More

    ‘ನಿಮ್ಮ ಶಾಲೆಯಲ್ಲಿ ಬಾಂಬ್ ಇಟ್ಟಿದ್ದೇನೆ’ ಎಂದು ಇ-ಮೇಲ್ ಮೂಲಕ ಬೆದರಿಕೆ!

    ರಾಜಾಜಿನಗರ: ಈ ಅನಾಮಿಕ ವ್ಯಕ್ತಿ ರಾಜಾಜಿನಗರದಲ್ಲಿರುವ ಶಾಲೆಯೊಂದಕ್ಕೆ ಬೆಳ್ಳಂಬೆಳಗ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದರಿಂದ ಕೆಲಕಾಲ ಉದ್ವಿಘ್ನ ಸ್ಥಿತಿ ನಿರ್ಮಾಣ ಆಗಿತ್ತು.

    ರಾಜಾಜಿನಗರದಲ್ಲಿರುವ ಎನ್.ಪಿ.ಎಸ್ ಶಾಲೆಗೆ ಬಾಂಬ್ ಬೆ`ದರಿಕೆ ಮೇಲ್ ಬಂದ ತಕ್ಷಣ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕಾಗಮಿಸಿದ ಬಸವೇಶ್ವರನಗರ ಮತ್ತು ರಾಜಾಜಿನಗರ ಪೊಲೀಸರು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ. ಬಾಂಬ್ ಇರುವುದು ನಿಜವೋ ಸುಳ್ಳೋ ಎಂದು ಪರಿಶೀಲಿಸಲು ಶಾಲೆಗೆ ಶ್ವಾನ ದಳ ಮತ್ತು ಬಾಂಬ್ ಸ್ಕ್ವಾಡ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂದರ್ಭ ಶಾಲಾ ಕೊಠಡಿಗಳು, ಆವರಣ ಸೇರಿದಂತೆ ಎಲ್ಲಾ ಕಡೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.’

    ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ‘ರಾತ್ರಿ 8:30 ಸುಮಾರಿಗೆ ಜಿಲೇಟಿನ್ ಕಡ್ಡಿ ಇಟ್ಟು ಬ್ಲಾಸ್ಟ್ ಮಾಡೋದಾಗಿ ಮೇಲ್ ಬಂದಿದೆ. ಶಾಲೆಯವರು ಬೆಳಿಗ್ಗೆ ಮೇಲ್ ಚೆಕ್ ಮಾಡಿದ್ದಾರೆ. ಪ್ರೋಟೋಕಾಲ್ ಪ್ರಕಾರ ನಾವು ಬೆಳಿಗ್ಗೆ ಬಂದು ಎಲ್ಲಾ ಕಡೆ ಚೆಕ್‌ ಮಾಡಿದ್ದೀವಿ. ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿದ್ದೀವಿ. ಇದೊಂದು ಸುಳ್ಳು ಸುದ್ದಿ. ಇದೀಗ ಎಲ್ಲಾ ಪರಿಶೀಲನೆ ಮಾಡಿದ್ದೀವಿ. ಎಂದಿದ್ದಾರೆ.

    ಈ ಮೇಲ್ ನಲ್ಲಿ, ನನ್ನಲ್ಲಿ 4 ಡೈನಮೈಟ್ ಕಡ್ಡಿಗಳಿವೆ. ಮಧ್ಯಾಹ್ನ ಊಟದ ಹೊತ್ತು ನಾನು ಅವನ್ನು ಬ್ಲಾಸ್ಟ್ ಮಾಡುತ್ತೇನೆ. ಇಂತಿ ನಿಮ್ಮ ಪ್ರಿಯ ವಿದ್ಯಾರ್ಥಿ’ ಎಂದು ಬರೆಯಲಾಗಿತ್ತು.

    ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದು ‘ನ್ಯಾಷನಲ್ ಶಾಖೆಯ ಒಂದು ಶಾಲೆ ಇದು. ನಿನ್ನೆ ರಾತ್ರಿ ಎರಡು ಮೇಲ್ ಬಂದಿದೆ. ಒಂದರಲ್ಲಿ ಕಂಟೆಂಟ್ ಏನು ಇರಲಿಲ್ಲ. ಇನ್ನೊಂದರಲ್ಲಿ ಮೇಲ್ ಇತ್ತು. ಲಂಚ್ ಟೈಮ ನಲ್ಸಿ ಎಕ್ಸ್ ಪ್ಲೋರ್ ಮಾಡ್ತೀವಿ ಅಂತ ಇತ್ತು. ಎಲ್ಲಾ ವೆರಿಫೈ ಮಾಡಿದ್ದೀವಿ, ಯಾವುದೇ ಸಮಸ್ಯೆ ಇಲ್ಲ. ಮಕ್ಕಳನ್ನು ಸಹ ಹೊರಗಡೆ ಕಳಿಸಿದ್ದಾರೆ. ಮೇಲ್ ಯಾರು ಕಳಿಸಿದ್ದು, ಯಾತಕ್ಕಾಗಿ ಕಳಿಸಿದ್ದು ಇದೆಲ್ಲಾ ಗೊತ್ತಾಗಬೇಕಿದೆ. ಪುಣ್ಯಕ್ಕೆ ಏನು ಅವಘಡ ಆಗಿಲ್ಲ. ಪೋಷಕರಿಗೆ ತಲ್ಲಣ ಉಂಟಾಗಿತ್ತು. ಹುಡುಗಾಟಿಕೆನಾ ಏನು ಅಂತ ನೋಡಬೇಕು. ಸಿಐಡಿಗೆ ಸಹ ರೆಫರ್ ಮಾಡಲು ನಾನು ಹೇಳ್ತೀನಿ. ಯಾರು ಮಾಡಿದ್ದಾರೆ ತನಿಖೆ ಬಳಿಕ ಗೊತ್ತಾಗಬೇಕಿದೆ. ಇವತ್ತು‌ ಸಹ ಶಾಲೆಯಲ್ಲಿ ಪರಿಕ್ಷೆ ಇತ್ತು’ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts