More

    ಶಾಲಾ ಮಕ್ಕಳು 400 ರೂ.ಗಳ ಮಾಸ್ಕ್ ಖರೀದಿಸಬೇಕೆಂಬುದು ಸುಳ್ಳು ಸುದ್ದಿ: ಡಿಪಿಎಸ್ ಸ್ಪಷ್ಟನೆ

    ಬೆಂಗಳೂರು: ಶಾಲಾ ಮಕ್ಕಳು ಕಡ್ಡಾಯವಾಗಿ 400 ರೂ.ಗಳ ಮಾಸ್ಕ್ ಖರೀದಿಸಬೇಕೆಂದು ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪಬ್ಲಿಕ್ ಸ್ಕೂಲ್ ಮ್ಯಾನೇಜ್​ಮೆಂಟ್ ಎಚ್ಚರಿಸಿದೆ.
    ಮಾಸ್ಕ್ ಹಾಗೂ ಅದರೊಂದಿಗೆ ಶಾಲೆಯ ಹೆಸರು, ಲೋಗೋ ಹಾಗೂ ನಕಲಿ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪಾಲಕರ ವಾಟ್ಸಾಪ್ ಗ್ರೂಪ್​​ನಲ್ಲಿ ಸುತ್ತಾಡುತ್ತಿದೆ.  ಶಾಲೆಯೊಂದರಲ್ಲಿ ಮಕ್ಕಳಿಗೆ ಮಾಸ್ಕ್​​ಗೆ 400 ರೂ.ಶುಲ್ಕ ವಿಧಿಸಲಾಗುತ್ತದೆ ಎಂದು ಇದರಲ್ಲಿ ಸಂದೇಶವಿದೆ. ಈ ದುಬಾರಿ ಬೇಡಿಕೆಗೆ ಪಾಲಕರು ಅಸಾಮಾಧಾನಗೊಂಡಿದ್ದರು.

    ಇದನ್ನೂ ಓದಿ: ಕೋಟಿ ವೇತನ ಪಡೆದ ಶಿಕ್ಷಕಿ ನೇಮಕಾತಿಗೆ ಕೊಟ್ಟಿದ್ದಳು 5 ಲಕ್ಷ ರೂ. ಲಂಚ

    ಆದರೆ ಶಾಲಾ ಆಡಳಿತ ಮಂಡಳಿ ಈ ಕುರಿತು ಸ್ಪಷ್ಟಪಡಿಸಿದ್ದು, ಇದು ಕೇವಲ ವದಂತಿ ಹಾಗೂ ಯಾರೋ ಮಾಡಿದ ಸುಳ್ಳು ಸಂದೇಶ ಮತ್ತು ಚಿತ್ರವಾಗಿದೆ ಹೊರತು ಈ ಸಂದೇಶವನ್ನು ಶಾಲೆ ಪ್ರಕಟಿಸಿಲ್ಲ. ಈ ಕುರಿತು ಸೈಬರ್ ಅಪರಾಧ ಪೊಲೀಸರಿಗೆ ದೂರು ದಾಖಲಿಸಿದೆ ಎಂದು ತಿಳಿಸಿದೆ.
    ಯಾರೋ ಕಿಡಿಗೇಡಿಗಳು, ಮಾಸ್ಕ್​​ ಚಿತ್ರದೊಂದಿಗೆ ದೆಹಲಿ ಪಬ್ಲಿಕ್ ಶಾಲೆಯ ಲೋಗೋ ಹಾಗೂ ಅದರ ಹೆಸರನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಪೋಷಕರಲ್ಲಿ ಗೊಂದಲ ಶುರುವಾಗಿದೆ. ನಾವು ಇದನ್ನು ನೋಡಿದ ಕ್ಷಣ, ಶಾಲಾ ಆಡಳಿತ ಮಂಡಳಿಗೆ ಈ ಮೇಲ್ ಮಾಡಿ, ಈ ರೀತಿ ಯಾವುದೇ ನಿರ್ಬಂಧ ಹೇರಬಾರದು ಎಂದು ಸಂದೇಶ ಕಳುಹಿಸಿದ್ದೇವೆ. ಪುನರಾರಂಭಗೊಳ್ಳದ ಶಾಲೆಗಳು ಈ ರೀತಿ ಮಾಸ್ಕ್​ ಖರೀದಿಸಲು ಮಕ್ಕಳಿಗೆ ಹೇಗೆ ಒತ್ತಾಯಿಸಬಹುದು ಎಂದು ನಾವು ಆಶ್ಚರ್ಯಪಟ್ಟಿದ್ದೆವು ಎಂದು ವಿದ್ಯಾರ್ಥಿಯ ಪಾಲಕರೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಲು ಈ ಭೂಪ ಏನು ಮಾಡಿದ ನೋಡಿ…

    ದೆಹಲಿ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಸಂದೇಶವನ್ನು ಕಳಿಸಿದ್ದು. ಶಾಲಾ ಮಕ್ಕಳಿಗೆ ಸುರಕ್ಷತಾ ಸಾಧನಗಳಾಗಿ ಬಳಸಲ್ಪಡುವ ಮಾಸ್ಕ್ ಹಾಗೂ ಸ್ಯಾನಿಟೈಸರ್ ನಂತಹ ಉತ್ಪನ್ನಗಳನ್ನು ಮಾರಾಟ ಮಾಡಲು ಕೆಲವು ಏಜೆನ್ಸಿಗಳು ಈ ಶಾಲೆಯ ಹೆಸರನ್ನು ಬಳಸುತ್ತಿವೆ ಎಂಬುದು ಗಮನಕ್ಕೆ ಬಂದಿದೆ.
    ಶಾಲೆಯು ಅಂತಹ ಯಾವುದೇ ಕಂಪನಿಗಳು, ವ್ಯಾಪಾರಸ್ಥರೊಂದಿಗೆ ಸಹಭಾಗಿಯಾಗಿಲ್ಲ. ಇಂತಹ ಸುಳ್ಳು ಸುದ್ದಿಗಳ ವಿರುದ್ಧ ಜಾಗೃತವಾಗಿರಿ ಎಂದು ತಿಳಿಸಿದೆ.

    ಇದನ್ನೂ ಓದಿ: ಲಾಕ್​ಡೌನ್ ಅವಧಿಯಲ್ಲಿ ಚೆನ್ನೈ ಪೊಲೀಸರು ಬರೊಬ್ಬರಿ 11 ಕೋಟಿ ರೂ.ದಂಡ ಸಂಗ್ರಹಿಸಿದ್ದಾರಂತೆ…

    ಬೆಂಗಳೂರು ಮತ್ತು ಮೈಸೂರಿನ ಎಲ್ಲಾ ವಿಭಾಗಗಳಲ್ಲಿ ಸೈಬರ್ ಅಪರಾಧ ದೂರು ದಾಖಲಿಸಿದ್ದೇವೆ ಎಂದು ಡಿಪಿಎಸ್ ಬೆಂಗಳೂರು ಮತ್ತು ಮೈಸೂರು ವಿಭಾಗದ ಆಡಳಿತ ಮಂಡಳಿ ಸದಸ್ಯ ಮನ್ಸೂರ್ ಅಲಿ ಖಾನ್ ತಿಳಿಸಿದ್ದಾರೆ.
    ಶಾಲೆ ಆನ್‌ಲೈನ್ ತರಗತಿಗಳನ್ನು ಮುಂದುವರಿಸುತ್ತಿದ್ದು, ಸುರಕ್ಷತಾ ಸಾಧನಗಳನ್ನು ಖರೀದಿಸುವಂತಹ ಯಾವುದೇ ಕಡ್ಡಾಯ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಿಲ್ಲ ಎಂದು ತಿಳಿಸಿದೆ.

    ಅಚ್ಚರಿ ಮೂಡಿಸಿದ ಖಲಿಸ್ತಾನ್ ಜಿಂದಾಬಾದ್ ಭಿತ್ತಿಪತ್ರ; ದೇಶದ್ರೋಹಿ ಕೃತ್ಯಕ್ಕೆ ಕುಮ್ಮಕ್ಕು ಯಾರದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts