More

    ಅಣ್ಣ ಆಮೀರ್​ ಖಾನ್​ ನನ್ನ ಪರಿಸ್ಥಿತಿ ಹೇಗಿದೆ ಅಂತಾನೂ ವಿಚಾರಿಸಿಲ್ಲ; ಫೈಸಲ್​ ಖಾನ್​

    ಬಾಲಿವುಡ್ ಸೂಪರ್​ಸ್ಟಾರ್ ಆಮೀರ್ ಖಾನ್​ ಸದ್ಯ ಲಾಲ್​ಸಿಂಗ್​ ಛಡ್ಡಾ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಅವರ ಕಿರಿ ಸಹೋದರ ಫೈಸಲ್​ ಖಾನ್​ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟು ದಿನ ನಟನೆಯಲ್ಲಿ ದಿನಕಳೆದಿದ್ದ ಫೈಸಲ್​, ಚೊಚ್ಚಲ ನಿರ್ದೇಶನದ ಫ್ಯಾಕ್ಟರಿ ಸಿನಿಮಾದತ್ತ ಗಮನಹರಿಸಿದ್ದಾರೆ. ಅಚ್ಚರಿ ವಿಚಾರ ಏನೆಂದರೆ, ತಮ್ಮನ ಸಿನಿಮಾ ಯಾವ ಹಂತದಲ್ಲಿದೆ, ಏನು ನಡೆಯುತ್ತಿದೆ, ಹಣಕಾಸಿನ ನೆರವು ಬೇಕಿದೆಯಾ ಹೀಗೆ ಒಂದೇ ಒಂದು ವಿಚಾರವನ್ನೂ ಆಮೀರ್ ಕೇಳಿಲ್ಲವಂತೆ.

    ಇದನ್ನೂ ಓದಿ: video/ ನಟಿ ಸಂಜನಾ ಬಂಧನ ಬೆನ್ನಲ್ಲೇ ವಿಡಿಯೋವೊಂದು ವೈರಲ್​

    ಹೌದು, ಇಲ್ಲಿಯವರೆಗೂ ಅಸಿಸ್ಟಂಟ್​ ನಿರ್ದೇಶಕರಾಗಿ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಫೈಸಲ್​, ಇದೀಗ ಫ್ಯಾಕ್ಟರಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವೂ ಆಮೀರ್​ ಖಾನ್​ ಫಿಲಂಸ್​ ಅಡಿಯಲ್ಲಿಯೇ ನಿರ್ಮಾಣವಾಗಿರಬಹುದೆಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅದಕ್ಕೆ ಫೈಸಲ್​ ಈ ರೀತಿ ಉತ್ತರಿಸಿದ್ದಾರೆ.

    ಇದನ್ನೂ ಓದಿ: ತೆಲುಗಿನ ಖ್ಯಾತ ನಟ ಜಯಪ್ರಕಾಶ್ ರೆಡ್ಡಿ ನಿಧನ

    ‘ಆಮೀರ್ ಖಾನ್​ ಪ್ರೊಡಕ್ಷನ್​ ಬಿಟ್ಟು ಆರು ವರ್ಷಗಳಾದವು. ನಾನು ಅವರ ಪ್ರೊಡಕ್ಷನ್​ನಲ್ಲಿ ಯಾವುದೇ ಸಿನಿಮಾ ಮಾಡುತ್ತಿಲ್ಲ. ನಾನೀಗ ನನ್ನ ನಿರ್ದೇಶನದ ಸಿನಿಮಾದಲ್ಲಿ ಬಿಜಿಯಾಗಿದ್ದೇನೆ. ಈ ಸಿನಿಮಾ ಬಗ್ಗೆ ಅಣ್ಣ ನನ್ನ ಬಳಿ ಏನನ್ನೂ ಚರ್ಚೆ ಮಾಡಿಲ್ಲ. ಹಣಕಾಸು ವಿಚಾರದಲ್ಲಿಯೂ ಕೈ ಜೋಡಿಸಿಲ್ಲ ಮತ್ತು ಚಿತ್ರದ ಸ್ಕ್ರಿಪ್ಟ್ ವಿಚಾರದಲ್ಲಿ ಯಾವುದೇ ಕ್ರಿಯೇಟಿವ್​ ಐಡಿಯಾಗಳನ್ನು ನೀಡಿಲ್ಲ. ನನ್ನ ಪರಿಸ್ಥಿತಿ ಹೇಗಿದೆ ಅಂತಾನೂ ಕೇಳಿಲ್ಲ’ ಎಂದಿದ್ದಾರೆ. (ಏಜೆನ್ಸೀಸ್​)

    ಲಾಕ್​ಡೌನ್​ ಥೀಮ್​ನಲ್ಲಿ ಇರಲಿದೆ ಈ ಸಲದ ಹಿಂದಿ ಬಿಗ್​ಬಾಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts