More

    ಆರೋಗ್ಯದ ದೃಷ್ಟಿಯಿಂದ ‘ಮಾಸ್ಕ್’ ಧರಿಸುವುದು ಅಷ್ಟೊಂದು ಮುಖ್ಯವೇ.?

    ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕರೊನಾ ಪರಿಸ್ಥಿತಿಯಿಂದ ಹೊರಬಂದಿರುವ ಜನರಿಗೆ ಮತ್ತೆ ಕೋವಿಡ್‌ 19 ಆತಂಕ ಎದುರಾಗಿದೆ. ಕೇರಳದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ವೈರಸ್​​ನಿಂದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಹೀಗಾಗಿ ಈ ಕುರಿತಾಗಿ ನಾವು ಇಂದಿನಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

    ಕರೊನಾ ಅಟ್ಟಹಾಸ ಮೇರೆಯುತ್ತಿದ್ದ ವೇಳೆ ಜನರು ಮುಖಕ್ಕೆ ಮಾಸ್ಕ್​ ಇಲ್ಲದೆ ಹೊರಗೆ ಬರುತ್ತಿರಲಿಲ್ಲ. ಮನೆಯಿಂದ ಆಚೆ ಕಾಲಿಡುವ ಮುನ್ನ ಮಾಸ್ಕ್ ಧರಿಸಿನೇ ರಸ್ತೆಗೆ ಕಾಲಿಡುತ್ತಿದ್ದರು. ರಸ್ತೆಯಲ್ಲಿ ಓಡಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಇರುವಾಗ ಮಾಸ್ಕ್​​ ಬಳಕೆ ಮಾಡುತ್ತಿದ್ದರು.

    ಆರೋಗ್ಯದ ದೃಷ್ಟಿಯಿಂದ ‘ಮಾಸ್ಕ್’ ಅಷ್ಟೊಂದು ಮುಖ್ಯವೇ.? ಎನ್ನುವ ಪ್ರಶ್ನೆ ಕೆಲವರಿಗೆ ಇದೆ. ‘ಹೌದು’ ಮಾಸ್ಕ್ ಧರಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಮಾತ್ರ ಅಲ್ಲ.. ಬೇರೊಬ್ಬರ ಆರೋಗ್ಯಕ್ಕೂ ಒಳಿತು ಎನ್ನುತ್ತಾರೆ ಆರೋಗ್ಯ ತಜ್ಞರು.

    mask
    ಸಾಂದರ್ಭಿಕ ಚಿತ್ರ

    ಮಾಸ್ಕ್​​ ಯಾಕೆ ಧರಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ ಗೊತ್ತಾ?
    1) ಕಲುಷಿತ ಗಾಳಿ, ವೈರಾಣುಗಳಿಂದ ರಕ್ಷಿಸಿಕೊಳ್ಳಲು  ಮಾಸ್ಕ್ ಧರಿಸಬಹುದು.

    2) ನಾವು ಕೆಮ್ಮಿದಾಗ, ಸೀನಿದಾಗ ಇತರರಿಗೆ ಸೋಂಕು ತಾಗದಂತೆ ತಡೆಯಲೂ ಮಾಸ್ಕ್ ಅತ್ಯವಶ್ಯಕ.

    ಆರೋಗ್ಯದ ದೃಷ್ಟಿಯಿಂದ 'ಮಾಸ್ಕ್' ಧರಿಸುವುದು ಅಷ್ಟೊಂದು ಮುಖ್ಯವೇ.?

    3) ಮಾಸ್ಕ್ ಧರಿಸುವುದರಿಂದ ಸೋಂಕು ಹರಡುವ ಮೂಲಕ್ಕೆ ನಾವು ಕಡಿವಾಣ ಹಾಕಿದರೆ, ಕೋವಿಡ್-19 ಖಂಡಿತ ನಿಯಂತ್ರಣಕ್ಕೆ ಬರುತ್ತದೆ.
    ನಾವು ಮಾತನಾಡುವಾಗ, ಕೆಮ್ಮುವಾಗ, ಸೀನುವಾಗ.. ಹನಿಗಳ ಮೂಲಕ ವೈರಾಣುಗಳು ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಆಗ, ಹತ್ತರದಲ್ಲಿ ಇದ್ದವರಿಗೆ ಸೋಂಕು ತಗಲುತ್ತದೆ. ಇದನ್ನ ತಪ್ಪಿಸಲು ‘ಮಾಸ್ಕ್’ ಉಪಕಾರಿಯಾಗುತ್ತದೆ.

    ಆರೋಗ್ಯದ ದೃಷ್ಟಿಯಿಂದ 'ಮಾಸ್ಕ್' ಧರಿಸುವುದು ಅಷ್ಟೊಂದು ಮುಖ್ಯವೇ.?

    4) ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಅನಿವಾರ್ಯವಾಗಿದೆ.

    ಆರೋಗ್ಯದ ದೃಷ್ಟಿಯಿಂದ 'ಮಾಸ್ಕ್' ಧರಿಸುವುದು ಅಷ್ಟೊಂದು ಮುಖ್ಯವೇ.?

    5) ರೋಗ ಲಕ್ಷಣ ಕಾಣಿಸಿಕೊಳ್ಳದೇ ಇದ್ದರೂ, ಹಲವರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಹೀಗಾಗಿ, ತಮಗೆ ಅರಿವಿಲ್ಲದೆ ಹಲವರು ಸೋಂಕನ್ನು ಹರಡುತ್ತಿರಬಹುದು. ಆದ್ದರಿಂದ, ಎಲ್ಲರೂ ಮಾಸ್ಕ್ ಧರಿಸಿದರೆ ಕೊರೊನಾ ವೈರಸ್ ಗೆ ಕಡಿವಾಣ ಹಾಕಬಹುದು.

    ಆರೋಗ್ಯದ ದೃಷ್ಟಿಯಿಂದ 'ಮಾಸ್ಕ್' ಧರಿಸುವುದು ಅಷ್ಟೊಂದು ಮುಖ್ಯವೇ.?

    6) ಹೆಚ್ಚು ಜನರು ಮಾಸ್ಕ್ ಧರಿಸುವುದರಿಂದ ವೈರಸ್ ಹರಡುವಿಕೆಗೆ ಬ್ರೇಕ್ ಹಾಕಲು ಸಾಧ್ಯ. ಗಾಳಿಯ ಮೂಲಕವಾಗಿ ಈ ವೈರಸ್​​ ಹರಡುವುದೆ ಹೆಚ್ಚಾಗಿದೆ. ಹೀಗಾಗಿ ಮಾಸ್ಕ್​​ ಬಳಕೆ ಮಾಡುತ್ತಿದ್ದರೆ ಈ ವೈರಸ್ ಹಡಡುವುದನ್ನು ಆದಷ್ಟು ತಡೆಯ ಬಹುದಾಗಿದೆ.

    ಇಂದಿನಿಂದ ಮಾಸ್ಕ್ ಕಡ್ಡಾಯ..ಕರೊನಾ ಪರೀಕ್ಷೆ ಹೆಚ್ಚಿಸುತ್ತೇವೆ, ನಿರ್ಬಂಧ ಸದ್ಯಕ್ಕಿಲ್ಲ: ದಿನೇಶ್ ಗುಂಡೂರಾವ್ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts