More

    ಲವ್​ ಜಿಹಾದ್​ ಹೆಸರಿನಲ್ಲಿ ವೈರಲ್​ ಆಗಿರುವ ಯುವತಿ ಫೋಟೋಗಳ ಅಸಲಿ ಕಹಾನಿಯೇ ಬೇರೆ!

    ನವದೆಹಲಿ: ಮಹಿಳೆಯೊಬ್ಬಳ ಮದುವೆಗೆ ಸಂಬಂಧಿಸಿದ ಮತ್ತು ಆಕೆಯ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾದ ಸರಣಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯು ಕೇರಳದ ಲವ್​ ಜಿಹಾದ್​ ಸಂತ್ರಸ್ತೆ ಎಂದು ಹೇಳಲಾಗಿದೆ. ಆದರೆ, ಫೋಟೋ ಕುರಿತಾದ ಅಸಲಿಯತ್ತು ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಗಿದೆ. ​

    ಸರಣಿ ಫೋಟೋಗಳನ್ನು ಹರಿಬಿಟ್ಟು ಹಿಂದಿಯಲ್ಲಿ ಅಡಿಬರಹ ಬರೆಯಲಾಗಿದ್ದು, ಅದರ ಸಾರ ಹೀಗಿದೆ. ಕೇರಳದ ಲವ್​ ಜಿಹಾದ್​ನ ಮತ್ತೋರ್ವ ಸಂತ್ರಸ್ತೆ. ನನ್ನ ಪ್ರಿಯಕರ ಇತರೆ ಮುಸ್ಲಿಮರ ರೀತಿಯಲ್ಲ ಎಂದು ಆರಂಭದಲ್ಲಿ ಎಲ್ಲ ಯುವತಿಯರು ಹೇಳುತ್ತಾರೆ. ಆದರೆ, ಕೊನೆಯಲ್ಲಿ ಅವರ ಕಣ್ಣುಗಳು ತೆರೆಯುತ್ತವೆ. ಅಷ್ಟರಲ್ಲಾಗಲೇ ಅವರು ಕೊಲೆಯಾಗಬಹುದು, ಸೂಟ್​ಕೇಸ್​ನಲ್ಲಿ ಮುಚ್ಚಿಹೋಗಬಹುದು ಅಥವಾ ಮಾರಾಟವಾಗಬಹುದು ಮತ್ತು ಮಗು ಹೆರುವ ಯಂತ್ರವಾಗಿಬಿಡಬಹುದು ಎಂದು ಬರೆದುಕೊಂಡಿದ್ದಾರೆ. ವೈರಲ್​ ಆಗಿರುವ ಫೋಟೋಗಳನ್ನು ನೀವಿಲ್ಲ ಕಾಣಬಹುದಾಗಿದೆ.

    ಲವ್​ ಜಿಹಾದ್​ ಹೆಸರಿನಲ್ಲಿ ವೈರಲ್​ ಆಗಿರುವ ಯುವತಿ ಫೋಟೋಗಳ ಅಸಲಿ ಕಹಾನಿಯೇ ಬೇರೆ!

    ಈ ಕುರಿತು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ಇದೊಂದು ಅಪಪ್ರಚಾರದ ತಂತ್ರವಾಗಿದೆ ಎಂದು ತಿಳಿದುಬಂದಿದೆ. ಅಂದಹಾಗೆ ವೈರಲ್​ ಫೋಟೋದಲ್ಲಿರುವ ಯುವತಿ ಬಾಂಗ್ಲಾದೇಶದ ಢಾಕಾ ಮೂಲದವಳು. ವರದಕ್ಷಿಣೆ ವಿಚಾರವಾಗಿ ಪತ್ನಿ ಮತ್ತು ಅತ್ತೆಯ ಮನೆಯವರು ಪ್ರತಿದಿನ ಆಕೆಗೆ ಕಿರುಕುಳ ನೀಡುತ್ತಾರೆ. ಹಿಂದು ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದಾಳೆಂದು ಹೇಳಲು ಯಾವುದೇ ನಂಬಿಕಾರ್ಹ ಮೂಲಗಳಿಲ್ಲ.

    ಗೂಗಲ್​ ರಿವರ್ಸ್​ ಇಮೇಜ್​ ಸರ್ಚ್​ ಇಂಜಿನ್​ನಲ್ಲಿ ಫೋಟೋವನ್ನು ಹುಡುಕಿದಾಗ ವೈರಲ್​ ಆಗಿರುವ ಇದೇ ಫೋಟೋ ಢಾಕಾ ಟ್ರಿಬ್ಯುನ್​ನಲ್ಲಿ ಪ್ರಕಟವಾಗಿರುವುದು ಕಂಡುಬಂದಿದೆ. ಜೂನ್​ 26ರಂದು ಪ್ರಕಟವಾಗಿರುವ ವರದಿಯ ಪ್ರಕಾರ ಯುವತಿಯ ಹೆಸರು ಸುಮೈಯಾ ಹಸನ್​. ಈಕೆಯೆ ಢಾಕಾದ ಗೃಹಿಣಿ. ಆಕೆಯ ಮೇಲೆ ಪತಿ ಜಹಿದ್​ ಹಸನ್​ ಮತ್ತು ಆತನ ಕುಟುಂಬದವರು ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಾರೆಂದು ದೂರಲಾಗಿದ್ದು, ಆರೋಪಿ ಪತಿ ಜಹಿದ್​ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆಂದು ವರದಿಯಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಢಾಕಾ ಪೊಲೀಸರು ಸುಮೈಯಾ ಐದು ವರ್ಷಗಳ ಹಿಂದೆ ಫೇಸ್​ಬುಕ್​ನಲ್ಲಿ ಪರಿಚಯವಾದ ಜಹೀದ್​ನೊಂದಿಗೆ ವರ್ಷದ ಹಿಂದೆ ಮದುವೆಯಾದಳು. ಕೆಲ ದಿನಗಳವರೆಗೆ ಪತಿ ಚೆನ್ನಾಗಿಯೇ ಇದ್ದ. ಆದರೆ, ಬರುತ್ತಾ ಕಿರುಕುಳ ನೀಡಲು ಆರಂಭಿಸಿದ. ಇದರ ನಡುವೆ ಒಮ್ಮೆ ದೂರು ಸಹ ನೀಡಿದ್ದಳು. ಇದರ ನಡುವೆ ಜೂನ್​ 27ರಂದು ಢಾಕಾ ಟ್ರಿಬ್ಯುನ್​ ವರದಿ ಪ್ರಕಟಿಸಿ ಜಮೈಯಾ ಮೇಲೆ ನಡೆದಿರುವ ದೌರ್ಜನ್ಯದ ಫೋಟೋಗಳನ್ನು ಪ್ರಕಟಿಸಿತ್ತು. ಸುಮೈಯಾ ಸಹ ತನ್ನ ಫೇಸ್​ಬುಕ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಂಡ ಪತಿಯ ಕ್ರೂರತ್ವವನ್ನು ಹೊರ ಜಗತ್ತಿಗೆ ತಿಳಿಸಿದ್ದಳು.

    ಇನ್ನು ವೈರಲ್​ ಫೋಟೋದಲ್ಲಿರುವ ಯುವತಿ ಹಿಂದುಗೆ ಸೇರಿದವಳು ಎಂಬುದಕ್ಕೆ ಎಲ್ಲಿಯೂ ಪುರಾವೆಗಳಿಲ್ಲ. ಅಲ್ಲದೆ, ನಂಬಲಾದ ಮೂಲಗಳೂ ಇಲ್ಲ. ಹೀಗಾಗಿ ಸ್ಪಷ್ಟವಾಗುವುದೆಂದರೆ ವೈರಲ್​ ಆಗಿರುವ ಚಿತ್ರದಲ್ಲಿರುವ ಮಹಿಳೆಗೂ ಕೇರಳದ ಲವ್​ ಜಿಹಾದ್​ಗೂ ಸಂಬಂಧವಿಲ್ಲ. ಇದೊಂದು ಅಪಪ್ರಚಾರದ ತಂತ್ರವಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    4 ವರ್ಷ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದು ಮದ್ವೆಯಾದ ಕೆಲವೇ ತಿಂಗಳಲ್ಲಿ ಬರ್ಬರ ಹತ್ಯೆಯಾದ ನವವಿವಾಹಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts