More

    ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಕ್ಯೂಆರ್​ ಕೋಡ್​

    ಮಧುರೈ: ಕರೊನಾ ಬಂದಾಗಿನಿಂದ ಮದುವೆಯ ವ್ಯಾಖ್ಯಾನವೇ ಬದಲಾಗಿಬಿಟ್ಟಿದೆ. ಸಾವಿರಾರು ಜನರು ಸೇರಿ ಮಾಡುತ್ತಿದ್ದ ಮದುವೆ ಈಗ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಮನೆ ಮನೆಗೆ ಹೋಗಿ ಲಗ್ನ ಪತ್ರಿಕೆ ಕೊಟ್ಟು ಬರುತ್ತಿದ್ದ ಜನ ಇದೀಗ ವಾಟ್ಸ್​ಆ್ಯಪ್​ನಲ್ಲೇ ಇ ಆಮಂತ್ರಣ ಕಳುಹಿಸಲಾರಂಭಿಸಿದ್ದಾರೆ. ಮದುವೆಗೆ ಬರುವ ಸಂಬಂಧಿಗಳಿಂದ ಉಡುಗೊರೆ ಸ್ವೀಕರಿಸಲೂ ಹಿಂದೆ ಮುಂದೆ ನೋಡುವಂತಹ ಸ್ಥಿತಿ ಬಂದಿದೆ. ಹಾಗಿದ್ದಾಗ ಉಡುಗೊರೆ ಕೊಡಲು ಬಯಸುವವರಿಗೆ ಲಗ್ನ ಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟರೆ?

    ಇದನ್ನೂ ಓದಿ: ಮೊಟ್ಟೆ-ಚಿಕನ್ ಬಿಟ್ಟಿದ್ದೀರಾ? ಹಾಗಾದರೆ ಅದಕ್ಕೆ ಪರ್ಯಾಯವೇನು? ಇಲ್ಲಿವೆ ಆಯ್ಕೆಗಳು..

    ಈ ರೀತಿ ವಿಶೇಷ ಆಲೋಚನೆ ಬರುವುದು ಸಹಜ. ಆದರೆ ಅದನ್ನು ಕಾರ್ಯರೂಪಕ್ಕೆ ತರುವವರು ಎಲ್ಲೋ ಕೆಲವರು ಮಾತ್ರ. ಅದೇ ರೀತಿ ತಮಿಳುನಾಡಿನ ಮಧುರೈನ ಒಂದು ಜೋಡಿ ಈ ಉಪಾಯವನ್ನು ಕಾರ್ಯ ರೂಪಕ್ಕೆ ತಂದಿದೆ. ಮದುವೆಯ ಆಮಂತ್ರಣ ಪತ್ರದಲ್ಲಿಯೇ ನೀವು ಯಾವ ಖಾತೆಗೆ ಉಡುಗೊರೆ ಹಣವನ್ನು ಹಾಕಬಹುದು ಎನ್ನುವ ಮಾಹಿತಿ ನೀಡಲಾಗಿತ್ತು. ಫೋನ್​ ಪೇ ಮತ್ತು ಗೂಗಲ್​ ಪೇ ಎರಡರ ಕ್ಯೂ ಆರ್​ ಕೋಡ್​ನ್ನು ಮುದ್ರಿಸಲಾಗಿತ್ತು. ಇದರಿಂದಾಗಿ ಮದುವೆಗೆ ಬಾರದವರೂ ಉಡುಗೊರೆಯನ್ನು ಸುಲಭವಾಗಿ ಕೊಡಬಹುದಾಗಿತ್ತು. ಹಾಗೆಯೇ ಮದುವೆಗೆ ಬಂದು, ಉಡುಗೊರೆ ಕೊಡಲು ಕವರ್​ ಇಲ್ಲ, ಹೆಸರು ಬರೆಯಲು ಪೆನ್​ ಇಲ್ಲ ಎಂದು ಹುಡುಕಾಡುವ ಬದಲು, ಸುಲಭವಾಗಿ ಕ್ಯೂ ಆರ್​ ಕೋಡ್​ ಬಳಸಿ ಉಡುಗೊರೆ ನೀಡಲು ಅವಕಾಶ ಮಾಡಿಕೊಡಲಾಗಿತ್ತು.

    ಇದನ್ನೂ ಓದಿ: ಒಂದಿಂಚು ಭೂಮಿಯನ್ನೂ ಮಹಾರಾಷ್ಟ್ರಕ್ಕೆ ಕೊಡಲ್ಲ: ಉದ್ಧವ್ ಠಾಕ್ರೆಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು

    ಅತ್ಯಂತ ಕಡಿಮೆ ಜನರ ಸಮ್ಮುಖದಲ್ಲಿ ನಡೆದ ಮದುವೆಯಲ್ಲಿ ಸುಮಾರು 30 ಜನರು ಈ ಕ್ಯೂ ಆರ್ ಕೋಡ್​ ಮೂಲಕವೇ ಉಡುಗೊರೆ ನೀಡಿದ್ದಾರೆ ಎನ್ನುತ್ತಾರೆ ವಧುವಿನ ತಾಯಿ ಟಿ.ಜೆ.ಜಯಂತಿ. ಈ ರೀತಿ ಲಗ್ನ ಪತ್ರಿಕೆ ಮಾಡಿಸಿದ್ದು ಸುದ್ದಿಯಾದ ಮೇಲೆ ಅನೇಕರು ನಮಗೆ ಕರೆ ಮಾಡಿದ್ದಾರೆ. ಹೇಗೆ ಮಾಡಿದಿರಿ, ಏನು ಎಂದು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಆಕೆ ತಿಳಿಸಿದ್ದಾರೆ. (ಏಜೆನ್ಸೀಸ್)

    ‘ಅಪ್ಪ ನನ್ನ ಮೇಲೆ 7 ವರ್ಷದಿಂದ ರೇಪ್​ ಮಾಡ್ತಾನೇ ಇದ್ದಾನೆ!’ ಕಣ್ಣೀರು ತರಿಸುತ್ತೆ ಈ ಮಗಳ ಕಥೆ

    ಕರೊನಾ ಲಸಿಕೆ ಪಡೆದ ವಾರ್ಡ್ ಬಾಯ್​ ಸಾವು! ಕುಟುಂಬ, ಆರೋಗ್ಯ ಇಲಾಖೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts