More

    ಮಾಜಿ ಸಚಿವ ಪಿಟಿ ಪರಮೇಶ್ವರ​ ನಾಯ್ಕ್ ಹಾಗೂ ಪುತ್ರನ ವಿರುದ್ಧ ಎಫ್​ಐಆರ್​ ದಾಖಲು

    ಬಳ್ಳಾರಿ: ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ನಕಲಿ ದಾಖಲಾತಿ ಸೃಷ್ಟಿಸಿದ ಆರೋಪ ಹಿನ್ನೆಲೆಯಲ್ಲಿ ಮಾಜಿ ಸಚಿವ, ಶಾಸಕ ಪಿಟಿ ಪರಮೇಶ್ವರ​ ನಾಯ್ಕ್ ಹಾಗೂ ಪುತ್ರ ಭರತ್​ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

    ಪಿಟಿ ಭರತ್ ಹರಪನಹಳ್ಳಿ ತಾಲೂಕು ಲಕ್ಷ್ಮಿಪುರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದಾರೆ. 2016ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ ಭರತ್​ ವಯಸ್ಸು 21 ವರ್ಷಕ್ಕಿಂತ ಕಡಿಮೆ‌ ಇತ್ತು. ಆಗ ಪಿಟಿ ಪರಮೇಶ್ವರ ನಾಯ್ಕ್​ ಅವರು ಕಾರ್ಮಿಕ ಸಚಿವರಾಗಿದ್ದರು. ಇದನ್ನು ದುರುಪಯೋಗಪಡಿಸಿಕೊಂಡು ತಮ್ಮ ಪ್ರಭಾವ ಬೀರಿ ಭರತ್​ಗೆ 21 ವರ್ಷವಾಗಿದೆ ಎಂದು ನಕಲಿ ದಾಖಲೆ ಸೃಷ್ಟಿದ್ದರು ಎಂದು ಆರೊಪ ಕೇಳಿಬಂದಿದೆ.

    ಇದನ್ನೂ ಓದಿ: VIDEO| ವಿಜಯವಾಣಿ ಫೋನ್​ ಇನ್​ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಸಾಧಕರು ನೀಡಿದ ಸಲಹೆಗಳೇನು?

    ಹರಪನಹಳ್ಳಿ ವಕೀಲ ರೇವನೌಡ 2016ರಲ್ಲೇ ಈ ಸಂಬಂಧ ದೂರು ನೀಡಿದ್ದರು. ವಿಚಾರಣೆ ಸಂದರ್ಭದಲ್ಲಿ ಸಂಗ್ರಹವಾದ ದಾಖಲೆಗಳನ್ನು ಎಫ್ಎಸ್ಎಲ್ ಮಡಿವಾಳ ತಜ್ಞರಿಗೆ ಕಳಿಸಲಾಗಿತ್ತು. ಈಗ ವರದಿ ಬಂದ ಹಿನ್ನೆಲೆಯಲ್ಲಿ ಭರತ್ ಹಾಗೂ ಪಿಟಿ ಪರಮೇಶ್ವರ ನಾಯ್ಕ್​ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.

    ನಕಲಿ ದಾಖಲೆ ಸೃಷ್ಟಿಸಿದ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ದವೂ ಪ್ರಕರಣ ದಾಖಲಾಗಿದೆ. ಪರಮೇಶ್ವರ ನಾಯ್ಕ್ ಎ1, ಭರತ್ ಎ2 ಹಾಗೂ ಮುಖ್ಯೋಪಾಧ್ಯಾಯ ರಾಜಾ ಸೋಮಶೇಖರ ಎ3 ಆರೋಪಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕೋವಿಡ್​-19 ಪಿಡುಗಿನ ವೇಳೆ ಸೈಬರ್​ಕ್ರೈಂ ಹೆಚ್ಚಳ; ಯುಎನ್​ ಬಿಡುಗಡೆ ಮಾಡಿದೆ ಎದೆನಡುಗಿಸುವ ಅಂಕಿಅಂಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts