More

    ಜಾನುವಾರು ಹರಾಜು ಕೂಗಿ ರೈತರ ವಿನೂತನ ಪ್ರತಿಭಟನೆ

    ಮಾಯಕೊಂಡ: ಕೃಷಿ ಉತ್ಪನ್ನಗಳು ಕನಿಷ್ಠ ಬೆಂಬಲ ಬೆಲೆಗೆ ಕಡಿಮೆ ಇಲ್ಲದಂತೆ ಮಾರಾಟವಾಗಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿರುವ ಜಿಲ್ಲೆಯ ರೈತರು ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದು, ಈಗ ಜಾನುವಾರುಗಳನ್ನು ಹರಾಜು ಕೂಗುವ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ.

    ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ಮಾಯಕೊಂಡದ ನಾಡಕಚೇರಿ ಎದುರು ಕುರಿ, ಮೇಕೆ, ಹಸು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳನ್ನು ತಂದು ನಿಲ್ಲಿಸಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಈ ಜಾನುವಾರುಗಳ ಸಾಕಣೆ ರೈತರಿಗೆ ಉಪ ಕಸುಬಾಗಿದ್ದು, ಅವುಗಳನ್ನೇ ಹರಾಜು ಕೂಗುವ ಮೂಲಕ ರೈತರು ಸೋಮವಾರ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

    ಇದನ್ನೂ ಓದಿ:   ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ; ಹುಡುಗಿ ನೋವಿನಲ್ಲಿ ನರಳುತ್ತಿದ್ದರೂ ದೆವ್ವದ ಭಯದಿಂದ ದೂರ ನಿಂತ ಜನ

    ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದ್ದರೂ ರೈತರ ಪಾಲಿಗೆ ಅದು ಕನ್ನಡಿಯೊಳಗಿನ ಗಂಟಾಗಿದೆ. ಕೇಂದ್ರದ ಈ ಯೋಜನೆಯನ್ನು ಜಾರಿಗೆ ತರುವಲ್ಲಿ ರಾಜ್ಯದ ಐಎಎಸ್, ಐಪಿಎಸ್ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಇದನ್ನೂ ಓದಿ:   ಜಮ್ಮುಕಾಶ್ಮೀರದಲ್ಲಿ ಕಿಡಿ ಹೊತ್ತಿಸಿದ ಮೆಹಬೂಬಾ ಮುಫ್ತಿ; ಪ್ರತಿಭಟನಾ ನಿರತ ಮಹಿಳೆಯ ಬಂಧನ

    ಮಾರುಕಟ್ಟೆಯಲ್ಲಿ ಮೆಕ್ಕೆಜೋಳ, ಭತ್ತ ಇನ್ನಿತರ ಬೆಳೆಗಳು ಬಹಳ ಕಡಿಮೆ ದರದಲ್ಲಿ ಮಾರಾಟವಾಗುತ್ತಿವೆ. ಇದರಿಂದಾಗಿ ರೈತರಿಗೆ ನ್ಯಾಯೋಚಿತ ಬೆಲೆ ಸಿಗುತ್ತಿಲ್ಲ. ರೈತರ ಸಂಕಷ್ಟಕ್ಕೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
    ಗೌಡ್ರ ಅಶೋಕ್, ನಿಂಗಣ್ಣ, ಅಣಬೇರು ಕುಮಾರಸ್ವಾಮಿ, ಪ್ರತಾಪ್, ಹೊರಕೆರಪ್ಪ, ಮುಂಡರಗಿ ರಾಮಣ್ಣ, ಲೋಕಣ್ಣ, ಮಲ್ಲಿಕಣ್ಣ, ಮಧು ಇದ್ದರು.

    ಬಾಡಿಗೆ ಪಾವತಿ ವಿಚಾರ: ಕೇಂದ್ರ ಸಚಿವ ಪೋಖ್ರಿಯಾಲ್​ ವಿರುದ್ಧದ ನ್ಯಾಯಾಂಗ ನಿಂದನೆಗೆ ಸುಪ್ರೀಂ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts