More

    ಎರಡನೇ ಮದುವೆಗೆ ಕುಟುಂಬದವರು ದೋಷಿಗಳಲ್ಲ ಹೈಕೋರ್ಟ್

    ಬೆಂಗಳೂರು : ದ್ವಿಪತ್ನಿತ್ವ ಪ್ರಕರಣಗಳಲ್ಲಿ ಎರಡನೇ ಸಂಗಾತಿ ಮತ್ತು ಸಂಬಂಧಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಎರಡನೇ ಪತ್ನಿಯ ಪಾಲಕರು ಹಾಗೂ ಸಹೋದರಿ ಮೇಲೆ ಹೂಡಿದ್ದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ. ಅಲ್ಲದೆ, ಎರಡನೇ ಮದುವೆಯಾದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬಹುದೇ ಹೊರತು, ಎರಡನೇ ಪತ್ನಿ ಹಾಗೂ ಅವರ ಸಂಬಂಧಿಗಳ ವಿರುದ್ಧ ಹೂಡಲಾಗದು ಎಂದು ಹೇಳಿದೆ.

    ಚಿತ್ರದುರ್ಗ ಜೆಎಂಎ್ಸಿ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಎರಡನೇ ಪತ್ನಿಯ ಪಾಲಕರು ಹಾಗೂ ಅವರ ಬಂಧುಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ, ಭಾರತ ದಂಡ ಸಂಹಿತೆಯ ಸೆಕ್ಷನ್ 494 ಅನ್ವಯ ಹಿಂದಿನ ಮದುವೆ ಚಾಲ್ತಿಯಲ್ಲಿದ್ದಾಗ ಪತಿ ಎರಡನೇ ಮದುವೆಯಾದರೆ ಆಗ ಆತನನ್ನು ವಿಚಾರಣೆಗೆ ಒಳಪಡಿಸಬಹುದೇ ಹೊರತು, ಆತನನ್ನು ಎರಡನೇ ಮದುವೆ ಆದವರನ್ನು ಮತ್ತು ಅವರ ಕುಟುಂಬದವರನ್ನಲ್ಲ ಎಂದು ಸ್ಪಷ್ಟಪಡಿಸಿದೆ.

    ಐಪಿಸಿ ಸೆಕ್ಷನ್ 494 ಅನ್ನು ಕೂಲಂಕಶವಾಗಿ ಪರಿಶೀಲಿಸಿದರೆ, ಮೊದಲ ಗಂಡ ಅಥವಾ ಹೆಂಡತಿ ಬದುಕಿದ್ದಾಗ ಪತಿ ಅಥವಾ ಪತ್ನಿ ಇನ್ನೊಂದು ಮದುವೆಯಾದರೆ ಅದು ಅಪರಾಧವಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಏಳು ವರ್ಷಗಳವರೆಗೆ ಕಾನೂನಿನಲ್ಲಿ ಶಿಕ್ಷೆ ವಿಧಿಸಬಹುದಾಗಿದೆ. ಅದರಲ್ಲೂ ಇರುವ ಕೆಲ ವಿನಾಯ್ತಿಗಳು ಈ ಪ್ರಕರಣದಲ್ಲಿ ಅನ್ವಯಿಸುತ್ತದೆ. ಎರಡನೇ ಮದುವೆಯಲ್ಲಿ ಭಾಗವಹಿಸಿದ್ದರು ಎನ್ನುವ ಕಾರಣಕ್ಕೆ ಪಾಲಕರು ಹಾಗೂ ಬಂಧುಗಳನ್ನು ವಿಚಾರಣೆಗೊಳಪಡಿಸಲಾಗದು ಎಂದು ನ್ಯಾಯಾಪೀಠ ಹೇಳಿದೆ.

    ಅರ್ಜಿದಾರರ ಪರ ವಕೀಲರು, ದ್ವಿಪತ್ನಿತ್ವ ಪ್ರಕರಣಗಳಲ್ಲಿ ಎರಡನೇ ಬಾರಿಗೆ ಮದುವೆಯಾದವರನ್ನು ವಿಚಾರಣೆಗೆ ಗುರಿಪಡಿಸಬಹುದೇ ಹೊರತು, ಅವರ ಕುಟುಂಬದವರನ್ನಲ್ಲ. ಕಾನೂನಿನಲ್ಲಿ ಕುಟುಂಬದವರ ವಿಚಾರಣೆಗೆ ಅವಕಾಶವೂ ಇಲ್ಲ ಎಂದು ನ್ಯಾಯಪೀಠದ ಗಮನ ಸೆಳೆದಿದ್ದರು. ಎರಡನೇ ಪತ್ನಿ ಹಾಗೂ ಅವರ ಪಾಲಕರು, ಬಂಧುಗಳು ಮದುವೆಯಲ್ಲಿ ಭಾಗಿಯಾಗಿದ್ದರಿಂದ ಅವರನ್ನೂ ಸಹ ವಿಚಾರಣೆಗೊಳಪಡಿಸಬೇಕು ಎಂದು ಮೊದಲನೇ ಪತ್ನಿ ಪ್ರಕರಣ ದಾಖಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts