More

    ಮಹಿಳೆಗಾಗಿ ತುಂಬಾ ಆಸೆಯಿಂದ ಡೇಟಿಂಗ್​ ವೆಬ್​ಸೈಟ್​ ಜಾಲಾಡಿದ್ದ ವ್ಯಕ್ತಿಗೆ ಆ ಒಂದು ಫೋನ್​ ಕಾಲ್​ ಸಂಕಷ್ಟಕ್ಕೆ ದೂಡಿತು!

    ಬೆಂಗಳೂರು: ಮಹಿಳೆ ಜತೆ ಡೇಟಿಂಗ್​ ಮಾಡುವ ತವಕದಲ್ಲಿ ವೆಬ್​ಸೈಟ್​ಗಳನ್ನು ಜಾಲಾಡಿದ್ದ 47 ವರ್ಷದ ವ್ಯಕ್ತಿಯೊಬ್ಬನ ಮೊಬೈಲ್​ಗೆ ಬಂದ ಕರೆ ಸುಮಾರು 1 ಲಕ್ಷ ರೂ. ಲಪಟಾಯಿಸಿದೆ!

    ನಗರದ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆ.ಪಿ.ನಗರದ ವಾಸೀಂ ಪಾಷಾ ಇತ್ತೀಚೆಗೆ ಅಂತಾರ್ಜಾಲದಲ್ಲಿರುವ ಕೆಲ ಡೇಟಿಂಗ್​ ವೆಬ್​ಸೈಟ್​ಗಳಿಗೆ ಭೇಟಿ ನೀಡಿ ಡೇಟಿಂಗ್​ ನಡೆಸಲು ಇಚ್ಛೆ ಹೊಂದಿರುವ ಮಹಿಳೆಯನ್ನು ಹುಡುಕುತ್ತಿದ್ದರು.

    ಇದನ್ನೂ ಓದಿರಿ ಲೇಡೀಸ್ ಜತೆ ಸೆಕ್ಸ್ ಜಾಬ್​! ಕೆಲಸಕ್ಕೆ ಸೇರಿದ ಟೆಕ್ಕಿ ಕಥೆ ಏನಾಯ್ತು?

    ಜು.14ರಂದು ವಾಸೀಂ ಮೊಬೈಲ್​ಗೆ ಕರೆ ಮಾಡಿದ್ದ ಅಪರಿಚಿತರು, ‘ನೀವು ಡೇಟಿಂಗ್​ ವೆಬ್​ಸೈಟ್​ಗಳಲ್ಲಿ ಹುಡುಕಾಟ ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ನಿಮಗೆ ಮಹಿಳೆಯೊಬ್ಬರ ಜತೆ ಡೇಟಿಂಗ್​ ನಡೆಸಲು ಅವಕಾಶ ಕೊಡಿಸುತ್ತೇವೆ. ಆದರೆ, ಇದಕ್ಕಿಂತ ಮೊದಲು ನಮ್ಮ ಬ್ಯಾಂಕ್​ ಖಾತೆಗೆ ಹಣ ಜಮೆ ಮಾಡಬೇಕಾಗುತ್ತದೆ. ಹಣವನ್ನು ಮಹಿಳೆಗೆ ನೀಡಿದ ನಂತರ ಅವರನ್ನು ನಿಮ್ಮ ಜತೆ ಕಳಿಸಿಕೊಡಲಾಗುವುದು’ ಎಂದು ಹೇಳಿದ್ದರು.

    ಅವರ ಮಾತಿಗೆ ಮರುಳಾದ ವಾಸೀಂ, ಮೊದಲಿಗೆ ಸ್ವಲ್ಪ ಹಣ ಜಮೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಅಪರಿಚಿತರು, ‘ಮೊದಲು ನಾವು ಹೇಳಿದಷ್ಟು ಹಣ ಜಮೆ ಮಾಡಿದರೆ, ನಂತರದಲ್ಲಿ ಉಳಿದ ಹಣವನ್ನು ನಿಮಗೆ ಹಿಂತಿರುಗಿಸಲಾಗುವುದು’ ಎಂದು ಹೇಳಿದ್ದರು. ಅಪರಿಚಿತರ ಈ ಷರತ್ತಿಗೂ ಒಪ್ಪಿಗೆ ಸೂಚಿಸಿದ ವಾಸೀಂ ಗೂಗಲ್​ ಪೇ ಮೂಲಕ ಹಂತ ಹಂತವಾಗಿ ಒಟ್ಟು 99,700 ರೂ.ನ್ನು ಅಪರಿಚಿತರ ಖಾತೆಗೆ ಜಮೆ ಮಾಡಿದ್ದರು.

    ಇದನ್ನೂ ಓದಿರಿ ತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!

    ಇದಾದ ಬಳಿಕ ಅವರು ಯಾವುದೇ ಡೇಟಿಂಗ್​ ಸರ್ವೀಸ್​ ಕೊಡದೆ, ಹಣವನ್ನೂ ಹಿಂತಿರುಗಿಸದೆ ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಅನುಮಾನಗೊಂಡ ವಾಸೀಂ, ಅಪರಿಚಿತರ ಮೊಬೈಲ್​ಗೆ ಕರೆ ಮಾಡಿದಾಗ ಸ್ವಿಚ್ಡ್​ ಆಫ್​ ಆಗಿತ್ತು. ಪರಿಚಿತರ ಸಲಹೆ ಮೇರೆಗೆ ದಕ್ಷಿಣ ಸಿಇಎನ್​ ಸೈಬರ್​ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

    ನಕಲಿ ವೆಬ್​ಸೈಟ್​ ಸೃಷ್ಟಿಸಿ ವಂಚಿಸುವ ಜಾಲ ದೇಶಾದ್ಯಂತ ಬೇರೂರಿದೆ. ಸೈಬರ್​ ಕಳ್ಳರ ಮಾತಿಗೆ ಮರುಳಾಗಿ ಒಮ್ಮೆ ಹಣ ಪಾವತಿಸಿದರೆ ಮತ್ತೆ ಆ ಹಣ ನಿಮ ಕೈ ಸೇರುವುದಿಲ್ಲ. ಈ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಹಲವರು ಠಾಣೆ ಮೆಟ್ಟಿಲೇರಲು ಹಿಂದೇಟು ಹಾಕುತ್ತಿದ್ದು, ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಈ ಬಗ್ಗೆ ಜನರು ಜಾಗ್ರತೆ ವಹಿಸಬೇಕಿದೆ.

    ಹಣವಿದ್ದ ಪ್ಯಾಂಟ್​ ಅನ್ನೇ ಎಗರಿಸಿದ ದುಷ್ಕರ್ಮಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts