More

    ಪ್ರಾಣ ಬಿಟ್ಟರೂ ಜಮೀನು ಬಿಡಲ್ಲ ಎಂದ ರೈತರು! ಭೂಸ್ವಾಧೀನಕ್ಕೆ ಧಾರವಾಡದಲ್ಲಿ ಕೃಷಿಕರ ವಿರೋಧ…

    ಧಾರವಾಡ: ಸುವರ್ಣ ಕರ್ನಾಟಕ ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಭೂಸ್ವಾಧೀನದ ಪ್ರಕ್ರಿಯೆ ಶುರುವಾಗಲಿದೆ. ಕೈಗಾರಿಕಾ ಕಾರಿಡಾರ್​ಗೆ ಫಲವತ್ತಾದ ಭೂಮಿಯನ್ನೇ ಸರ್ಕಾರ ಸ್ವಾಧೀನ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿರುವ ಜನರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಯೋಜನೆಯ ಭೂಸ್ವಾಧೀನಕ್ಕೆ ಧಾರವಾಡದಲ್ಲಿ ಸುಮಾರ 12 ಹಳ್ಳಿಗಳ ರೈತರಿಂದ ವಿರೋಧ ವ್ಯಕ್ತವಾಗುತ್ತಿದೆ. ಧಾರವಾಡ ತಾಲೂಕಿನ ಸುವರ್ಣ ಕರ್ನಾಟಕ ಕೈಗಾರಿಕಾ ಕಾರಿಡಾರ್​ಗಾಗಿ ಬರೋಬ್ಬರಿ 5129 ಎಕರೇ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ.

    ಆದರೆ ಸರ್ಕಾರ ಗುರುತಿಸಿದ್ದೆಲ್ಲವೂ ಫಲವತ್ತಾದ ಕೃಷಿ ಭೂಮಿ. ಒಳ್ಳೆಯ ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಬೇಡ ಎಂದು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಗುಳೇದಕೊಪ್ಪ, ವೆಂಕಟಾಪುರ, ಮದಿಕೊಪ್ಪ, ಕುಮ್ಮನಾಯಕನಕೊಪ್ಪ, ಕೋಟೂರ,ಹೆಗ್ಗೇರಿ, ಕಲ್ಲಾಪುರ, ವೀರಾಪುರ, ಹೊಸವಾಳ, ರಾಮಾಪುರ, ವರವನಾಗಲಾವಿ. ಶಿಂಗನಹಳ್ಳಿಯ ರೈತರ ಜಮೀನುಗಳನ್ನು ಸರ್ಕಾರ ಸ್ವಾಧೀನ ಮಾಡಲು ಮುಂದಾಗಿದೆ.

    ಈ ಬಗ್ಗೆ ಸಿಟ್ಟಿಗೆದ್ದಿರುವ ರೈತರು ಪ್ರಾಣ ಕೊಡುತ್ತೇವೆ, ಆದರೆ ಜಮೀನು ಕೊಡುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈಗಾಗಲೇ ಕೆಐಎಡಿಬಿಯಿಂದ ಪ್ರಕ್ರಿಯೆ ಆರಂಭಗೊಂಡಿದ್ದು ಈ ಹಿನ್ನೆಲೆಯಲ್ಲಿ ರೈತರಿಂದ ಹೋರಾಟ ಶುರುವಾಗಿದೆ. ರೈತರು, ಬರುವ ವಿಧಾನಸಭೆ ಚುನಾವಣೆಯನ್ನೂ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts