More

    ಸಿಎಸ್​ಕೆ ಫ್ಯಾನ್ಸ್​ಗಳ ಮಧ್ಯೆ ಏಕಾಂಗಿ ಲಕ್ನೋ ಅಭಿಮಾನಿ ಕೂಗಾಟ! ಅವನ ಲಕ್​ ಚೆನ್ನಾಗಿತ್ತು, ಪಾರಾಗಿದ್ದಾನೆ ಎಂದ…

    ಚೆನ್ನೈ: ನಿನ್ನೆ (ಏ.23) ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್​​ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ರೋಚಕ ಪಂದ್ಯದಲ್ಲಿ ಸಿಎಸ್​ಕೆ ನೀಡಿದ 211 ಬೃಹತ್ ಗುರಿಯನ್ನು ಬೆನ್ನಟ್ಟಿದ ಲಕ್ನೋ ಪಡೆಗೆ ಆಸರೆಯಾದ ಮಾರ್ಕಸ್​ ಸ್ಟೋಯಿನಿಸ್​ ಬ್ಯಾಟಿಂಗ್ ಆರ್ಭಟಕ್ಕೆ ರುತುರಾಜ್ ಪಡೆ ತತ್ತರಿಸಿ ಹೋಯಿತು. ಈ ಮೂಲಕ ಸತತ ಎರಡನೇ ಬಾರಿ ಒಂದೇ ತಂಡದ ಎದುರು ಚೆನ್ನೈ ಸೋಲನ್ನು ಅನುಭವಿಸಿತು.

    ಇದನ್ನೂ ಓದಿ: ಭಾರತದ ರಾಷ್ಟ್ರಪತಿಯವರಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಡಾ. ಸೀತಾರಾಮ್ ಜಿಂದಾಲ್

    ಆರಂಭಿಕ ಹಂತದಲ್ಲಿ ಸಿಎಸ್​ಕೆ ಬ್ಯಾಟ್ಸ್​ಮನ್​ಗಳಾದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ ಬ್ಯಾಟಿಂಗ್ ಅಬ್ಬರಕ್ಕೆ ಲಕ್ನೋ ಪಡೆ ಕಂಗಾಲಾಯಿತು. ತದನಂತರ 211 ಗುರಿಯನ್ನು ಚೇಸ್ ಮಾಡಿದ ಕೆ.ಎಲ್. ರಾಹುಲ್ ಪಡೆಗೆ ಆರಂಭಿಕ ಹಂತದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿದ್ದು, ತುಂಬಲಾರದ ನಷ್ಟದಂತಾಯಿತು. ತದನಂತರ ರಾಹುಲ್ ವಿಕೆಟ್ ಪತನವಾದ ಮೇಲಂತೂ ಈ ಪಂದ್ಯವನ್ನು ಸುಲಭವಾಗಿ ಸಿಎಸ್​ಕೆಗೆ ಬಿಟ್ಟುಕೊಟ್ಟೆವು ಎನ್ನುವಷ್ಟರಲ್ಲೇ ಸ್ಟೋಯಿನಿಸ್​ ಅಬ್ಬರ ಇಡೀ ಪಂದ್ಯದ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿತು.

    ಇನ್ನು ಕಡೆಯ ಓವರ್​ನಲ್ಲಿ ಮುಸ್ತುಫಿಸುರ್​ ಬೌಲಿಂಗ್​​​ಗೆ ಸಿಕ್ಸರ್​, ಫೋರ್​​ ಬಾರಿಸಿದ ಸ್ಟೋಯಿನಿಸ್​, ಮೂರನೇ ಬಾಲ್​ಗೆ ಜನರಿದ್ದ ಸ್ಟ್ಯಾಂಡ್ಸ್​ನತ್ತ ಮತ್ತೊಂದು ಸಿಕ್ಸರ್ ಬಾರಿಸಿದರು. ಈ ಮೂಲಕ ಗೆಲುವಿನ ಪತಾಕೆ ಹಾರಿಸಿದರು. ಈ ವೇಳೆ ಸ್ಟೇಡಿಯಂನಲ್ಲಿ ಜಮಾಯಿಸಿದ್ದ ಲಕ್ನೋ ಅಭಿಮಾನಿಗಳು ತಂಡದ ಗೆಲುವನ್ನು ಸಂಭ್ರಮಿಸುತ್ತಿದ್ದರೆ, ಅತ್ತ ಸಿಎಸ್​ಕೆ ಪರವಿದ್ದ ಅಪಾರ ಸಂಖ್ಯೆಯ ಫ್ಯಾನ್ಸ್​ಗಳ ಮಧ್ಯೆ ​ಏಕಾಂಗಿಯಾಗಿ ಕುಳಿತ್ತಿದ್ದ ಎಲ್​​ಎಸ್​ಜಿ ಫ್ಯಾನ್​ವೊಬ್ಬ ಸಂಭ್ರಮಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಇದನ್ನೂ ಓದಿ: ರೋಹಿತ್​ ನಂತ್ರ ಈತನೇ ಟೀಮ್​ ಇಂಡಿಯಾ ಕ್ಯಾಪ್ಟನ್​! ಯಾರೂ ಊಹಿಸದ ಹೆಸರು ಹೇಳಿದ ಭಜ್ಜಿ

    ತಮ್ಮ ತಂಡ ಸತತ ಸೋಲನ್ನು ನೋಡಿತಲ್ಲವೇ ಎಂದು ಮೌನಕ್ಕೆ ಜಾರಿದ್ದ ಹಳದಿ ಜೆರ್ಸಿ ಧರಿಸಿದ್ದ ಸಿಎಸ್​ಕೆ ಅಭಿಮಾನಿಗಳ ಮಧ್ಯೆ ಲಕ್ನೋ ಸೂಪರ್ ಜೈಂಟ್ಸ್ ಅಭಿಮಾನಿ ಕುಣಿದು, ಕುಪ್ಪಳಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು, ಆತ ಲಕ್ಕಿ ಫೆಲೋ, ಸಿಂಹ ಪಡೆಯನ್ನು ಕೆಣಕಿ ಪಾರಾಗಿದ್ದಾನೆ ಎಂದೆಲ್ಲಾ ಕಮೆಂಟ್ ಮೂಲಕ ಲೇವಡಿ ಮಾಡಿದ್ದಾರೆ,(ಏಜೆನ್ಸೀಸ್).

    “ಹಾರ್ದಿಕ್ ನಾಯಕತ್ವ ಹೀಗೆ ಮುಂದುವರಿದರೆ…” ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಭವಿಷ್ಯ ನುಡಿದ ಮನೋಜ್ ತಿವಾರಿ!

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts