಹಣ ಎಷ್ಟು ಕೊಟ್ಟರೂ ತುರ್ತು ಸವಲತ್ತು ಸಿಗದಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಭಾರತದಲ್ಲಿರುವ ತಂದೆಗೆ ಯಾರಾದರೂ ಸಹಾಯ ಮಾಡಿ ಎಂದು ಅಮೆರಿಕದಲ್ಲಿರುವ ಪುತ್ರಿ ಮನವಿ ಮಾಡಿಕೊಂಡಿದ್ದಾರೆ.

    ‘ನನ್ನ ತಂದೆಯ ಆಕ್ಸಿಜನ್ ಮಟ್ಟ 74 ಇದೆ, ಆದರೆ ಯಾವ ಆಸ್ಪತ್ರೆಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಮನೆಯಲ್ಲಿ ಎಲ್ಲರೂ ಕೋವಿಡ್ ಪಾಸಿಟಿವ್ ಆಗಿದ್ದಾರೆ, ನಾನು ಅಮೆರಿಕದಲ್ಲಿ ಇರುವುದರಿಂದ ಅಸಹಾಯಕಳಾಗಿದ್ದೇನೆ, ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಈ ಯುವತಿ ಟ್ವೀಟ್ ಮೂಲಕ ಕೋರಿಕೊಂಡಿದ್ದಾರೆ.

    ಅಮೆರಿಕದಲ್ಲಿರುವ ಚಾಂದನಿ ಸೋಳಂಕಿ ಎಂಬ ಯುವತಿ, ಭಾರತದ ಡೆಹ್ರಾಡೂನ್​ನಲ್ಲಿರುವ ತಂದೆಗಾಗಿ, ತಮ್ಮ ಕುಟುಂಬ ಸದಸ್ಯರಿಗಾಗಿ ಟ್ವೀಟ್ ಮೂಲಕ ಮಾಡಿಕೊಂಡಿರುವ ಈ ಮನವಿ ಬಾಲಿವುಡ್ ನಟಿ ತಾಪ್ಸಿ ಪನ್ನು ಗಮನ ಸೆಳೆದಿದೆ. ಅವರು ಅದನ್ನು ರಿಟ್ವೀಟ್ ಮಾಡಿಕೊಂಡು, ‘ಡೆಹ್ರಾಡೂನ್​ನಲ್ಲಿ ಸಹಾಯದ ಅಗತ್ಯವಿದೆ’ ಎಂದು ಕೋರಿಕೊಳ್ಳುವ ಮೂಲಕ ನೆರವು ಒದಗಿಸುವ ಪ್ರಯತ್ನ ಮಾಡಿದ್ದಾರೆ.

    ನಟಿ ತಾಪ್ಸಿ ಪನ್ನುವಿನ ಈ ಸಹಾಯಕ್ಕೆ ಪ್ರತಿಕ್ರಿಯಿಸಿರುವ ಚಾಂದನಿ ಥ್ಯಾಂಕ್ಸ್ ಹೇಳುವ ಜತೆಗೆ ತಮ್ಮ ಸಂಕಷ್ಟದ ಸ್ಥಿತಿಯನ್ನು ಮತ್ತಷ್ಟು ಬಿಚ್ಚಿಟ್ಟಿದ್ದಾರೆ. ‘ಡೆಹ್ರಾಡೂನ್​ನಲ್ಲಿರುವ ನಮ್ಮ ಮನೆಯಲ್ಲಿ ತಂದೆ-ತಾಯಿ ಇಬ್ಬರ ಜತೆಗೆ ಸಹೋದರಿಯೂ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಸಹೋದರಿಗೆ 2 ತಿಂಗಳ ಮಗು, 4 ವರ್ಷದ ಮಗಳಿದ್ದು, ಅವಳ ಪತಿ, ನನ್ನ ಸಹೋದರ ಮಾತ್ರವಲ್ಲ ನಾನು ಕೂಡ ಅಸಹಾಯಕಳಾಗಿದ್ದೇನೆ’ ಎಂದು ಚಾಂದನಿ ಹೇಳಿಕೊಂಡಿದ್ದಾರೆ. ಚಾಂದನಿ ಮಾತ್ರವಲ್ಲದೆ ಕೋವಿಡ್ ಸಂದರ್ಭದಲ್ಲಿ ಇಂಥ ಸಹಾಯ ಅಗತ್ಯವಿರುವ ಹಲವರ ಕೋರಿಕೆಯನ್ನು ರಿಟ್ವೀಟ್ ಮಾಡಿಕೊಳ್ಳುವ ಮೂಲಕ ತಾಪ್ಸಿ ಪನ್ನು ನೆರವು ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

    ಕೋವಿಡ್ ವಿರುದ್ಧ ಫೀಲ್ಡ್​ಗೆ ಇಳೀತಾರಂತೆ ಕೊಹ್ಲಿ ದಂಪತಿ; ‘ನೀವೂ ಕೈಜೋಡಿಸಿ..’ ಅಂದ್ರು ಗಂಡನ ಪರವಾಗಿ ಹೆಂಡತಿ

    ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts