More

    ಅಮೆರಿಕದ ಜನರನ್ನು ವಂಚಿಸುತ್ತಿದ್ದ ನಕಲಿ ಕಾಲ್ ಸೆಂಟರ್! 65 ಜನರ ಬಂಧನ

    ನವದೆಹಲಿ : ಅಮೆರಿಕದ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಅಮೆರಿಕನ್ ನಾಗರಿಕರಿಗೆ ಡೂಪ್ ಮಾಡಲು ಬಳಸಲಾಗುತ್ತಿದ್ದ ನಕಲಿ ಕಾಲ್​ ಸೆಂಟರ್​ ಒಂದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸೆಂಟರ್​ನ ಇಬ್ಬರು ಮಾಲೀಕರು ಸೇರಿದಂತೆ ಅಲ್ಲಿ ಕೆಲಸ ಮಾಡುತ್ತಿದ್ದ 65 ಜನರನ್ನು ಬಂಧಿಸಲಾಗಿದೆ. ಪಶ್ಚಿಮ ದೆಹಲಿಯ ಹರಿನಗರದಲ್ಲಿ ಈ ನಕಲಿ ಕಾಲ್​ ಸೆಂಟರ್​ ಪತ್ತೆಯಾಗಿದೆ.

    ಆರೋಪಿಗಳು ಅಮೆರಿಕದ ನಾಗರಿಕರ ವಿವರಗಳನ್ನು ಅಕ್ರಮ ವಿಧಾನಗಳಿಂದ ಸಂಗ್ರಹಿಸುತ್ತಿದ್ದರು. ಅಮೆರಿಕದ ಸರ್ಕಾರಿ ಸಂಸ್ಥೆಗಳಾದ ಎಫ್​ಬಿಐ, ಟ್ರೆಷರಿ ಡಿಪಾರ್ಟ್​ಮೆಂಟ್​, ಡ್ರಗ್ ಎನ್​ಫೋರ್ಸ್​ಮೆಂಟ್ ಏಜೆನ್ಸಿಗಳ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡಿ ಅವರ ಸೋಷಿಯಲ್ ಸೆಕ್ಯುರಿಟಿ ನಂಬರ್​ಅನ್ನು ಸಸ್ಪೆಂಡ್​ ಮಾಡುವುದಾಗಿ ಹೆದರಿಸುತ್ತಿದ್ದರು. ನಂತರ ನಿರ್ದಿಷ್ಟ ಮೊತ್ತದ ಹಣವನ್ನು ಈ-ಗಿಫ್ಟ್​ ಕಾರ್ಡ್​ಗಳ ರೂಪದಲ್ಲಿ ವರ್ಗಾಯಿಸುವಂತೆ ಹೇಳಿ ವಂಚಿಸುತ್ತಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ದೆಹಲಿ ಪೊಲೀಸರ ಭರ್ಜರಿ ಬೇಟೆ: ಲೇಡಿ ಡಾನ್ ಸೇರಿದಂತೆ ಇಬ್ಬರು ಗ್ಯಾಂಗ್​​ಸ್ಟರ್​​​​ ಬಂಧನ

    ಈ ಸೆಂಟರನ್ನು ನಡೆಸುತ್ತಿದ್ದ ಮುಖ್ಯ ಆರೋಪಿಗಳನ್ನು ಲಖನ್ ಜಗವಾನಿ ಮತ್ತು ವಿಜೇಂದರ್ ಸಿಂಗ್ ರಾವತ್ ಎಂದು ಗುರುತಿಸಲಾಗಿದೆ. ಕಾನೂನುಬಾಹಿರವಾದ ವಿಒಐಪಿ ಕಾಲಿಂಗ್ ಮತ್ತು ಕಾಲರ್ ಐಡಿ ಸ್ಪೂಫಿಂಗ್ ವಿಧಾನವನ್ನು ಬಳಸಿ ಈ ದಂಧೆ ನಡೆಸುತ್ತಿದ್ದರು. ಇವರು ವಂಚನೆ ಮಾಡಿ ಲಪಟಾಯಿಸಿರುವ ಹಣದ ಮೊತ್ತವು ಕೋಟಿಗಳಲ್ಲಿದೆ ಎಂದು ಡಿಸಿಪಿ ಊರ್ವಿಜಾ ಗೋಯಲ್ ಹೇಳಿದ್ದಾರೆ. (ಏಜೆನ್ಸೀಸ್)

    ‘ನಿನ್ನ ಮೂಳೆ ಮುರಿಯುತ್ತೇನೆ’ ಎಂದು ಎಚ್ಚರಿಕೆ ನೀಡಿದ ಟಿಎಂಸಿ ಶಾಸಕ!

    VIDEO | ಒಲಿಂಪಿಕ್ಸ್​ನಲ್ಲಿ ಕಮಲ್​ಪ್ರೀತ್​ ಕೌರ್​ರ​ ಡಿಸ್ಕಸ್​ ಥ್ರೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts