More

    ಗಣಪತಿ ಮಂಟಪಕ್ಕೆ ಜಾಗ ಒದಗಿಸಿ – ಗ್ರಾಪಂಗೆ ಒತ್ತಾಯ

    ಹಿರೇಬಾಗೇವಾಡಿ: ಇಲ್ಲಿನ ಫಡಿಬಸವೇಶ್ವರ ನಗರದ ಅಂಗನವಾಡಿ ಪಕ್ಕದಲ್ಲಿರುವ ಖುಲ್ಲಾ ಜಾಗವನ್ನು ಗಣಪತಿ ಮಂಟಪ ನಿರ್ಮಿಸಲು ಮೀಸಲಿಡಬೇಕು ಎಂದು ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಬುಧವಾರ ಮನವಿ ಸಲ್ಲಿಸಿದರು.

    ಫಡಿಬಸಬಸವೇಶ್ವರ ನಗರದಲ್ಲಿ ಒಟ್ಟು 8 ಗುಂಟೆ ಜಾಗ ಸಾರ್ವಜನಿಕ ಉಪಯೋಗಕ್ಕೆ ಬಿಡಲಾಗಿತ್ತು. ಅದರಲ್ಲಿ ಅಂಗನವಾಡಿ, ನೀರಿನ ಟ್ಯಾಂಕ್, ಕುಡಿಯುವ ನೀರಿನ ಫಿಲ್ಟರ್ ಸೇರಿ ಇತರ ಸಾರ್ವಜನಿಕ ಉಪಯೋಗಕ್ಕೆ ಬಳಸಿ 1 ರಿಂದ 1.5 ಗುಂಟೆ ಮಾತ್ರ ಖುಲ್ಲಾ ಜಾಗ ಉಳಿದಿದೆ. ಅದನ್ನು ಗಣೇಶೋತ್ಸವ ಸಂದರ್ಭದಲ್ಲಿ ಗಣಪತಿ ಮಂಟಪ ನಿರ್ಮಿಸಲು ಹಾಗೂ ಇನ್ನುಳಿದ ಸಮಯದಲ್ಲಿ ಗಣಪತಿ ಮಂಟಪದ ಸಾಮಗ್ರಿ ಸಂಗ್ರಹಿಸಲು ಮತ್ತು ಅಂಗನವಾಡಿ ಮಕ್ಕಳು ಆಟವಾಡಲು ಮೀಸಲಿಡಲು ಗ್ರಾಪಂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮೂಲಕ ಒತ್ತಾಯಿಸಿದರು.

    ಗಿರಿಜಾ ಮಠಪತಿ, ಗ್ರಾಮ ಪಂಚಾಯಿತಿ ಸದಸ್ಯ ಸಿದ್ಧಪ್ಪ ಹುಕ್ಕೇರಿ, ಸಂಜಯ ದೇಸಾಯಿ, ಈಶ್ವರ ಕಾಗಿ, ಪರಶುರಾಮ ಉಪ್ಪಾರ, ಚಂದ್ರು
    ರೇವಣಕರ, ಪ್ರಕಾಶ ನಾವಲಗಿ, ಸಂತೋಷ ನಾವಲಗಿ, ಅಶೋಕ ನಾವಲಗಿ, ಮಾಲಾ ಗಾಣಗಿ, ಜಯಶ್ರೀ ಪತ್ತಾರ, ಸುಶೀಲಾ ಉಪ್ಪಾರ, ಕಲ್ಪನಾ ನಂದಿಹಳ್ಳಿ, ಚೈತ್ರಾ ಬಡಿಗೇರ, ಕವಿತಾ ನಾವಲಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts