More

    ಶೇ.95 ಮಕ್ಕಳಿಗೆ ಪೋಲಿಯೋ ಹನಿ

    ಚಿಕ್ಕಮಗಳೂರು: ಜಿಲ್ಲಾದ್ಯಂತ ಭಾನುವಾರ 81802 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು. 85 ಸಾವಿರ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, (ಶೇ.95) ಪೂರೈಸಲಾಗಿದೆ. ಫೆ.1, 2ರಂದು ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುವುದು.

    ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ರೋಟರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಲಿಯೋ ಲಸಿಕೆ ಅಭಿಯಾನಕ್ಕೆ ವೈದ್ಯರು, ಅಧಿಕಾರಿಗಳು ಚಾಲನೆ ನೀಡಿದರು.

    ನಂತರ ಜಿಲ್ಲಾ ಸರ್ಜನ್ ಡಾ. ಮೋಹನ್​ಕುಮಾರ್ ಮಾತನಾಡಿ, ಒಮ್ಮೆಲೆ ಎಲ್ಲ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

    ದೇಶದಲ್ಲಿ ಪೋಲಿಯೋ ಲಸಿಕೆ ಅಭಿಯಾನ ಆರಂಭಿಸಿ ಹತ್ತು ವರ್ಷ ಕಳೆದಿದ್ದು ಮುಂದಿನ ವರ್ಷದಿಂದ ಇದು ಮುಂದುವರಿಸಬೇಕೆ ? ಬೇಡವೇ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸುತ್ತದೆ ಎಂದರು.

    ಜಿಪಂ ಸದಸ್ಯೆ ಜಸಂತಾ ಅನಿಲ್​ಕುಮಾರ್ ಮಾತನಾಡಿ, ಅಂಗವಿಕಲತೆ ತಡೆಗಟ್ಟಲು ಸರ್ಕಾರ ಪೋಲಿಯೋ ಲಸಿಕೆ ಅಭಿಯಾನ ಹಮ್ಮಿಕೊಂಡಿದೆ. ಗ್ರಾಮಾಂತರ ಭಾಗಗಳಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಪೋಲಿಯೋ ನಿಮೂಲನೆಗೆ ಶ್ರಮವಹಿಸುತ್ತಿದ್ದಾರೆ ಎಂದರು.

    4090 ಸಿಬ್ಬಂದಿ: ಕಳೆದ ವರ್ಷದಂತೆ ಈ ಸಾಲಿನಲ್ಲೂ ಒಂದು ಸುತ್ತಿನ ಲಸಿಕೆ ಮಾತ್ರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 974 ಬೂತ್ ಗಳಲ್ಲಿ 4090 ಸಿಬ್ಬಂದಿ ನಿಯೋಜಿಸಲಾಗಿದ್ದು, ಒಂದು ಲಕ್ಷ ಲಸಿಕೆಯನ್ನು ಜಿಲ್ಲೆಯ ಎಲ್ಲ ಲಸಿಕಾ ಕೇಂದ್ರಗಳಿಗೂ ತಲುಪಿಸಲಾಗಿದೆ ಎಂದು ಜಿಲ್ಲಾ ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಅನುಷ್ಠಾನಾಧಿಕಾರಿ ಡಾ. ಕೆ.ಭರತ್​ಕುಮಾರ್ ತಿಳಿಸಿದರು.

    ಕರೊನಾ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಸೇರಿ ಹಲವು ಮಾನದಂಡಗಳನ್ನು ಪಾಲಿಸಬೇಕೆಂದು ಸೂಚನೆ ನೀಡಲಾಗಿದ್ದು ಶೇ.100 ತಲುಪಲು ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಸಿಬ್ಬಂದಿ ಶ್ರಮವಹಿಸಲಾಗಿದೆ ಎಂದರು.

    ಡಿಎಚ್​ಒ ಡಾ. ಉಮೇಶ್, ಎಎಸ್ಪಿ ಶ್ರುತಿ, ಡಾ. ಅಶ್ವತ್ಥ್​ಬಾಬು, ಡಾ. ಸೀಮಾ, ಡಾ. ಲೋಹಿತ್, ರೋಟರಿ ಅಧ್ಯಕ್ಷ ಜಿ.ಎಲ್.ವೆಂಕಟೇಶ್​ವುೂರ್ತಿ, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts