More

    ಹಣ ಕಟ್ಟೋವರೆಗೆ ರೋಗಿಯನ್ನು ನೋಡಲು ಬಿಡಲಿಲ್ಲ; ದುಡ್ಡು ಕೊಟ್ಟ ಮೇಲೆ ಪೇಷೆಂಟ್​ ಈಸ್​ ಡೆಡ್​ ಎಂದ್ರು….!

    ಕೋಲ್ಕತ್ತ: ಖಾಸಗಿ ನರ್ಸಿಂಗ್​ ಹೋಮ್​ವೊಂದು ದುಬಾರಿ ಬಿಲ್​ ವಸೂಲಿ ಮಾಡಲು ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಯನ್ನು ಎರಡು ದಿನಗಳವರೆಗೆ ವೆಂಟಿಲೇಟರ್​ನಲ್ಲಿಯೇ ಇಟ್ಟಿತ್ತು ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. ಆದರೆ, ನರ್ಸಿಂಗ್​ ಹೋಮ್​ ಮಾಲೀಕರು ಇದೆಲ್ಲ ಸುಳ್ಳು ಎಂದು ಆರೋಪ ನಿರಾಕರಿಸಿದ್ದಾರೆ.

    ಹೂಗ್ಲಿ ಜಿಲ್ಲೆಯ ನಿವಾಸಿ 55 ವರ್ಷದ ಶೇಖ್​ ಶಬ್ಬೀರ್ ಅಲಿ ಎಂಬುವರನ್ನು ಪಾರ್ಕ್​ ಸರ್ಕಸ್​ ಎರಿಯಾದಲ್ಲಿದ್ದ ಸ್ವಸ್ತಿಕ್​ ನರ್ಸಿಂಗ್​ ಹೋಮ್​ಗೆ ಆಗಸ್ಟ್​ 25ರಂದು ದಾಖಲಿಸಲಾಗಿತ್ತು. ಆಗಸ್ಟ್​ 31ರಂದು ರೋಗಿಯ ಚಿಕಿತ್ಸೆಯ ಬಿಲ್ 47,000 ರೂ. ಪಾವತಿಸುತ್ತಿದ್ದಂತೆ ಆಸ್ಪತ್ರೆಯವರು ಆತ ಮೃತಪಟ್ಟಿದ್ದಾನೆಂದು ಘೋಷಿಸಿದ್ದಾರೆ. ಹಲವು ಬಾರಿ ಕೇಳಿಕೊಂಡರೂ ಆಗಸ್ಟ್​ 30ರವರೆಗೂ ರೋಗಿಯನ್ನು ನೋಡಲು ಬಿಟ್ಟಿರಲಿಲ್ಲ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. ಆಸ್ಪತ್ರೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

    ಇದನ್ನೂ ಓದಿ; ಒಂದೇ ಢಾಬಾದ 65 ಸಿಬ್ಬಂದಿಗೆ ಕರೊನಾ ಸೋಂಕು….! ಸೂಪರ್​ಸ್ಪ್ರೆಡರ್​ ಆಗುವ ಆತಂಕ 

    ಆದರೆ, ಈ ಆರೋಪಗಳನ್ನು ಆಸ್ಪತ್ರೆ ಮಾಲೀಕ ವಿಕ್ರಂ ಖೈತಾನ್​ ನಿರಾಕರಿಸಿದ್ದಾರೆ. ರೋಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕೋವಿಡ್​ ಪರೀಕ್ಷೆ ಮಾಡಿಸಲಾಗಿತ್ತು. ಅದು ಪಾಸಿಟಿವ್​ ಎಂದು ಗೊತ್ತಾಗುತ್ತಿದ್ದಂತೆ ಐಸೋಲೇಷನ್​ನಲ್ಲಿ ಇರಿಸಲಾಗಿತ್ತು. ಈ ವೇಳೆ ಭೇಟಿ ಮಾಡಲು ಯಾರಿಗೂ ಅವಕಾಶವಿರುವುದಿಲ್ಲ. ದೂರದಿಂದ ನೋಡಬಹುದು ಅಥವಾ ವಿಡಿಯೋ ಕಾಲ್​ನಲ್ಲಿ ಮಾತನಾಡಿಸಬಹುದು. ಆದರೆ, ರೋಗಿಯ ಸ್ಥಿತಿ ಬಿಗಡಾಯಿಸಿದ್ದರಿಂದ ರೋಗಿಯನ್ನು ನೋಡುವಂತೆ ಆಗಸ್ಟ್​ 30ರಂದು ಕುಟುಂಬದವರಿಗೆ ತಿಳಿಸಿದ್ದೆವು ಎಂದು ವಿಕ್ರಮ್​ ಹೇಳಿದ್ದಾರೆ.

    ಕೋವಿಡ್​ ಮಾರ್ಗಸೂಚಿಯಂತೆ ಮೃತನ ಅಂತ್ಯಕ್ರಿಯೆಗೆ ಅವಕಾಶ ನೀಡುವ ಫಾರ್ಮ್​ಗೆ ಕುಟುಂಬದವರು ಸಹಿ ಹಾಕದ ಕಾರಣ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಕ್ಟೋಬರ್​ ಅಂತ್ಯಕ್ಕೆ ಕರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ; 50 ರಾಜ್ಯಗಳಿಗೆ ಸೂಚನೆ ನೀಡಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts