More

    ನಕಲಿ ಅಶ್ಲೀಲ ಸಿಡಿ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ: ರಾಮಚಂದ್ರಾಪುರ ಮಠಕ್ಕೆ ಗೆಲುವು

    ಬೆಂಗಳೂರು: ನಕಲಿ ಅಶ್ಲೀಲ ಸಿ.ಡಿ. ತಯಾರಿಸಿ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾನಹಾನಿಗೆ ಪ್ರಯತ್ನಿಸಿದ್ದ ಪ್ರಕರಣದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ರಾಜ್ಯ ಹೈಕೋರ್ಟ್‌ನ ಧಾರವಾಡ ಪೀಠ ವಜಾ ಮಾಡಿದೆ.
    ಪ್ರಕರಣದ ವಿಚಾರಣೆಯನ್ನು ಒಂದು ವರ್ಷದೊಳಗಾಗಿ ಪೂರ್ಣಗೊಳಿಸುವಂತೆ ಕುಮಟಾ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಸೂಚನೆ ನೀಡಿದ್ದಾರೆ.

    ಶ್ರೀಗಳ ತೇಜೋವಧೆ ಮಾಡುವ ಉದ್ದೇಶದಿಂದ ದುಷ್ಟಕೂಟ ಕಟ್ಟಿಕೊಂಡು ನಕಲಿ ಅಶ್ಲೀಲ ಸಿಡಿ ತಯಾರಿಸಿ ತೇಜೋವಧೆ ಪ್ರಯತ್ನ 2010ರಲ್ಲಿ ನಡೆದಿತ್ತು. ಶ್ರೀಗಳನ್ನು ಹೋಲುವ ವ್ಯಕ್ತಿಯನ್ನು ಬಳಸಿ ಶ್ರೀಗಳ ಹಾವಭಾವವನ್ನು ಆತನಿಗೆ ಕಲಿಸಿ ಚಿತ್ರೀಕರಿಸಲಾಗಿತ್ತು. ಹಾಲಿವುಡ್ ತಂತ್ರಜ್ಞಾನ ಬಳಸಿ ಶ್ರೀಗಳ ಚಿತ್ರಗಳನ್ನು ಅಶ್ಲೀಲ ವಿಡಿಯೋ ಜತೆ ಸೇರಿಸಿ ಅದನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಕುತಂತ್ರವನ್ನು ರೂಪಿಸಲಾಗಿತ್ತು.

    ಇದನ್ನೂ ಓದಿ: VIDEO: ಸಂಸದೆ ಶೋಭಾ ಕರಂದ್ಲಾಜೆಗೆ ಗಲ್ಫ್ ರಾಷ್ಟ್ರಗಳಿಂದ ಜೀವ ಬೆದರಿಕೆ ಕರೆ!

    ಶ್ರೀಮಠ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಹಿರಿಯ ಪೊಲೀಸ್ ಅಧಿಕಾರಿ ಗೋಪಾಲ ಹೊಸೂರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದರು. ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಪ್ರಸ್ತುತ ಕುಮಟಾ ಜೆಎಂಎಫ್‌ಸಿ ನ್ಯಾಯಾಲಯ ಚಾರ್ಜ್ ಫ್ರೇಮ್ ಮಾಡುವ ಹಂತದಲ್ಲಿದೆ.

    ಇದನ್ನೂ ಓದಿ: 7 ಲಕ್ಷ ಕೋಟಿ ರೂಪಾಯಿ ಕೇವಲ ಎರಡೇ ದಿನದಲ್ಲಿ ಕೈ ಬಿಟ್ಟು ಹೋಯಿತು!

    ಆರೋಪಿಗಳು ಕಲಾಪಕ್ಕೆ ಹಲವು ಬಾರಿ ಗೈರಾಗಿ ತಮ್ಮ ವಿರುದ್ಧದ ಮೊಕದ್ದಮೆ ವಿಚಾರಣೆಗೆ ತಡೆ ನೀಡಿ, ಪ್ರಕರಣ ವಜಾಗೊಳಿಸುವಂತೆ ಧಾರವಾಡ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳವಾರ ವಿಡಿಯೊ ಕಾನ್ಫ್‌ರೆನ್ಸ್ ತಂತ್ರಜ್ಞಾನ ಬಳಸಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ಆದೇಶ ನೀಡಿದರು.

    ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts