More

    ಕ್ರಿಕೆಟ್​ ಪಟು ಧೋನಿಯನ್ನು ಕಾಣಲು 16 ದಿನ ನಡೆದು ಬಂದ ಅಭಿಮಾನಿ!

    ರಾಂಚಿ : ಕ್ರಿಕೆಟ್​ ಆಟಗಾರರೆಂದರೆ ನಮ್ಮ ಯುವಜನರಿಗೆ ಎಲ್ಲಿಲ್ಲದ ಅಭಿಮಾನ. ಅದೇ ಇಲ್ಲೊಬ್ಬ ಯುವಕ, ಕ್ರಿಕೆಟ್​​ ಪಟು ಎಂ.ಎಸ್​.ಧೋನಿ ಬಗ್ಗೆ ಅಸಾಮಾನ್ಯ ಅಭಿಮಾನ ಪ್ರದರ್ಶಿಸಿದ್ದಾನೆ. ಈ ಯುವ ಅಭಿಮಾನಿ ತನ್ನ ಹಳ್ಳಿಯಿಂದ ಧೋನಿ ನಿವಾಸದವರೆಗೆ 16 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ತಲುಪಿದ್ದಾನೆ!

    ಹರಿಯಾಣದ ಹಿಸಾರ್​​ ಜಿಲ್ಲೆಯ ಜಾಲನ್​ ಖೇಡ ಗ್ರಾಮದ 18 ವರ್ಷದ ಅಜಯ್​ ಗಿಲ್​ ಎಂಬುವ ತನ್ನ ಹಳ್ಳಿಯಿಂದ ಧೋನಿಯವರ ರಾಂಚಿ ನಿವಾಸದವರೆಗೆ, ಅಂದರೆ ಸುಮಾರು 1,400 ಕಿಲೋಮೀಟರ್​ ದೂರ, ನಡೆದುಕೊಂಡು ಬಂದಿದ್ದಾನೆ. ಗ್ರಾಮದ ಸಲೂನಿನಲ್ಲಿ ಕೆಲಸ ಮಾಡುವ ಈ ಯುವಕ ತಲೆಯ ಒಂದು ಕಡೆ ಧೋನಿ ಎಂದೂ, ಇನ್ನೊಂದು ಕಡೆ ಮಾಹಿ ಎಂದೂ ಕೂದಲಲ್ಲಿ ಡಿಸೈನ್​ ಮಾಡಿಸಿಕೊಂಡಿದ್ದು, ತಾನು ತಂದಿದ್ದ ಭಾರತದ ಬಾವುಟಕ್ಕೆ ಧೋನಿ ಸಹಿ ಮಾಡಿಸಿಕೊಳ್ಳಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾನೆ.

    ಕ್ರಿಕೆಟ್​ ಪಟು ಧೋನಿಯನ್ನು ಕಾಣಲು 16 ದಿನ ನಡೆದು ಬಂದ ಅಭಿಮಾನಿ!

    ಆದರೆ “ತಮ್ಮ ಅಭಿಮಾನಿಯೊಂದಿಗೆ 10 ನಿಮಿಷವಾದರೂ ಮಾತಾಡೇ ಆಡ್ತಾರೆ” ಎಂಬ ವಿಶ್ವಾಸದಿಂದ ಬಂದಿದ್ದ ಈ ಯುವಕನಿಗೆ, ಸದ್ಯಕ್ಕೆ ನಿರಾಸೆ ಕಾದಿತ್ತು. ಕಾರಣ, ಯುಎಇಯಲ್ಲಿ ನಡೆಯುವ ಐಪಿಎಲ್​ 2021 ಪಂದ್ಯಾವಳಿಗೆ ತೆರಳುವ ಸಲುವಾಗಿ, ಮಹೇಂದ್ರ ಸಿಂಗ್​ ಧೋನಿ ಅವರು, ಅದಾಗಲೇ ಚೆನ್ನೈ ವಿಮಾನ ನಿಲ್ದಾಣದಲ್ಲಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಜಾಕ್​​ಲೀನ್ ಫರ್ನಾಂಡಿಸ್​​, ಸಚಿನ್ ತೆಂಡೂಲ್ಕರ್…. ಸೆಲೆಬ್ರಿಟಿಗಳ ಸ್ವಾತಂತ್ರ್ಯ ದಿನಾಚರಣೆಯ ಝಲಕ್​ ಇಲ್ಲಿದೆ

    ಧೋನಿ ವಾಪಸಾಗಲು ಇನ್ನೂ ಮೂರು ತಿಂಗಳು ಬೇಕು ಎಂದು ತಿಳಿಸಿದರೂ ಅವರನ್ನು ಭೇಟಿಯಾಗದೆ ಮನೆಗೆ ವಾಪಸ್​ ಹೋಗುವುದಿಲ್ಲ ಎಂದು ಅವರ ಫಾರ್ಮ್​​ಹೌಸಿನ ಹೊರಗೆ ಅಜಯ್​​ ಹಟ ಹಿಡಿದು ನಿಂತಿದ್ದ. ಸ್ಥಳೀಯ ಬಿಸಿನೆಸ್​ಮನ್​ ಅನುರಾಗ್​ ಚಾವ್ಲಾ ಎಂಬುವರು, ಮತ್ತೊಮ್ಮೆ ಧೋನಿಯನ್ನು ಕಾಣಲು ಬರುವಂತೆ ಆತನ ಮನವೊಲಿಸಿ, ದೆಹಲಿಗೆ ಏರ್​ ಟಿಕೆಟ್​ ಕೊಡಿಸಿ ವಾಪಸ್​ ಕಳುಹಿಸಿದರು ಎಂದು ದ ಟೆಲಿಗ್ರಾಫ್​ ವರದಿ ಮಾಡಿದೆ. (ಏಜೆನ್ಸೀಸ್)

    VIDEO | ಟೀಂ ಇಂಡಿಯ ಸೇರಲು ಮೈದಾನಕ್ಕೆ ಬಂದ ಅಭಿಮಾನಿ?!

    ಓಲಾ ಎಲೆಕ್ಟ್ರಿಕ್​ ಸ್ಕೂಟರ್ ಅನಾವರಣ; ಬೆಲೆ, ಲಭ್ಯತೆ ವಿವರ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts